Wednesday, 4 November 2026 Karunadu Gharjane — Edition

Karunadu Gharjane

News website

ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ. ಗದಗ ಗದಗ I ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಜಿಲ್ಲೆ ಸಿರುಗುಪ್ಪ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ ಜಿಲ್ಲೆ ಬೆಂಗಳೂರು I ಜನರ ಜೇಬಿಗೆ ಕತ್ತರಿ, : ಹಾಲು–ಬಸ್ ದರ ಏರಿಕೆಗೆ ಮುಂದಾದ ಸರ್ಕಾರದ ಕ್ರಮ ಖಂಡನೀಯ – ವೆಲ್ಫೇರ್ ಪಾರ್ಟಿ ಗದಗ ಕರುನಾಡು ಘರ್ಜನೆ ಪತ್ರಿಕೆ ಹಾಗೂ ಕೆ.ಜಿ. ನ್ಯೂಸ್ 5ನೇ ವರ್ಷದ ವಾರ್ಷಿಕೋತ್ಸವಕ್ಕೆ ಸಕಲ ಸಿದ್ಧತೆ – ನವೆಂಬರ್ 1ರಂದು ಅದ್ಧೂರಿ ಸಮಾರಂಭಕ್ಕೆಸರ್ವರಿಗೂ ಹೃತ್ಪೂರ್ವಕ ಸ್ವಾಗತ ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ. ಗದಗ ಗದಗ I ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಜಿಲ್ಲೆ ಸಿರುಗುಪ್ಪ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ ಜಿಲ್ಲೆ ಬೆಂಗಳೂರು I ಜನರ ಜೇಬಿಗೆ ಕತ್ತರಿ, : ಹಾಲು–ಬಸ್ ದರ ಏರಿಕೆಗೆ ಮುಂದಾದ ಸರ್ಕಾರದ ಕ್ರಮ ಖಂಡನೀಯ – ವೆಲ್ಫೇರ್ ಪಾರ್ಟಿ ಗದಗ ಕರುನಾಡು ಘರ್ಜನೆ ಪತ್ರಿಕೆ ಹಾಗೂ ಕೆ.ಜಿ. ನ್ಯೂಸ್ 5ನೇ ವರ್ಷದ ವಾರ್ಷಿಕೋತ್ಸವಕ್ಕೆ ಸಕಲ ಸಿದ್ಧತೆ – ನವೆಂಬರ್ 1ರಂದು ಅದ್ಧೂರಿ ಸಮಾರಂಭಕ್ಕೆಸರ್ವರಿಗೂ ಹೃತ್ಪೂರ್ವಕ ಸ್ವಾಗತ
ಅರೋಗ್ಯ

ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ.

ಕರುನಾಡು ಘರ್ಜನೆ ಸುದ್ದಿ ಗದಗ ಹಳ್ಳಿಗಳಲ್ಲಿ ಶೌಚಾಲಯಗಳನ್ನು ಕಟ್ಟಿದ್ದೇವೆ, ಕಾಗದದ ಮೇಲೆ ಬಯಲು ಶೌಚಮುಕ್ತ ದೇಶ’ ಎಂದು ಘೋಷಿಸಿಕೊಂಡಿದ್ದೇವೆ. ನಾವು ಶೌಚಾಲಯಗಳ ಆಧಾರದ ಮೇಲೆ “ಬಯಲು ಶೌಚಮುಕ್ತ ದೇಶ” ಎಂದು ಘೋಷಿಸಿಕೊಂಡಿದ್ದೇವೆ.. ಆದರೆ ಕಟ್ಟಿದ ಶೌಚಾಲಯವನ್ನು ಪ್ರತಿಯೊಬ್ಬರೂ ಬಳಿಸುತ್ತಿಲ್ಲ, ಅದನ್ನು ಬಳಸಿದಾಗ…

ಕರುನಾಡು ಘರ್ಜನೆ ಸುದ್ದಿ ಗದಗ ಹಳ್ಳಿಗಳಲ್ಲಿ ಶೌಚಾಲಯಗಳನ್ನು ಕಟ್ಟಿದ್ದೇವೆ, ಕಾಗದದ ಮೇಲೆ ಬಯಲು ಶೌಚಮುಕ್ತ ದೇಶ’ ಎಂದು ಘೋಷಿಸಿಕೊಂಡಿದ್ದೇವೆ. ನಾವು ಶೌಚಾಲಯಗಳ ಆಧಾರದ ಮೇಲೆ “ಬಯಲು ಶೌಚಮುಕ್ತ ದೇಶ” ಎಂದು ಘೋಷಿಸಿಕೊಂಡಿದ್ದೇವೆ.. ಆದರೆ ಕಟ್ಟಿದ ಶೌಚಾಲಯವನ್ನು ಪ್ರತಿಯೊಬ್ಬರೂ ಬಳಿಸುತ್ತಿಲ್ಲ, ಅದನ್ನು ಬಳಸಿದಾಗ ಮಾತ್ರ ಅದು ನಿಜವಾದ ಸಾಧನೆ” ಆಗುತ್ತದೆ. “ಕಟ್ಟಿದ ಶೌಚಾಲಯಗಳ ಸಂಖ್ಯೆಯಲ್ಲ, ಬಳಸುತ್ತಿರುವ ಕುಟುಂಬಗಳ ಸಂಖ್ಯೆಯೇ ನಮ್ಮ ಯಶಸ್ಸಿನ ಅಳತೆಗೋಲು” ಎಂದರು. ಪ್ರಾಯೋಗಿಕವಾಗಿ ನನ್ನ ಕ್ಷೇತ್ರದ ಐದು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿ ಪರಿವರ್ತನೆಗೊಳಿಸಲಾಗುವುದು ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಶ್ರೀ ಜಿ.ಎಸ್. ಪಾಟೀಲ ಅವರು ಹೇಳಿದರು.

ಅವರು ಇಂದು ರೋಣ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ), ಜಿಲ್ಲಾ ಪಂಚಾಯತ್ ಗದಗ ಹಾಗೂ ತಾಲ್ಲೂಕು ಪಂಚಾಯತ್ ರೋಣ ವತಿಯಿಂದ, ಶ್ರೀ ಎಸ್.ಆರ್. ಪಾಟೀಲ ಪ್ರತಿಷ್ಠಾನ ರೋಣ ಮತ್ತು ದೆಹಲಿಯ ಫೀಡ್‌ಬ್ಯಾಕ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ODF ಸುಸ್ಥಿರತೆ’ಯನ್ನು ಸಾಧಿಸಿದ ಕ್ಲಸ್ಟರ್ ಗಳಲ್ಲಿ ಅನುಷ್ಠಾನ ಕುರಿತು ತಾಲ್ಲೂಕು ಮಟ್ಟದ ದೃಷ್ಟಿಕೋನ ಮತ್ತು ಕಾರ್ಯ ಯೋಜನೆ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.

ಅನೇಕ ಮನೆಗಳಲ್ಲಿ ಶೌಚಾಲಯಗಳು ಸೌದೆ, ಕಾಳು-ಕಡಿ ಇಡುವ ಉಗ್ರಾಣಗಳಾಗಿರುವುದು ಹಾಗೂ ಮಹಿಳೆಯರು ಶೌಚಾಲಯ ಬಳಸಿದರೂ ಗಂಡಸರು ಇಂದಿಗೂ ತಂಬಿಗೆ ಕೈಯಲ್ಲಿ ಹಿಡಕೊಂಡು ಹೊಲದ ಕಡೆ ಹೋಗುತ್ತಿರುವುದು ವಿಷಾದದ ಸಂಗತಿ ಎಂದು ದೆಹಲಿಯ ಫೀಡ್‌ ಬ್ಯಾಕ್ ಫೌಂಡೇಶನ್ ಅಧ್ಯಕ್ಷರಾದ ಆಜಯ ಸಿನ್ಹಾರವರು ಕಾರ್ಯಾಗಾರ ನಡೆಸಿ ಹೇಳಿದರು. “ಊರಿನ ಒಂದು ಮನೆಯವರು ಬಯಲಿಗೆ ಹೋದರೂ ಇಡೀ ಊರಿನ ಆರೋಗ್ಯ ಅಪಾಯದಲ್ಲಿರುತ್ತದೆ. ಬಯಲಿನ ಮಲದ ಮೇಲೆ ಕೂತ ನೊಣ ನಮ್ಮ ಮಕ್ಕಳ ರೊಟ್ಟಿಯ ಮೇಲೂ ಬಂದು ಕೂರುತ್ತದೆ” ಎಂದು ಎಚ್ಚರಿಸಿದರು.

ದೆಹಲಿಯ ಫೀಡ್‌ಬ್ಯಾಕ್ ಫೌಂಡೇಶನ್ ಮತ್ತು ಎಸ್.ಆರ್.ಪಾಟೀಲ ಫೌಂಡೇಶನ್ ಗಳು ಆಯ್ಕೆ ಮಾಡಿರುವ 5 ಗ್ರಾಮ ಪಂಚಾಯತಿಗಳ ಮನೆಮನೆ ಸಮೀಕ್ಷೆ ನಡೆಸಿ ಬಳಕೆಯಾಗದ, ಅರ್ಧಕ್ಕೆ ನಿಂತ ಹಾಗೂ ದುರಸ್ತಿಯಲ್ಲಿರುವ ಶೌಚಾಲಯಗಳನ್ನು ಗುರುತಿಸಿ ಕಾಲಮಿತಿಯಲ್ಲಿ ಸರಿಪಡಿಸಲಾಗುವುದು; ಶೌಚಾಲಯದ ಬಳಿ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು: ಪ್ರತಿ ಗ್ರಾಮಸಭೆಯಲ್ಲಿ ಶೌಚಾಲಯ ಬಳಕೆಯ ಸ್ಥಿತಿ ಕುರಿತು ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮುಕುಲ ಜೈನ್ ತಿಳಿಸಿದರು.

ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಡಿ.ಆರ್. ಪಾಟೀಲ, ಫೀಡ್‌ಬ್ಯಾಕ್ ಫೌಂಡೇಶನ್‌ನ ಸದಸ್ಯರು, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ಶ್ರೀ ಎಂ.ವಿ. ಚಳಗೇರಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಚಂದ್ರಶೇಖರ ಕಂದಕೂರ (ರೋಣ), ಶ್ರೀ ಹೀರಾಲಾಲ ಜೇನಗಿ (ಗದಗ) ಹಾಗೂ ಶ್ರೀ ವಿಜಯಕುಮಾರ ಬೆಣ್ಣೆ (ಮುಂಡರಗಿ), ರೋಣ ತಾಲ್ಲೂಕು ಗ್ಯಾರಂಟಿ

ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಮಿಥುನ್ ಗೌಡ್ರ ಪಾಟೀಲ, ಹಿರಿಯರಾದ ಶ್ರೀ ವೀರಣ್ಣ ಶೆಟ್ಟರ್, ಶ್ರೀ ಶರಣಪ್ಪ ಬೆಟಗೇರಿ, ಶ್ರೀ ಟಿ.ಬಿ. ಅಳಗವಾಡಿ, ಶ್ರೀ ಎಸ್.ಆರ್. ಪಾಟೀಲ ಪ್ರತಿಷ್ಠಾನದ ಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು, ಗ್ರಾಮ ಪಂಚಾಯತಿಗಳ ಮುಖಂಡರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Editor

Leave a comment