Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ I ಜಿಲ್ಲೆಯಲ್ಲಿ ಶೇ.90ರಷ್ಟು ಮಳೆಮಾಪನ ಯಂತ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ. ತಪ್ಪಾದ ಅಂಕಿಅಂಶಗಳಿಂದ ಬರ ಘೋಷಣೆ ಕೈತಪ್ಪಿದೆಯೇ ಎಂಬ ಅನುಮಾನ: ಅನಿಲ ಮೆಣಸಿನಕಾಯಿ.

ಕರುನಾಡು ಘರ್ಜನೆ ಸುದ್ದಿ ಗದಗ: ತಾಲೂಕಿನಲ್ಲಿ ಅಳವಡಿಸಲಾಗಿರುವ ಮಳೆಮಾಪನ ಯಂತ್ರಗಳಲ್ಲಿ ಹಲವು  ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮಳೆಮಾಪನ ವ್ಯವಸ್ಥೆಯೇ ದೋಷಪೂರಿತ ಆಗಿದ್ದರಿಂದ ಬರ ಘೋಷಣೆ ಕೈತಪ್ಪಿದ ಎಂಬ ಅನುಮಾನ ಮೂಡುತ್ತಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ…
ಕರುನಾಡು ಘರ್ಜನೆ ಸುದ್ದಿ ಗದಗ: ತಾಲೂಕಿನಲ್ಲಿ ಅಳವಡಿಸಲಾಗಿರುವ ಮಳೆಮಾಪನ ಯಂತ್ರಗಳಲ್ಲಿ ಹಲವು  ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮಳೆಮಾಪನ ವ್ಯವಸ್ಥೆಯೇ ದೋಷಪೂರಿತ ಆಗಿದ್ದರಿಂದ ಬರ ಘೋಷಣೆ ಕೈತಪ್ಪಿದ ಎಂಬ ಅನುಮಾನ ಮೂಡುತ್ತಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,  ಜಿಲ್ಲೆಯಲ್ಲಿ ನಿಜವಾಗಿ ಎಷ್ಟು ಮಳೆಯಾಗಿದೆ, ಎಷ್ಟು ಮಳೆ ಕೊರತೆಯಾಗಿದೆ ಹಾಗೂ ಯಾವ ಪ್ರದೇಶಗಳು ತೀವ್ರ ಬರಕ್ಕೆ ತುತ್ತಾಗಿವೆ ಎಂಬ ಸರಿಯಾದ ಅಂಕಿಅಂಶವನ್ನು ಮಳೆ ಮಾಪನ ಕೇಂದ್ರಗಳಿಂದಲೇ ಸರ್ಕಾರಕ್ಕೆ ತಲುಪಲು ಸಾಧ್ಯ. ಆದರೆ ಗದಗ ಕ್ಷೇತ್ರದಲ್ಲಿ ಹಲವು ಮಳೆ ಮಾಪನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ.
ತಪ್ಪಾದ ಅಥವಾ ಅಪೂರ್ಣ ಮಳೆ ದಾಖಲೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಿದ ಪರಿಣಾಮ ಗದಗ ತಾಲ್ಲೂಕು ಹಾಗೂ ಜಿಲ್ಲೆಯ ಬರಪೀಡಿತ ಪ್ರದೇಶಗಳು ಬರ ಘೋಷಣೆಯಿಂದ ಹೊರಗುಳಿದಿರಬಹುದು.ಅಧಿಕಾರಿಗಳ ನಿರ್ಲಕ್ಷದಿಂದ ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಕುಟುಂಬಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತಿದೆ.
ಮಳೆಮಾಪನ ಯಂತ್ರಗಳು ಕಾರ್ಯ ನಿರ್ವಹಿಸದಿದ್ದರೆ, ದಾಖಲೆಗಳಲ್ಲಿ ಮಳೆ ಪ್ರಮಾಣ ತಪ್ಪಾಗಿ ಪ್ರತಿಬಿಂಬಿಸುವ ಸಾಧ್ಯತೆಯಿದೆ. ವಾಸ್ತವದಲ್ಲಿ ಬೆಳೆಗಳು ಒಣಗಿದ್ದರೂ, ಜಲಮೂಲಗಳು ಖಾಲಿಯಾಗಿದ್ದರೂ ಮತ್ತು ರೈತರು ಆರ್ಥಿಕ ಸಂಕಷ್ಟದಲ್ಲಿದ್ದರೂ, ಅಧಿಕೃತ ಅಂಕಿಅಂಶಗಳಲ್ಲಿ ಪರಿಸ್ಥಿತಿಯ ಗಂಭೀರತೆ ದಾಖಲಾಗದೇ ಹೋಗಬಹುದು ಎಂದು ತಿಳಿಸಿದ್ದಾರೆ.
ಯಂತ್ರಗಳ ನಿರ್ವಹಣೆಯ ವೈಫಲ್ಯಕ್ಕಾಗಿ ರೈತರನ್ನು ಶಿಕ್ಷಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಅನಿಲ ಮೆಣಸಿನಕಾಯಿ, ಇದಕ್ಕೆ
ಸರ್ಕಾರ ಮತ್ತು ಜಿಲ್ಲಾಡಳಿತ ಉತ್ತರಿಸಬೇಕು.
ಜಿಲ್ಲೆಯಲ್ಲಿ ಒಟ್ಟು ಎಷ್ಟು ಮಳೆಮಾಪನ ಯಂತ್ರಗಳಿವೆ?
ಅವುಗಳಲ್ಲಿ ಎಷ್ಟು ಯಂತ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ?
ಕಾರ್ಯನಿರ್ವಹಿಸದ ಯಂತ್ರಗಳ ಬಗ್ಗೆ ಕೊನೆಯ ತಾಂತ್ರಿಕ ಪರಿಶೀಲನೆ ಯಾವಾಗ ನಡೆದಿದೆ?
ದೋಷಪೂರಿತ ಯಂತ್ರಗಳ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಲಾಗಿತ್ತೇ?
ಬರ ಘೋಷಣೆಗೆ ಯಾವ ಮಳೆ ಅಂಕಿಅಂಶಗಳನ್ನು ಆಧಾರವಾಗಿ ಬಳಸಲಾಗಿದೆ?
ಯಂತ್ರಗಳು ಕಾರ್ಯನಿರ್ವಹಿಸದ ದಿನಗಳ ಅಂಕಿಅಂಶವನ್ನು ಹೇಗೆ ಲೆಕ್ಕಹಾಕಲಾಗಿದೆ ಎಂದು ಜನರಿಗೆ ಸರ್ಕಾರ ಉತ್ತರಿಸಬೇಕು ಎಂದು ತಿಳಿಸಿದ್ದಾರೆ.
ರೈತರ ಹೊಲಗಳ ವಾಸ್ತವ ಪರಿಸ್ಥಿತಿ ಮತ್ತು ಬೆಳೆನಷ್ಟದ ಸ್ಥಳ ಪರಿಶೀಲನೆ ನಡೆಸಲಾಗಿಲ್ಲ.
ನಿರ್ವಹಣಾ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ.
ಗದಗ ಜಿಲ್ಲಾಡಳಿತವು ತಾಲ್ಲೂಕುವಾರು, ಹೋಬಳಿವಾರು ಮತ್ತು ಗ್ರಾಮವಾರು ಮಳೆಮಾಪನ ಯಂತ್ರಗಳ ಸ್ಥಿತಿಗತಿಗಳ ಸಂಪೂರ್ಣ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಪ್ರತಿಯೊಂದು ಯಂತ್ರದ ಕಾರ್ಯನಿರ್ವಹಣಾ ದಾಖಲೆ, ತಾಂತ್ರಿಕ ಪರಿಶೀಲನೆಯ ದಿನಾಂಕ ಮತ್ತು ದಾಖಲಾದ ಮಳೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ದೋಷಪೂರಿತ ಯಂತ್ರಗಳಿಂದ ಸಂಗ್ರಹಿಸಲಾದ ಅಂಕಿಅಂಶಗಳನ್ನು ಮಾತ್ರ ಅವಲಂಬಿಸದೆ, ಉಪಗ್ರಹ ಮಾಹಿತಿ, ಜಲಾಶಯ ಮತ್ತು ಅಂತರ್ಜಲದ ಸ್ಥಿತಿ, ಬಿತ್ತನೆ ಪ್ರಮಾಣ, ಬೆಳೆ ಒಣಗಿರುವ ಪ್ರಮಾಣ, ಮಣ್ಣಿನ ತೇವಾಂಶ ಹಾಗೂ ಗ್ರಾಮಮಟ್ಟದ ಜಂಟಿ ಸಮೀಕ್ಷೆಯನ್ನು ಪರಿಗಣಿಸಿ ಬರ ಪರಿಸ್ಥಿತಿಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿರುವ ಅವರು, ಇಂತಹ ಸಂದರ್ಭದಲ್ಲಿ ತಾಂತ್ರಿಕ ದೋಷ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬರ ಪರಿಹಾರ, ಬೆಳೆನಷ್ಟ ಪರಿಹಾರ, ವಿಮಾ ಸೌಲಭ್ಯ ಮತ್ತು ಇತರ ಸರ್ಕಾರಿ ನೆರವು ಕೈತಪ್ಪಿದರೆ ಅದು ರೈತರಿಗೆ ಮಾಡಿದ ಗಂಭೀರ ಅನ್ಯಾಯವಾಗುತ್ತದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

Editor

Leave a comment