ಕರುನಾಡು ಘರ್ಜನೆ ಸುದ್ದಿ ಬೆಂಗಳೂರು: ಕಾರ್ಮಿಕರ ಪರ ಹೋರಾಟ, ಸಾಮಾಜಿಕ ಸೇವೆ ಹಾಗೂ ಜನಪರ ಕಾರ್ಯಗಳನ್ನು ಗುರುತಿಸಿ ಅಬ್ಬಾಸ್ ಅಲಿ ರಾಣೆಬೆನ್ನೂರು ಅವರನ್ನು ರಾಷ್ಟ್ರೀಯ ಅಹಿಂದ ಸಂಘಟನೆ (ರಿ)ಯ ರಾಜ್ಯ ಕಾರ್ಮಿಕ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹಾವೇರಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಅಹಿಂದ ಜನ ಜಾಗೃತಿ ಸಂಕಲ್ಪ ವೇದಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್. ಶಿವಳ್ಳಿ ಅವರ ನೇತೃತ್ವದಲ್ಲಿ ಅಬ್ಬಾಸ್ ಅಲಿ ರಾಣೆಬೆನ್ನೂರು ಅವರಿಗೆ ನೇಮಕಾತಿ ಪ್ರಮಾಣಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ರಾಜ್ಯ ಕಾರ್ಮಿಕ ಸಮಿತಿ ಅಧ್ಯಕ್ಷೆ ಸುಶೀಲಾ ಕೆ.ಎಂ., ಕಾರ್ಯಾಧ್ಯಕ್ಷ ಗುರುನಗೌಡ ಪಾಟೀಲ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಬೀರಲಿಂಗೇಶ್ವರ ಪೂಜಾರಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಕಳೆದ ಸುಮಾರು ಎಂಟು ವರ್ಷಗಳಿಂದ ಹಾವೇರಿ ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಹೋರಾಟ, ಸಾಮಾಜಿಕ ಸೇವೆ ಹಾಗೂ ಜನಪರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಈ ಜವಾಬ್ದಾರಿ ನೀಡಲಾಗಿದೆ ಎಂದು ಅಬ್ಬಾಸ್ ಅಲಿ ರಾಣೆಬೆನ್ನೂರು ತಿಳಿಸಿದರು.
“ಕಾರ್ಮಿಕರು ತಮ್ಮ ಸಂವಿಧಾನಾತ್ಮಕ ಹಕ್ಕುಗಳು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನಿರಂತರವಾಗಿ ಕೆಲಸ ಮಾಡಬೇಕು. ಎಲ್ಲ ವರ್ಗದ ಜನರನ್ನು ಬದುಕಿನ ಮುಖ್ಯವಾಹಿನಿಗೆ ತರಲು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಆಶಯದೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆಯ ಮೂಲಕ ಕೆಲಸ ಮಾಡುತ್ತೇನೆ,” ಎಂದು ಅವರು ಹೇಳಿದರು.
ನೂತನ ಜವಾಬ್ದಾರಿಯಿಂದ ಇನ್ನಷ್ಟು ಜನಪರ ಹಾಗೂ ಕಾರ್ಮಿಕ ಪರ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ದೊರೆತಿದ್ದು, ರಾಜ್ಯ ಪದಾಧಿಕಾರಿಗಳು ಹಾಗೂ ಜನರ ಸಹಕಾರದೊಂದಿಗೆ ಸಂಘಟನೆ ಮತ್ತು ಹೋರಾಟವನ್ನು ಮುಂದುವರಿಸಲಾಗುವುದು. ಜನರ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಅಬ್ಬಾಸ್ ಅಲಿ ರಾಣೆಬೆನ್ನೂರು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆಯ ಚಿಂತಕರಾದ ಸಮೃದ್ಧ ಸೂರಜ್ ಹೆಗಡೆ, ಲೋಹಿತ್ ನಾಯಕ, ಕನ್ನಡ ಚಿತ್ರರಂಗದ ನಿರ್ಮಾಪಕ ಡಾ. ಮದನ್ ಪಟೇಲ್, ಮುಖಂಡ ಗಣೇಶ ಪೂಜಾರ, ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಬಾಬಾಜಾನ್ ಮುಧೋಳ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು.
ಹಾವೇರಿ ಜಿಲ್ಲಾ ಕಾರ್ಮಿಕ ಘಟಕದ ಕಾನೂನು ಸಲಹೆಗಾರ ವಿಜಯ್ ತೋಟಗೇರ್, ಜಿಲ್ಲಾ ಉಪಾಧ್ಯಕ್ಷೆ ರಾಧಾ ನೀಲಪ್ಪ ದೊಡ್ಮರಿಯಮ್ಮನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹಮದ್ ಕಾಲಶೆಕೆರ್, ಜಿಲ್ಲಾ ಕಾರ್ಮಿಕ ಸಂಚಾಲಕ ಮೊಹಮ್ಮದ್ ಸಾಧಿಕ್ ಅಬ್ದುಲ್ ಹಮೀದ್ ಸಾಬ್ ಮುಲ್ಲಾ, ಜಿಲ್ಲಾ ಸಂಚಾಲಕ ದೇವಪ್ಪ ಮಡ್ಡಿ, ಕಾರ್ಮಿಕ ತಾಲೂಕು ಅಧ್ಯಕ್ಷ ಅಬ್ದುಲ್ ಖಾದರ್ ಅ. ಖಾದ್ರಿ, ಸಾಬೀರ್ ಕನವಳ್ಳಿ, ರಾಣೆಬೆನ್ನೂರು ತಾಲೂಕು ಗೌರವ ಅಧ್ಯಕ್ಷ ಮೋಹಿದೀನ್ ಖಾನ್ ಬ್ಯಾಡಗಿ, ಕಂಚಾರಗಟ್ಟಿ ಗ್ರಾಮ ಘಟಕದ ಅಧ್ಯಕ್ಷ ಮುಸ್ತು ಸಾಬ್ ನೂರಸಾಬ್, ಕಲಾರಿ ಗ್ರಾಮ ಘಟಕ ಸಂಚಾಲಕ ಇಮಾಮ್ ಹುಸೇನ್ ಗುಲಗುಂದಿ, ಕಾರ್ಮಿಕ ಸಂಚಾಲಕ ಅಶ್ವಾಕ್ ಬಾಲೆಬಾಯಿ, ಪುನೀತ್ ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೇಮಕಾತಿಗೆ ಸಹಕಾರ ನೀಡಿದ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಹಾಗೂ ಮುಖಂಡರಿಗೆ ಅಬ್ಬಾಸ್ ಅಲಿ ರಾಣೆಬೆನ್ನೂರು ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.