ಕರುನಾಡು ಘರ್ಜನೆ ಸುದ್ದಿ : ಕೊಪ್ಪಳ ಜಿಲ್ಲಾ ಕುಕನೂರು ತಾಲೂಕು ಮನ್ನಾಪೂರ ಗ್ರಾಮದ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬ ಶ್ರದ್ಧೆ ಭಕ್ತಿಯಿಂದ ಮೊಹರಂ ಹಬ್ಬವಾಗಿದೆ ಆಚರಣೆ . ಈ ಹಬ್ಬದಲ್ಲಿ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಹತ್ತು ದಿನಗಳವರೆಗೆ ಮೊಹರಂ ಆಚರಣೆ ಮಾಡಲಾಗುತ್ತದೆ.
ಗೆ
ಕಡೆಯ ದಿನವಾದ ಇಂದು ಕುಕನೂರು ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ತುಂತುರು ಮಳೆಯ ನಡುವೆಯೂ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಗಳ ಜನರು ಒಗ್ಗಟ್ಟಾಗಿ ಭಾವೈಕ್ಯತೆಯಿಂದ ಡೋಲಿ ಮೆರವಣಿಗೆ ಮಾಡುವುದರೊಂದಿಗೆ ಹಬ್ಬ ಆಚರಿಸಿದರು. ಪ್ರತಿ ಡೋಲಿಗಳು ಬಣ್ಣ ಬಣ್ಣದ ಬಟ್ಟೆ, ಪರಪರಿ, ಪುಷ್ಪ ಮಾಲೆ, ವಿದ್ಯುತ್ ದೀಪ ಅಲಂಕಾರಕಂಗೊಳಿಸಿದವು. ಭಕ್ತರು ಡೋಲಿಗಳಿಗೆ ಉದೂ, ಕರ್ಪುರ,ನೈವೇದ್ಯ ನೀಡಿದರು. ಹಾದಿ ವುದ್ದಕ್ಕೂ ಹುಲಿ ಕುಣಿತ, ಗೆಜ್ಜೆ ಮಜಿಲು, ನೋಡುಗರನ್ನು ಮನ ಸೆಳೆಯಿತು. ಅದರಲ್ಲಿ ಬೀಬಿ ಪಾತಿಮಾ ಅವರ ಪವಾಡವೇ ನಡೆದವು.
ಈ ಸಂದರ್ಭದಲ್ಲಿ ಮನ್ನಾಪೂರ ಗ್ರಾಮದ ಗುರು ಹಿರಿಯರ ಹಾಗು ಇಸ್ಲಾಂ ಕಮೀಟಿಯ ಸದಸ್ಯರು ಹಾಗೂ ಉಪಸ್ಥಿತರಿದ್ದರು.