ಕರುನಾಡು ಘರ್ಜನೆ ಸುದ್ದಿ ಬ್ಯಾಡಿಗಿ :ದಿ 3 ವಡ್ಡರ ಓಣಿ ಅಂಗನವಾಡಿ ಕೇಂದ್ರದ ಶಾಲಾ ಪೂರ್ವ ಶಿಕ್ಷಣಕ್ಕೆ ಬರುವ ಮಕ್ಕಳ ಪೋಷಕರು ಆದ ನಾವು ಮತ್ತು ಕರ್ನಾಟಕ ದಲಿತ ಪರಿವರ್ತನವಾದ ಸಮಿತಿ (ರಿ) ಇವರು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಕೇಂದ್ರದ ಸುತ್ತ ಮುತ್ತಲು ಕಸ ಭಯದ ವಾತಾವರಣವಿದೆ ಮತ್ತು ಹಾಳು ಬಿದ್ದ ಮನೆಗಳು ಇವೆ ಇಲ್ಲಿ ಪದೇ ಪದೇ ವಿಷಯಕಾರಿ ಹಾವುಗಳು ಕಾಣುತ್ತಿರುತ್ತವೆ. ಸಣ್ಣ ಮಕ್ಕಳನ್ನು ಶಾಲೆಗೆ ಕಳಿಸಲು’ ನಮ್ಮಗೆ ಭಯ ಆಗುತ್ತದೆ. ನಾಳೆ ಎನ್ನಾದರೂ ನಮ್ಮ ಮಕ್ಕಳಿಗೆ ಸಾವು ನೂವು ಆದರೇ ಇದರ ಹೊಣೆ ಯಾರದು? ಈ ಶಾಲೆಗೆ ಬರುವ ದಾರಿಯಲ್ಲಿ ಢಾಭಾ ದಿಂದ ಬರುವ ಮುಸರೇ ನೀರು ಕಾಲುವೆ ಮೂಲಕ ಬರುವುದರಿಂದ ವಾಸನೆ ಬರುತ್ತಿದ್ದು. ಈ ವಾಸನೆ & ಕಳಕು ವ್ಯವಸ್ಥೆಯಿಂದ ದೆಂಗು ಹಾಗೂ ಮಲೇರಿಯಾ ಬರುವಂತ ಸಾಧ್ಯತೆ ತುಂಬಾನೇ ಎದ್ದು ಕಾಣುತ್ತದೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಶಾಲಾ ಮುಂದಿನ ಆವರಣವು ತುಂಬಾ ಹದಕೆಡಿದೆ ಮಕ್ಕಳ ವಿರಾಮ ಸಮಯದಲ್ಲಿ ಆಟ ಆಡಲು ಬಹಳ ತೊಂದರೆ ಉಂಟಾಗುತ್ತದೆ. ಇಲ್ಲಿನ ಈ ವಾತಾವರಣಕ್ಕೆ ಹಲವರು ಕೆಟ್ಟದಾದ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ದಯಾಳುಗಳಾದ ತಾವುಗಳು ಇಲ್ಲಿಗೆ ಒಮ್ಮೆ ಬೇಟಿ ನೀಡಿ ಈ ಅವ್ಯವಸ್ಥೆಯನ್ನು ನೋಡಿ ಇಲ್ಲಿನ ಮಕ್ಕಳ ವಿದ್ಯಾಭಾಗ್ಯದ ಸಲುವಾಗಿ & ಮಕ್ಕಳ ಹಿತದೃಷ್ಟಿಯನ್ನು ಸರಿಪಡಿಸಬೇಕಾಗಿ ತಮ್ಮಲ್ಲಿ ವಿನಯದಿಂದ ಕೇಳಿಕೊಳ್ಳುತ್ತಿದೇವೆ ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ( ಪರಿವರ್ತನವಾದ ) ಬ್ಯಾಡಗಿ ತಾಲೂಕು ಸಮಿತಿ ಪ್ರಧಾನ ಸಂಚಾಲಕರ ಚಂದ್ರಶೇಖರ್ ಪರಶುರಾಮ್ ಗದಗಕರಬ್ಯಾಡಗಿ ನಗರದ ವಡ್ಡರ ಅಂಗನವಾಡಿದ ಆಗಮಿಸಿದಂತಹ ಪೋಷಕರು 1) ನಾಗರಾಜ್ ಬುಡಚಿ 2) ಸೀಮಾ ಕನವಳ್ಳಿ 3) ಮಹೇಶ್ ದೇವರಗುಡ್ಡ 4) ಅನಿತಾ ಆರ್ ಕೋಲಾಕಾರ್ 5) ಮಂಜುಳ ಬಂಗಾರ ಗುಂಡು6) ರಿಯಾಜ್ ಕೋಳೂರು 8) ಲಲಿತವ್ವ ದಾವಣಗೆರೆ 9) ಸಲೀಂ ದೊಡ್ಮನಿ 10 ಮೀನಾಕ್ಷಿ ನಾಗರಾಜ್ ಗೋಳಾರ್ 11) ಸರೋಜಾ ಮಾಲತೇಶ್ ರಾಣೇಬೆನ್ನೂರು ಮತ್ತು ಉಪಸ್ಥಿತರಿದ್ದರು