ಕರುನಾಡು ಘರ್ಜನೆ ಸುದ್ದಿ ಗದಗ-17 : ನಗರದ ಗಾಂಧೀ ಸರ್ಕಲ್ ಹತ್ತಿರ ಇರುವ ಅಕ್ಕಿಸ್ ಫಿಟೈಸ್ ವರ್ಲ್ಡ್ನಲ್ಲಿ ಗುರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ದಿನಾಂಕ 15-08-2026 ರಂದು ಗುರುವಂದನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಈ ಗುರುವಂದನಾ ಕಾರ್ಯಕ್ರಮಕ್ಕೆ ಗುರುಗಳಾದ ಶ್ರೀ ವಿನೋದ ಅಕ್ಕಿ ಹಾಗೂ ಅತಿಥಿಗಳಾಗಿ ಶ್ರೀ ಅಮರೇಶ್ವರ ಕೆ.. ಎಸ್.ಬಿ.ಐ. ಬ್ಯಾಂಕ್ ಇವರುಗಳು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ವಾಸು ಕಲ್ಮನಿ, ರವಿರಾಜ ದೊಡ್ಡಮನಿ, ಓಬಳೇಶ ಯಶವಂತಪುರ, ಪ್ರವೀಣ ರಾಮಗಿರಿ, ನಾಗರಾಜ ಸೊನ್ನದ, ಮಂಜುನಾಥ ತಳಗೇರಿ, ವಿಜಯ ಹೊಸಮನಿ, ಪರಶುರಾಮ ಸಂಗಾಪೂರ, ದೀಪಕ, ಅರ್ಜುನ, ಗುರುಗಳಿಗೆ ಹಾಗೂ ಪ್ರಸ್ತುತ ವೊ ಇದ್ಯಾರ್ಥಿಗಳು ಭಾಗವಹಿಸಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಅದೇ ವ್ಯಾಯಾಮ ಶಾಲೆಯ ಹಳೆಯ ವಿದ್ಯಾರ್ಥಿಯಾದ ಪರಶುರಾಮ ಸೀತಿಮನಿ ಅವರು ಗುರುಗಳು ಕೇವಲ ನಮಗೆ ವ್ಯಾಯಾಮವನ್ನು ಕಲಿಸಿಲ್ಲ ಜೊತೆಗೆ “ಆರೋಗ್ಯವೇ ಮಹಾಭಾಗ್ಯ” ಎಂಬುದನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಜೊತೆಗೆ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದಲ್ಲದೇ ಮನಸ್ಸನ್ನು ಗಟ್ಟಿಗೊಳಿಸುವುದು. ಸೋಲನ್ನು ಎದುರಿಸುವುದು. ನಿರಂತರವಾಗಿ ಪ್ರಯತ್ನಿಸುವುದನ್ನು ಕಳಿಸಿದ್ದಾರೆ ಎಂದು ಮಾತನಾಡಿ ತಮ್ಮ ಗುರುಗಳೊಂದಿಗೆ ಕಳೆದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಶ್ರೀ ವಿಜಯ ಎಫ್. ಟಿ. ಮಾತನಾಡಿ ಪ್ರಸ್ತುತ ವರ್ಷದಲ್ಲಿ ವ್ಯಾಯಾಮ ಶಾಲೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಆದಿತ್ಯ, ವೈಭವ, ಫಯಾಜ, ಮಹೇಶ, ಎಚ್. ಮಂಜು ಇವರುಗಳಿಗೆ ನೆನಪನ ಕಾಣಿಕೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಗುರುವಂದನೆಯನ್ನು ಸ್ವೀಕರಿಸಿದ ಶ್ರೀ ವಿನೋದ ಅಕ್ಕಿಯವರು “ಒಬ್ಬ ಶಿಷ್ಯನಿಗೆ ಒಳ್ಳೆಯ ಗುರುಗಳು ಸಿಗುವುದು ಎಷ್ಟು ಕಠಿಣವೋ, ಅದೇ ರೀತಿ ಒಬ್ಬ ಗುರುವಿಗೆ ಒಬ್ಬ ಒಳ್ಳೆಯ ಶಿಷ್ಯ ಸಿಗುವುದು ಅಷ್ಟೇ ಕಠಿಣ ಅಂತಹದರಲ್ಲಿ ನೀವು ನನಗೆ ಶಿಷ್ಯರಾಗಿ ಸಿಕ್ಕಿರುವುದು ನನ್ನ ಭಾಗ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಅಮರೇಶ್ವರ ಕೆ.. ಎಸ್.ಬಿ.ಐ. ಬ್ಯಾಂಕ ಇವರು ಮಾತನಾಡಿ ಈ ಗುರುವಂದನಾ ಕಾರ್ಯಕ್ರಮಕ್ಕೆ ನನಗೆ ಆಹ್ವಾನಿಸಿದ್ದು ತುಂಬಾ ಸಂತೋಷ ತಂದಿದೆ. ನಾನು ಈ ವ್ಯಾಯಾಮ ಶಾಲೆಯ ಪ್ರಸ್ತುತ ಸದಸ್ಯನಾಗಿದ್ದು, ಕೊನೆಯವರೆಗೂ ಈ ಶಾಲೆಯಲ್ಲಿ ಸದಸ್ಯನಾಗಿರಲು ಇಷ್ಟಪಡುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.