Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಎಸ್‌ಐಆರ್ ಕಾರ್ಯದಿಂದ ಸರ್ಕಾರಿ ಶಿಕ್ಷಕರನ್ನು ಶೀಘ್ರ ಬಿಡುಗಡೆ ಮಾಡಿ ಶಾಲೆಗಳಿಗೆ ಕಳುಹಿಸಿ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ : ಸಾಮಾಜಿಕ ಕಾರ್ಯಕರ್ತ ಸೈಯದ್ ಖಾಲಿದ್ ಕೊಪ್ಪಳ ಆಗ್ರಹ

ಕರುನಾಡು ಘರ್ಜನೆ ಸುದ್ದಿ ಗದಗ, ಜುಲೈ 17: ರಾಜ್ಯದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸರ್ಕಾರಿ ಶಾಲಾ ಶಿಕ್ಷಕರನ್ನು ಆದಷ್ಟು ಬೇಗ ಕರ್ತವ್ಯದಿಂದ ಬಿಡುಗಡೆ ಮಾಡಿ, ತಮ್ಮ ಮೂಲ ಶಾಲೆಗಳಿಗೆ ಮರಳಿಸುವಂತೆ ಸಾಮಾಜಿಕ ಕಾರ್ಯಕರ್ತ ಸೈಯದ್…

ಕರುನಾಡು ಘರ್ಜನೆ ಸುದ್ದಿ ಗದಗ, ಜುಲೈ 17: ರಾಜ್ಯದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸರ್ಕಾರಿ ಶಾಲಾ ಶಿಕ್ಷಕರನ್ನು ಆದಷ್ಟು ಬೇಗ ಕರ್ತವ್ಯದಿಂದ ಬಿಡುಗಡೆ ಮಾಡಿ, ತಮ್ಮ ಮೂಲ ಶಾಲೆಗಳಿಗೆ ಮರಳಿಸುವಂತೆ ಸಾಮಾಜಿಕ ಕಾರ್ಯಕರ್ತ ಸೈಯದ್ ಖಾಲಿದ್ ಕೊಪ್ಪಳ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ರಾಜ್ಯದ ಅನೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ಶಾಲೆಗಳು ಆರಂಭವಾಗಿ ಸುಮಾರು ಒಂದು ತಿಂಗಳು ಕಳೆದರೂ ಸಾವಿರಾರು ಸರ್ಕಾರಿ ಶಾಲೆಗಳ ಬಡ ಮಕ್ಕಳು ಸಮರ್ಪಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

 

ಎಸ್‌ಐಆರ್ ಪ್ರಕ್ರಿಯೆಯ ನೆಪದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆಗೆ ಧಕ್ಕೆಯಾಗಬಾರದು. ಇದೇ ರೀತಿಯಲ್ಲಿ ಶಿಕ್ಷಕರನ್ನು ದೀರ್ಘಾವಧಿಗೆ ಚುನಾವಣಾ ಕಾರ್ಯಗಳಿಗೆ ಬಳಸಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಮೇಲಿನ ಸಾರ್ವಜನಿಕರ ವಿಶ್ವಾಸ ಕುಗ್ಗುವ ಆತಂಕವಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರ ಸಂಖ್ಯೆ ಸಾಕಷ್ಟಿದೆ. ಅಗತ್ಯವಿದ್ದಲ್ಲಿ ಚುನಾವಣಾ ಆಯೋಗವು ಅಂತಹ ಯುವಕರ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಚುನಾವಣಾ ಕಾರ್ಯಗಳನ್ನು ನಿರ್ವಹಿಸಬಹುದು. ಇದರಿಂದ ಸರ್ಕಾರಿ ಶಾಲೆಗಳ ಶಿಕ್ಷಣಕ್ಕೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ಮನವಿ

ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಮತದಾರರಿಗೂ ಸೈಯದ್ ಖಾಲಿದ್ ಕೊಪ್ಪಳ ಅವರು ಮನವಿ ಮಾಡಿದ್ದು, ಎಸ್‌ಐಆರ್ ಎನ್ಯುಮರೇಷನ್ ಫಾರ್ಮ್‌ಗಳ ಸಲ್ಲಿಕೆ ದಿನಾಂಕ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ವಿಳಂಬ ಮಾಡದೆ, ತಮ್ಮ ಬಳಿ ಇರುವ ಫಾರ್ಮ್‌ಗಳನ್ನು ಇಂದು ಅಥವಾ ನಾಳೆಯೊಳಗೆ ಸಂಬಂಧಿಸಿದ ಬಿ.ಎಲ್.ಒ. (BLO) ಅವರಿಗೆ ಸಲ್ಲಿಸುವಂತೆ ಕೋರಿದರು.

 

ಪ್ರಸ್ತುತ ಬಿ.ಎಲ್.ಒ.ಗಳಾಗಿ ಕಾರ್ಯನಿರ್ವಹಿಸುತ್ತಿರುವವರು ಹೆಚ್ಚಾಗಿ ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಸಿಬ್ಬಂದಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಶಿಕ್ಷಕರು ಶಾಲೆಗಳಿಂದ ದೂರವಿರುವ ಕಾರಣ ಮಕ್ಕಳು ಪಾಠದಿಂದ ವಂಚಿತರಾಗಿದ್ದಾರೆ. ಇದೇ ರೀತಿ ಅನೇಕ ಸರ್ಕಾರಿ ಕಚೇರಿಗಳಲ್ಲಿಯೂ ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತಿವೆ ಎಂದು ಅವರು ಹೇಳಿದರು.

ಆದ್ದರಿಂದ ಪ್ರತಿಯೊಬ್ಬ ಮತದಾರರು ತಮ್ಮ ಜವಾಬ್ದಾರಿಯನ್ನು ಅರಿತು ಎನ್ಯುಮರೇಷನ್ ಫಾರ್ಮ್‌ಗಳನ್ನು ಶೀಘ್ರವಾಗಿ ಸಲ್ಲಿಸಬೇಕು. ಇದರಿಂದ ಶಿಕ್ಷಕರು ಶಾಲೆಗಳಿಗೆ ಮರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಬಹುದು ಹಾಗೂ ಸರ್ಕಾರಿ ಸಿಬ್ಬಂದಿಯೂ ತಮ್ಮ ಮೂಲ ಕರ್ತವ್ಯಕ್ಕೆ ಮರಳಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಅವಕಾಶವಾಗುತ್ತದೆ.

“ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣಕ್ಕೂ ಮತದಾರರ ಪಟ್ಟಿಯ ಪರಿಷ್ಕರಣೆಯಷ್ಟೇ ಮಹತ್ವವಿದೆ. ಆದ್ದರಿಂದ ಎಲ್ಲರೂ ಸಹಕರಿಸಿ ಫಾರ್ಮ್‌ಗಳನ್ನು ತಕ್ಷಣ ಸಲ್ಲಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಖಾಲಿದ್ ಕೊಪ್ಪಳ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Editor

Leave a comment