ಕರುನಾಡು ಘರ್ಜನೆ ಸುದ್ದಿ ಗದಗ: ರಾಜ್ಯದ 1.24 ಕೋಟಿಗೂ ಅಧಿಕ ಯಜಮಾನಿ ಮಹಿಳೆಯರಿಗೆ ತಿಂಗಳಿಗೆ 2,000 ರೂ. ನೀಡುವ ಯೋಜನೆಯ ಮೂಲಕ ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಕೈ ಬಲಪಡಿಸುವ ಉದ್ದೇಶ ಸಾಧಿಸಲಾಗುತ್ತಿದೆ ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿ “ಗ್ಯಾರಂಟಿ ಸಾಧ್ಯವಿಲ್ಲ” ಎಂದರೆ, ಕಾಂಗ್ರೆಸ್ ಸರ್ಕಾರದ ಉತ್ತರ ನೇರ DBT ಮೂಲಕ ಮಹಿಳೆಯರ ಖಾತೆಗೆ ತಲುಪಿದ 57,300 ಕೋಟಿ ರೂ. ಗೂ ಅಧಿಕ ಮೊತ್ತ. ಈಗ ಅದೇ ಬಿಜೆಪಿ ಅವರು ನಮ್ಮ ಗ್ಯಾರಂಟಿ ಯೋಜನೆಯನ್ನು ಬೇರೆ ರಾಜ್ಯದ ಚುನಾವಣೆ ಗೆಲ್ಲಲು ಬಳಸುತ್ತಿದ್ದರೆ, ಗೃಹಲಕ್ಷ್ಮಿಯಂತಹ ನೇರ ಹಣಕಾಸು ನೆರವು ಮನೆಯ ದಿನನಿತ್ಯದ ಖರ್ಚಿನಲ್ಲಿ ಮಹಿಳೆಯರಿಗೆ ನಿರ್ಧಾರ ಸಾಮರ್ಥ್ಯ ನೀಡುವ ಸಾಧನವಾಗಿದೆ. ಮಹಿಳೆಯ ಕೈಗೆ ಹಣ ಎಂದರೆ ಕುಟುಂಬದ ಆರ್ಥಿಕತೆಗೆ ಭದ್ರತೆಯಾಗಿದೆ.
ಶಕ್ತಿ ಯೋಜನೆ ಮಹಿಳೆಯ ಸಂಚಾರವನ್ನು ಉಚಿತಗೊಳಿಸುವುದು ಕೇವಲ ಬಸ್ ಟಿಕೆಟ್ ವಿಚಾರವಲ್ಲ. ಉಚಿತ ಬಸ್ ಪ್ರಯಾಣದಿಂದ ಮಹಿಳೆಯರ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸ್ವಾವಲಂಬನೆಗೆ ಸಂಚಾರದ ಅಡೆತಡೆ ಕಡಿಮೆಯಾಗುವ ಅವಕಾಶ ಸೃಷ್ಟಿಯಾಗಿದೆ.
ಗೃಹಜ್ಯೋತಿ ವಿದ್ಯುತ್ ಬಿಲ್‌ನ ಭಯದಿಂದ ಕುಟುಂಬಗಳಿಗೆ ಪರಿಹಾರ ಸಿಕ್ಕಂತಾಗಿದೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಡಿ ಇದುವರೆಗೆ 30,080 ಕೋಟಿ ರೂ. ಗೂ ಅಧಿಕ ವೆಚ್ಚವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಅನ್ನಭಾಗ್ಯ ಹಸಿವಿನ ವಿರುದ್ಧ ಸರ್ಕಾರದ ನೇರ ಹಸ್ತಕ್ಷೇಪವಾಗಿದೆ. ಬಿಪಿಎಲ್ ಕುಟುಂಬಗಳಿಗೆ ಹೆಚ್ಚುವರಿ ಅಕ್ಕಿ/ಹಣದ ನೆರವಿಗಾಗಿ ಸರ್ಕಾರ ಸುಮಾರು 19,974 ಕೋಟಿ ರೂ. ವೆಚ್ಚ ಮಾಡಿದೆ ಎಂದು ನೀಡಿರುವ ಅಂಕಿ ಸೂಚಿಸುತ್ತದೆ. ಹಸಿವು ನಿವಾರಣೆ ಯಾವುದೇ ಸರ್ಕಾರದ ಮೂಲಭೂತ ಕರ್ತವ್ಯವಲ್ಲವೇ? ಎಂದು ಬಿಜೆಪಿ ಅರ್ಥ ಮಾಡಿಕೊಳ್ಳಬೇಕಿದೆ.
ಯುವನಿಧಿ ನಿರುದ್ಯೋಗದ ನೋವಿಗೆ ಕನಿಷ್ಠ ಆರ್ಥಿಕ ಬೆಂಬಲವಾಗಿದೆ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡುವ ಮೂಲಕ ಉದ್ಯೋಗ ಹುಡುಕುವ ಅವಧಿಯಲ್ಲಿ ಯುವಕರಿಗೆ ಆರ್ಥಿಕ ನೆರವು ಒದಗಿಸುವ ಪ್ರಯತ್ನ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಅಂಗನವಾಡಿ ಸಿಬ್ಬಂದಿಯ ಗೌರವಧನ ಮತ್ತು ಸೌಲಭ್ಯಗಳನ್ನು ಬಲಪಡಿಸುವುದು ತಳಮಟ್ಟದ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ಹೆಜ್ಜೆಯಾಗಿದೆ.
ಸಾಮಾಜಿಕ ಭದ್ರತೆ ಎಂದರೆ ಸರ್ಕಾರದ ಕೃಪೆ ಅಲ್ಲ ನಾಗರಿಕನ ಹಕ್ಕು. ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಪಿಂಚಣಿಗಳಿಗೆ ವಾರ್ಷಿಕ 11,000-12,000 ಕೋಟಿ ರೂ. ಮಟ್ಟದ ಅನುದಾನ ಕಾಯ್ದುಕೊಳ್ಳುವುದು ದುರ್ಬಲ ವರ್ಗಗಳ ಸಾಮಾಜಿಕ ಭದ್ರತೆಗೆ ಆದ್ಯತೆ ನೀಡುವ ಕ್ರಮವಾಗಿದೆ.
ಗ್ಯಾರಂಟಿಯ ಜೊತೆಗೆ ಆರ್ಥಿಕತೆ ಮತ್ತು ಅಭಿವೃದ್ಧಿಯನ್ನೂ ಮುನ್ನಡೆಸುವ ಸರ್ಕಾರ: “ಗ್ಯಾರಂಟಿ ಕೊಟ್ಟರೆ ಅಭಿವೃದ್ಧಿ ನಿಲ್ಲುತ್ತದೆ” ಎಂಬ ಬಿಜೆಪಿಯ ವಾದಕ್ಕೆ ಆರ್ಥಿಕ ಅಂಕಿಗಳೇ ಉತ್ತರ. 2025-26ರಲ್ಲಿ ಕರ್ನಾಟಕದ GSDP ಬೆಳವಣಿಗೆಯನ್ನು ಸುಮಾರು ಶೇ. 8ರಷ್ಟು ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ವೆಚ್ಚ ಮತ್ತು ಅಭಿವೃದ್ಧಿ ವೆಚ್ಚ ಎರಡನ್ನೂ ಸಮತೋಲನಗೊಳಿಸುವುದು ಸಾಧ್ಯವಿಲ್ಲ ಎಂಬ ವಾದವನ್ನು ಇದು ಪ್ರಶ್ನಿಸುತ್ತದೆ.
ತಲಾ ಆದಾಯ ಎಷ್ಟು? ಅಭಿವೃದ್ಧಿಯ ಪರಿಣಾಮ ಸಾಮಾನ್ಯ ನಾಗರಿಕನ ಮಟ್ಟದಲ್ಲಿ ರಾಜ್ಯದ ತಲಾ GSDP ಅಂದಾಜು 4,77,003 ರೂ. ತಲುಪಿದ್ದು, ಸುಮಾರು ಶೇ. 12ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ನೀಡಿರುವ ಅಂಕಿ ಸೂಚಿಸುತ್ತದೆ.
“ಕರ್ನಾಟಕ ದಿವಾಳಿ” ಎಂದು ಕೂಗುವುದು ಸುಲಭ; ಹಣಕಾಸು ನಿರ್ವಹಿಸುವುದು ಕಷ್ಟ: ರಾಜ್ಯದ ಸ್ವಂತ ತೆರಿಗೆ ರಾಜಸ್ಥದಲ್ಲಿ ಬೆಳವಣಿಗೆ ಸಾಧಿಸುವುದು ಸರ್ಕಾರದ ಹಣಕಾಸಿನ ಸಾಮರ್ಥ್ಯಕ್ಕೆ ಮುಖ್ಯ. ಆದಾಯ ಹೆಚ್ಚಿಸಿ ಸಾಮಾಜಿಕ ಯೋಜನೆಗಳನ್ನು ಮುಂದುವರಿಸುವುದು ಆಡಳಿತದ ನಿಜವಾದ ಪರೀಕ್ಷೆವಾಗಿದೆ.
ಕೃಷಿ ಕ್ಷೇತ್ರಕ್ಕೆ 51,339 ಕೋಟಿ ರೂ. ಮಟ್ಟದ ಅನುದಾನ ಮೀಸಲಿಡುವ ಮೂಲಕ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ ಆದ್ಯತೆ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅನ್ನದಾತ ಬಲವಾಗಿದ್ದರೆ ರಾಜ್ಯದ ಆರ್ಥಿಕತೆಯೂ ಬಲವಾಗುತ್ತದೆ.
ಮಳೆ, ಪ್ರವಾಹ ಅಥವಾ ಬರದಿಂದ ಬೆಳೆ ಹಾನಿಯಾದಾಗ ತ್ವರಿತ ಪರಿಹಾರ ಜಮೆ ಮಾಡುವ ವ್ಯವಸ್ಥೆ ರೈತನಿಗೆ ಸರ್ಕಾರದ ಸ್ಪಂದನೆಯ ನಿಜವಾದ ಮಾನದಂಡವಾಗಿದೆ.
ಬಿಜೆಪಿಯ ಪ್ರಶ್ನೆ – “ಗ್ಯಾರಂಟಿಗೆ ಹಣ ಎಲ್ಲಿಂದ?” ಕಾಂಗ್ರೆಸ್‌ನ ಪ್ರಶ್ನೆ “ಜನರಿಗಾಗಿ ಹಣ ಏಕೆ ಬಳಸಬಾರದು?” ಸರ್ಕಾರದ ಹಣಕಾಸಿನ ಆದ್ಯತೆಗಳು ಯಾವಾಗಲೂ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಸಾಮಾಜಿಕ ಭದ್ರತೆ + ಮೂಲಸೌಕರ್ಯ + ಆರ್ಥಿಕ ಬೆಳವಣಿಗೆ ಮೂರನ್ನೂ ಒಟ್ಟಿಗೆ ಸಾಗಿಸುವುದೇ ಸವಾಲಾಗಿದೆ. ಈ ಬೆಂಗಳೂರಿನ ಟ್ರಾಫಿಕ್ ಪರಿಹಾರ ಭಾಷಣದಿಂದ ಬರುವುದಿಲ್ಲ. ‘ನಮ್ಮ ಮೆಟ್ರೋ’ ವಿಸ್ತರಣೆ, ಸಂಪರ್ಕ ಸುಧಾರಣೆ ಮತ್ತು ಸಾರ್ವಜನಿಕ ಸಾರಿಗೆಗೆ ಹೂಡಿಕೆ ಮಾಡುವ ಮೂಲಕ ನಗರದ ಸಂಚಾರ ವ್ಯವಸ್ಥೆಗೆ ದೀರ್ಘಕಾಲೀನ ಪರಿಹಾರ ಹುಡುಕಬೇಕು.
ಯೋಜನೆಗೆ ವರ್ಷಗಳ ಕಾಲ ಕಡತಗಳಲ್ಲಿ ಸಿಲುಕಿದ ಬೇಕು. ವೇಗ K-RIDE ಯೋಜನೆಯಲ್ಲಿ ಭೂಸ್ವಾಧೀನ ಮತ್ತು ಅನುದಾನ ಬಿಡುಗಡೆಗೆ ವೇಗ ನೀಡುವುದು ಬೆಂಗಳೂರಿನ ಭವಿಷ್ಯದ ಸಾರಿಗೆ ವ್ಯವಸ್ಥೆಗೆ ಪ್ರಮುಖ ಹೆಜ್ಜೆವಾಗಿದೆ.
ಜಲಜೀವನ್ ಮಿಷನ್ ಸೇರಿದಂತೆ ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸಿ ಮನೆಮನೆಗೆ ಶುದ್ದ ಕುಡಿಯುವ ನೀರು ತಲುಪಿಸುವ ಪ್ರಯತ್ನ ಮುಂದುವರಿಯಬೇಕು. ಗ್ರಾಮೀಣ ಹಾಗೂ ನಗರ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವುದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗುತ್ತದೆ.
ಹೂಡಿಕೆ ಬಂದರೆ ಮಾತ್ರ ಉದ್ಯೋಗ ಸೃಷ್ಟಿಯಾಗುತ್ತದೆ; ಉದ್ಯೋಗ ಬಂದರೆ ಮಾತ್ರ ಯುವಕರ ಭವಿಷ್ಯ ಬದಲಾಗುತ್ತದೆ. ಕೈಗಾರಿಕಾ ನೀತಿಗಳು ಮತ್ತು ಹೂಡಿಕೆ ಆಕರ್ಷಣೆಯ ಮೂಲಕ ಹೊಸ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಆರ್ಥಿಕ ಕಾರ್ಯಸೂಚಿಯ ಪ್ರಮುಖ ಭಾಗವಾಗಿದೆ.
ಬೆಂಗಳೂರು ಮಾತ್ರ ಕರ್ನಾಟಕವಲ್ಲ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಂತಹ ಪ್ರದೇಶಗಳಿಗೆ ವಿಶೇಷ ಅನುದಾನ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡುವುದು ಸಮತೋಲಿತ ಕರ್ನಾಟಕ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.