Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ I ಜಿಲ್ಲೆಯಲ್ಲಿ 902947 ಎನ್ಯುಮರೇಶನ್ ಫಾರ್ಮ ವಿತರಣೆ : ಶೇ 100 ರಷ್ಟು ಸಾಧನೆ.

774971 ಎನ್ಯುಮರೇಶನ್ ಫಾರ್ಮಗಳ ಡಿಜಟಲೀಕರಣ : ಶೇ 85.83 ರಷ್ಟು ಪ್ರಗತಿ ಕರುನಾಡು ಘರ್ಜುನೆ ಸುದ್ದಿ ಗದಗ ಜುಲೈ 29: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಂತೆ ಜಿಲ್ಲೆಯಲ್ಲಿ ಜುಲೈ 29 ರವರೆಗೆ 9,02,947 ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸಲಾಗಿದ್ದು…

774971 ಎನ್ಯುಮರೇಶನ್ ಫಾರ್ಮಗಳ ಡಿಜಟಲೀಕರಣ : ಶೇ 85.83 ರಷ್ಟು ಪ್ರಗತಿ

ಕರುನಾಡು ಘರ್ಜುನೆ ಸುದ್ದಿ ಗದಗ ಜುಲೈ 29: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಂತೆ ಜಿಲ್ಲೆಯಲ್ಲಿ ಜುಲೈ 29 ರವರೆಗೆ 9,02,947 ಎನ್ಯುಮರೇಷನ್ ಫಾರ್ಮಗಳನ್ನು ವಿತರಿಸಲಾಗಿದ್ದು ಶೇ 100 ಸಾಧನೆಯಾಗಿದೆ. 774971 ಎನ್ಯುಮರೇಷನ್ ಫಾರ್ಮಗಳನ್ನು ಡಿಜಟಲೀಕರಣಗೊಳಿಸಲಾಗಿದ್ದು ಶೇ 85.83 ರಷ್ಟು ಪ್ರಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ( ಎಸ್. ಐ.ಆರ್.) ಕುರಿತು ಪತ್ರಿಕಾಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಗತಿಯಲ್ಲಿದ್ದು ಜಿಲ್ಲೆಯಲ್ಲಿ ಒಟ್ಟು 9,02,947 ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ. 967 ಮತಗಟ್ಟೆಗಳಿವೆ. ಭಾರತೀಯ ಚುನಾವಣಾ ಆಯೋಗದ ಆದೇಶದನ್ವಯ ಬಿ.ಎಲ್.ಓಗಳು ಅಗಸ್ಟ್ 8 ರವರೆಗೆ ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ ವಿತರಿಸುವ ಕಾರ್ಯವನ್ನು ವಿಸ್ತರಿಸಲಾಗಿದೆ. ಎಸ್‌ಐಆರ್ -2026ರ ಪ್ರಕ್ರಿಯೆ ಬಗ್ಗೆ ಊಹಾಪೋಹಗಳಿಗೆ ಕಿವಿ ಕೊಡದೇ ಎಸ್‌ಐಆರ್ ಬಗ್ಗೆ ಚುನಾವಣಾ ಆಯೋಗದಿಂದ ಹೊರಡಿಸಲಾದ ವೇಳಾಪಟ್ಟಿಯಂತೆ ಎಲ್ಲರೂ ಸಂಬAಧಿಸಿದ ಬಿಎಲ್‌ಓ ಗಳಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕು. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅತ್ಯಂತ ಪಾರದರ್ಶಕವಾದ ಮತ್ತು ನಿಖರವಾದ ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಎಸ್.ಐ.ಆರ್.ಗೆ ಸಂಬAಧಿತ ವಿವರವನ್ನು ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು.

ಎಸ್‌ಐಆರ್ ಚಟುವಟಿಕೆಗಳ ಪರಿಷ್ಕೃತ ವೇಳಾಪಟ್ಟಿ : ಅರ್ಹತಾ ದಿನಾಂಕ ಅಕ್ಟೋಬರ್ 1 ಆಗಿದ್ದು, ಈಗಾಗಲೇ ಜೂನ್ 20 ರಿಂದ 29 ರವರೆಗೆ ತರಬೇತಿ ಮತ್ತು ಮುದ್ರಣ ಕಾರ್ಯ ಕೈಗೊಳ್ಳಲಾಗಿದೆ. ಅಗಸ್ಟ 8 ರವರೆಗೆ ಬಿ.ಎಲ್.ಓ ಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಶನ್ ಫಾರ್ಮ ವಿತರಿಸಲಿದ್ದಾರೆ. ಅಗಸ್ಟ್ 8 ರೊಳಗಾಗಿ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ಜರುಗಲಿದೆ. ಅಗಸ್ಟ 17 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಅಗಸ್ಟ 17 ರಿಂದ ಸೆಪ್ಟೆಂಬರ್ 16 ರವರಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಅಗಸ್ಟ 17 ರಿಂದ ಅಕ್ಟೋಬರ್ 15 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿಗೊಳಿಸಲಾಗುವುದು. ಅಕ್ಟೋಬರ್ 19 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೊಳ್ಳಲಿದೆ.

ಎನ್ಯುಮರೇಶನ್ ಫಾರ್ಮಗಳ ವಿತರಣೆ ವಿವರ: ಜಿಲ್ಲೆಯಲ್ಲಿ ಒಟ್ಟು 902947 ಮತದಾರರಿದ್ದು ಒಟ್ಟು 967 ಮತಗಟ್ಟೆಗಳಿವೆ. ಜುಲೈ 29 ರವರಗೆ 902947 ಎನ್ಯುಮರೇಶನ್ ಫಾರ್ಮಗಳ ವಿತರಣೆಯಾಗಿದ್ದು ಶೇ 100 ರಷ್ಟು ಪ್ರಗತಿ ಸಾಧಿಸಲಾಗಿದೆ. ಆ ಪೈಕಿ ವಿಧಾನಸಭಾ ಕ್ಷೇತ್ರ ವಾರು ಎನ್ಯುಮರೇಶನ್ ಫಾರ್ಮಗಳ ವಿತರಣೆ ವಿವರ ಇಂತಿದೆ: ಶಿರಹಟ್ಟಿ – 230268, ಗದಗ- 233829, ರೋಣ-243180, ನರಗುಂದ-195670.
ಎನ್ಯುಮರೇಶನ್ ಫಾರ್ಮಗಳ ಡಿಜಟಲೀಕರಣದ ವಿವರ : ಜಿಲ್ಲೆಯಲ್ಲಿ 774971 ಎನ್ಯುಮರೇಶನ್ ಫಾರ್ಮಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು ಶೇ 85.83 ರಷ್ಟು ಪ್ರಗತಿ ಸಾಧಿಸಲಾಗಿದೆ. ಆ ಪೈಕಿ ವಿಧಾನಸಭಾ ಕ್ಷೇತ್ರವಾರು ವಿವರ ಇಂತಿದೆ: ಶಿರಹಟ್ಟಿ- 200222, ಗದಗ- 193722, ರೋಣ- 206733, ನರಗುಂದ-174294.
ವಿವಿಧ ಕಾರಣಗಳಿಂದ ಸಂಗ್ರಹಿಸಲು ಸಾಧ್ಯವಾಗದ ( uncollectable forms ) ಎನ್ಯುಮರೇಶನ್ ಫಾರ್ಮಗಳ ವಿವರ : ಮತದಾರರು ಮರಣ ಹೊಂದಿರುವುದು, ಮತದಾರರ ಶಾಶ್ವತವಾಗಿ ಸ್ಥಳಾಂತರಗೊAಡಿರುವುದು, ಈಗಾಗಲೇ ಮತದಾರರ ಹೆಸರು ಇನ್ನೊಂದು ಕಡೆ ನೊಂದಣಿಯಾಗಿರುವುದು, ಗೈರು ಹೀಗೆ ವಿವಿಧ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಸಂಗ್ರಹಿಸಲು ಸಾಧ್ಯವಾಗದೇ ಇರುವ 115655 ಎನ್ಯುಮರೇಶನ್ ಫಾರ್ಮಗಳಿವೆ. ಆ ಪೈಕಿ ವಿಧಾನಸಭಾ ಕ್ಷೇತ್ರವಾರು ವಿವರ ಇಂತಿದೆ; ಶಿರಹಟ್ಟಿ – 29322, ಗದಗ- 33407, ರೋಣ- 33334, ನರಗುಂದ- 19592. ಮತದಾರರ ಮರಣ, ಸ್ಥಳಾಂತರ, ಹೆಸರು ಈಗಾಗಲೇ ಮತ್ತೊಂದು ಕಡೆ ನೋಂದಣಿ, ಗೈರು , ವಿವಿಧ ಕಾರಣಗಳಿಂದ ಸಂಗ್ರಹಿಸಲು ಸಾಧ್ಯವಾಗದ 115655 ಎನ್ಯುಮರೇಶನ್ ಫಾರ್ಮಗಳಿವೆ. 29907 ಮರಣ ಹೊಂದಿದ ಮತದಾರರು, ಶಾಶ್ವತವಾಗಿ ಸ್ಥಳಾಂತರಗೊAಡ 66286 ಮತದಾರರು, ಈಗಾಗಲೇ ಇನ್ನೊಂದು ಕಡೆ ಹೆಸರು ನೋಂದಣಿಯಾದ 13240 ಮತದಾರರು , 5853 ಗೈರು ಮತದಾರರು ಹಾಗೂ ವಿವಿಧ ಕಾರಣಗಳಿಂದ 369 ಮತದಾರರ ಎನ್ಯುಮರೇಶನ್ ಫಾರ್ಮ್ಗಳ ಸಂಗ್ರಹಿಸಲು ಸಾಧ್ಯವಾಗದೇ ಇರುವುದರಿಂದ ಒಟ್ಟಾರೆಯಾಗಿ 115655 ಸಂಗ್ರಹಿಸಲು ಸಾಧ್ಯವಾಗದ ಎನ್ಯುಮರೇಶನ್ ಫಾರ್ಮಗಳಿವೆ.

ಮತದಾರರ ನೆರವು ಕೇಂದ್ರ ಕಾರ್ಯನಿರ್ವಹಣೆ ಹಾಗೂ ಬಿ.ಎಲ್.ಓಗಳ ನೆರವು ಕೇಂದ್ರಗಳ ಕಾರ್ಯನಿರ್ವಹಣೆ : ಜಿಲ್ಲೆಯಲ್ಲಿ ಒಟ್ಟು 967 ಮತಗಟ್ಟೆಗಳಿದ್ದು 967 ಬಿ.ಎಲ್.ಓಗಳನ್ನು ನಿಯಮಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ವಿವರ ಇಂತಿದೆ: ಶಿರಹಟ್ಟಿ- 252, ಗದಗ-226, ರೋಣ-269, ನರಗುಂದ- 220.
97 ಬಿ.ಎಲ್.ಓ ಗಳ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಆ ಪೈಕಿ ವಿಧಾನಸಭಾ ಕ್ಷೇತ್ರವಾರು ವಿವರ ಇಂತಿದೆ: ಶಿರಹಟ್ಟಿ- 25, ಗದಗ-23, ರೋಣ-27, ನರಗುಂದ- 22.
ಜಿಲ್ಲೆಯಲ್ಲಿ 967 ಮತದಾರರ ನೆರವು ಕೇಂದ್ರಗಳನ್ನು ಗುರುತಿಸಲಾಗಿದೆ. 161 ಬಿ.ಎಲ್.ಓಗಳ ನೆರವು ಕೇಂದ್ರಗಳನ್ನು ಗುರುತಿಸಲಾಗಿದೆ.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಸೇರಿದಂತೆ ವಿಧಾನಸಭಾ ಮತಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳಾದ ಗಂಗಪ್ಪ ಎಂ, ಬಸನಗೌಡ ಕೋಟೂರ, ಶ್ರೀಮತಿ ನಂದಾ ಹಣಬರಟ್ಟಿ, ಎಸ್.ಡಿ. ಪಾಟೀಲ ಹಾಗೂ ಚುನಾವಣಾ ತಹಶೀಲ್ದಾರ ಸಂತೋಷ ಹಿರೇಮಠ ಹಾಜರಿದ್ದರು.

Editor

Leave a comment