ಕರುನಾಡು ಘರ್ಜುನೆ ಸುದ್ದಿ ಗದಗ: ಗದಗ-ಬೆಟಗೇರಿ ನಗರದ ಎಸ್.ಎಂ. ಕೃಷ್ಣನಗರದಲ್ಲಿರುವ ಅಂಜುಮನ್-ಏ-ಇಸ್ಲಾಮ್ ಸಂಸ್ಥೆಯ ಕಚೇರಿ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷರಾದ ಮಹಬೂಬಸಾಬ ರಾ. ಸೋಂಪೂರ ಅವರು ಧ್ವಜಾರೋಹಣ ನೆರವೇರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಹಿದಾಯತುಲ್ಲಾ ಕಾಗದಗಾರ, ಮುನ್ನಾ ಬಿಜಾಪೂರ, ಅನ್ವರ್ ಮುಲ್ಲಾ, ಮಹಬೂಬ ಕದಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಮೌಲ್ವಿ ವಕೀಲರು ಹಾಗೂ ಜನಾಬ್ ಹಾಜಿಅಲಿ ಕೊಪ್ಪಳ ಅವರು ಭಾಗವಹಿಸಿದ್ದರು.
ಅದೇ ವಾರ್ಡಿನ ಗೌರವಾನ್ವಿತ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಅನೀಲ ಸಿದ್ದಮ್ಮನಹಳ್ಳಿ, ಶ್ರೀ ಅನೀಲ ಸಿದ್ದಮ್ಮನಹಳ್ಳಿ, ಶ್ರೀ ವಸಂತ ಸಿದ್ದಮ್ಮನಹಳ್ಳಿ, ಜನಾಬ್ ಉಮರ್ ಫಾರೂಖ್ ಬಾರೀಗಿಡದ, ತಲಾ ಮಸ್ಜಿದ್‌ನ ಚೇರ್ಮನ್ ಜನಾಬ್ ಬಡೇಸಾಬ್ ಬದಾಮಿ, ಜನಾಬ್ ಇಮಾಮಸಾಬ ಕದಡಿ, ಜನಾಬ್ ಬುಡನ್‌ಸಾಬ್ ಕರ್ನಾಚಿ ಸೇರಿದಂತೆ ಓಣಿಯ ಯುವ ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾತಂತ್ರ್ಯೋತ್ಸವಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ದೇಶಭಕ್ತಿ, ಏಕತೆ ಹಾಗೂ ಸೌಹಾರ್ದತೆಯ ಸಂದೇಶ ಸಾರಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ದೇಶದ ಅಭಿವೃದ್ಧಿ ಮತ್ತು ಶಾಂತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಲಾಯಿತು.
ಜಿಲ್ಲೆ ಹಾಗೂ ರಾಜ್ಯದ ನಿಖರ, ನಿರಂತರ ಸುದ್ದಿಗಳಿಗಾಗಿ ನೋಡುತ್ತಿರಿ — KG NEWS.