ಕರುನಾಡು ಘರ್ಜನೆ ಸುದ್ದಿ ದಿನಾಂಕ 12-10-2026 ರಂದು 2026-26 ನೇ ಸಾಲಿನ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ಯ ಗದಗ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆ ನಗರ ಸಭೆ ಸಭಾಭವನ ಗದಗ-ಬೆಟಗೇರಿ ಇಲ್ಲಿ ನಡೆಯಿತು.
ಮಾನ್ಯ ಶ್ರೀ ಶ್ರೀನಿವಾಸಮೂರ್ತಿ ಕುಲಕರ್ಣಿ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಯ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಮಾನ್ಯ ತಹಶೀಲ್ದಾರರು ಗದಗ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ V V ನಡುವಿನಮನಿ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಯ ಆಯ್ಕೆ ಸಮಿತಿ ಸದಸ್ಯ ಕಾರ್ಯಶಿ್ರಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ ಗ್ರಾಮೀಣ ವಲಯ ಇವರು ಸರ್ವರನ್ನೂ ಸ್ವಾಗತಿಸಿತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾನ್ಯ ಶ್ರೀ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಯ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಮಾನ್ಯ ತಹಶೀಲ್ದಾರರು ಗದಗ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಯುವಜನತೆಗೆ ಪುಜಾಪ್ರಭುತ್ವ ಹಾಗೂ ವಿಧಾನಸಭೆಯ
ಕಾರ್ಯ ಕಲಾಪಗಳ ಬಗ್ಗೆ ಅರಿವುಂಟು ಮಾಡಲು ಯುವ ಸಂಸತ್ ಸ್ಪರ್ಧೆ ಏರ್ಪಡಿಸಲಾಗಿದೆ.
ವಿದ್ಯಾರ್ಥಿಗಳು ಸದನದ ನಿಯಮಾವಳಿಗಳ ಬಗ್ಗೆ ತಿಳಿದುಕೊಂಡು ಅರ್ಥಪೂರ್ಣ ಕಲಾಪ ನಡೆಸಬೇಕು. ಮತ್ತು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಸ್ಪರ್ಧೆಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ H S ಜನಗಿ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಯ ಆಯ್ಕೆ ಸಮಿತಿ ಸದಸ್ಯರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಗದಗ, ಶ್ರೀ, ಶ್ರೀ ಬಾಲಚಂದ್ರ ಸಂಗನಾಳ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಯ ಆಯ್ಕೆ ಸಮಿತಿ ಸದಸ್ಯರು ಹಾಗೂ ಸಹಾಯಕ ನಿರ್ದೇಶಕರು ಸಮಾಜಕಲ್ಯಾಣ ಇಲಾಖೆ ಗದಗ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಶಂಕರ ಹಡಗಲಿ ಸಹಾಯಕ ನಿರ್ದೇಶಕರು, ಪಿ ಎಂ ಪೋಷಣ್ ಅಭಿಯಾನ ಗದಗ ತಾಲೂಕು, ಶ್ರೀ J A ಭಾವಿಕಟ್ಟಿ ಕ್ಷೇತ್ರ ಸಮನ್ವಯಾಧಿಕಾರಿಗಳು ಗದಗ ಗ್ರಾಮೀಣ ವಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಶ್ರೀಮತಿ ಮಂಜುಳಾ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾರ್ಗದರ್ಶಿ ಶಿಕ್ಷಕರು ಗದಗ ಗ್ರಾಮೀಣ ಮತ್ತು ಶಹರ ವಲಯದ ಎಲ್ಲ ಸಿಆರ್‌ಪಿ ಬಿಆರ್ಪಿಯವರು ಹಾಜರಿದ್ದರು. ಸರಕಾರಿ, ಖಾಸಗಿ ಪ್ರೌಢಶಾಲೆ, ಪದವಿಪೂರ್ವ, ಪದವಿ, ಕಾನೂನು, ಶಿಕ್ಷಣ ಮಹಾವಿದ್ಯಾಲಯ, ಇಂಜನೀಯರಿಂಗ್ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಗದಗ ಶಹರ ವಲಯದ ಬಿಆರ್‌ಪಿ ಶ್ರೀ ಎಂ ಎ ಯರಗುಡಿ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಗದಗ ಗ್ರಾಮೀಣ ವಲಯದ ಬಿಆರ್‌ಪಿ ಶ್ರೀ ಸಿ ಬಿ ಮುಧೋಳಮಠ ಇವರು ವಂದನಾರ್ಪಣೆ ಸಲ್ಲಿಸಿದರು.
ನಂತರ ಆಕರ್ಷಕ ವೇಷ ಭೂಷಣ ಧರಿಸಿದ ವಿದ್ಯಾರ್ಥಿಗಳು ವಿಧಾನ ಸಭೆಯ ನಿಯಮಾವಳಿಗಳ ಪ್ರಕಾರ ಯುವ ಸಂಸತ್ ಸ್ಪರ್ಧೆ ಆರಂಭವಾಯಿತು’ ಸದನದ ಸದಸ್ಯರು ಮತದಾನದ ಮೂಲಕ ಸಭಾಪತಿ, ಮುಖ್ಯಮಂತ್ರಿ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಮುಂತಾದ ಹುದ್ದೆಗಳ ಆಯ್ಕೆ ನಡೆಯಿತು.
ಸಭಾಧ್ಯಕ್ಷರ ಆಗಮನದ ನಂತರ ನಾಡಗೀತೆಯೊಂದಿಗೆ ಸದನ ಆರಂಭವಾಯಿತು. ಸಂವಿಧಾನ ಪೀಠಿಕೆ ವಾಚನದ ನಂತರ ನಡೆದ ಪ್ರಶೋತ್ತರ ವೇಳೆ ಮತ್ತು ಶೂನ್ಯ ವೇಳೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ಒಂದು ಹಂತದಲ್ಲಿ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗವೂ ನಡೆಯಿತು. ಗದ್ದಲ ಜೋರಾದಾಗ ಸಭಾಪತಿಗಳು 15 ನಿಮಿಷ ಸದನವನ್ನು ಮುಂದೂಡಿದರು. ಮತ್ತೆ ಸದನ ಆರಂಭವಾದಾಗ ಸಭಾಪತಿಗಳ ಅನುಪಸ್ಥಿತಿಯಲ್ಲಿ ಉಪಸಭಾಪತಿಗಳು ಸದನದ ಕಲಾಪಗಳನ್ನು ನಡೆಸಿಕೊಟ್ಟರು.
ಗಮನ ಸೆಳೆಯುವ ಸೂಚನೆ, ತುರ್ತು ವಿಷಯಗಳ ಮೇಲಿನ ಚರ್ಚೆ ನಡೆಯಿತು. ಕೃಷಿ ಮಂತ್ರಿಗಳಿಂದ ಗೋಮಾಳ ಜಮೀನು ಮಂಜೂರು ಕುರಿತು ವಿಧೇಯಕ ಮಂಡನೆ ನಡೆಯಿತು. ನಂತರ ವಿಧೇಯಕದ ಮೇಲೆ ಸ್ವಾರಸ್ಯಕರ ಚರ್ಚೆ ನಡೆಯಿತು. ನಂತರ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕಾರ ಪಡೆಯಲಾಯಿತು. ನಂತರ ಸಭಾಪತಿಗಳು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ರಾಷ್ಟ್ರಗೀತೆಯ ಪ್ರಸಾರದೊಂದಿಗೆ ಸದನ ಮುಕ್ತಾಯವಾಯಿತು. ನಿರ್ಣಾಯಕರು ಸ್ಪರ್ಧೆಯನ್ನು ಅವಲೋಕಿಸಿ ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡುವ ಪ್ರಕ್ರಿಯೆ ನಿರ್ವಹಿಸಿದರು.
ಕಾರ್ಯಕ್ರಮ ಮುಕ್ತಾಯದ ನಂತರ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.