ಕರುನಾಡು ಘರ್ಜನೆ ಸುದ್ದಿ : ಗದಗ ಬೆಟಗೇರಿ ನಗರಸಭೆ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿರುದ್ಧ ಧಾರವಾಡ ಹೈಕೋರ್ಟ್ ಬೆಂಚ್ ಮೇಟ್ಟಿಲೇರಿದ ಗದಗ ಬೆಟಗೇರಿ ನಗರಸಭೆ ಕಾಂಗ್ರೆಸ್ಸಿನ 1ನೇ ವಾಡಿನ ಸದಸ್ಯೆ ಶ್ರೀಮತಿ ಲಕ್ಷ್ಮೀ ಅನೀಲಕುಮಾರ ಸಿದ್ದಮ್ಮನಹಳ್ಳಿ ಹಾಗೂ 10ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಇಮ್ತಿಯಾಜಅಹಮದ ಇಬ್ರಾಹಿಂಸಾಬ ಶಿರಹಟ್ಟಿ…? ಗದಗ ಬೆಟಗೇರಿ ನಗರಸಭೆಯ 2ನೇ ಅವಧಿಗೆ ಸಂಬಂಧಿಸಿದಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ (ಜನರಲ್)ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ (ಜನರಲ್ ವುಮನ್) ಮೀಸಲಾತಿ ಪ್ರಕಟವಾಗಿದೆ. ಮೀಸಲಾತಿ ರೊಟೆಷನ್ ಸಮರ್ಪಕವಾಗಿ ಅನುಸರಿಸಿಲ್ಲವೆಂದು ಈಗಿನ ಮೀಸಲಾತಿ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಅನೀಲಕುಮಾರ ಸಿದ್ದಮ್ಮನಹಳ್ಳಿ ಹಾಗೂ ಇಮ್ತಿಯಾಜಅಹಮದ ಶಿರಹಟ್ಟಿಯವರು ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ (GW)…? ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ(ಅ) ಪುರುಷ ವರ್ಗಕ್ಕೆ ಮೀಸಲಾತಿ…?ಕೊಡಬೇಕೆಂದು ಧಾರವಾಡ ಹೈಕೋರ್ಟ್ ಬೆಂಚ್ ದಲ್ಲಿ ದಿನಾಂಕ 28-8-2024ರಂದು ಅರ್ಜಿ ಸಲ್ಲಿಸಿದ್ದಾರೆಂಬುದು ಈಗ ಬಹು ದೊಡ್ಡ ಚರ್ಚೆ ಆಗುತ್ತಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ(GW)…? ಮೀಸಲಾತಿಬೇಕೆಂದು ನಗರಸಭೆಯ ಕಾಂಗ್ರೆಸ್ ಸದಸ್ಯೆ ಶ್ರೀಮತಿ ಲಕ್ಷ್ಮೀ ಅನೀಲಕುಮಾರ ಸಿದ್ದಮ್ಮನಹಳ್ಳಿ ಅರ್ಜಿ ಸಲ್ಲಿಸಿದ್ದರೆ.ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಎ(ಅ) ಪುರುಷ ವರ್ಗಕ್ಕೆ..?ಮೀಸಲಾತಿ ಕೊಡಬೇಕೆಂದು ನಗರಸಭೆಯ ಕಾಂಗ್ರೆಸ್ ಸದಸ್ಯ ಇಮ್ತಿಯಾಜಅಹಮದ ಶಿರಹಟ್ಟಿಯವರು ಅರ್ಜಿ ಸಲ್ಲಿಸಿದ್ದಾಗಿ ತಿಳಿದು ಬಂದಿದೆ. ಮೀಸಲಾತಿ ವಿರುದ್ಧ ಅರ್ಜಿ ಸಲ್ಲಿಸಿರುವ ನಗರಸಭೆಯ ಸದಸ್ಯರ ಅರ್ಜಿಗಳನ್ನು ಧಾರವಾಡ ಹೈಕೋರ್ಟ್ ಬೆಂಚ್ ದಿನಾಂಕ 29-8-2024 ರಂದು ಪ್ರಾಥಮಿಕ ವಿಚಾರಣೆ ನಡೆಸಿದ ನಂತರ ಧಾರವಾಡ ಹೈಕೋರ್ಟ ಬೆಂಚ್ ಘನವೆತ್ತ ನ್ಯಾಯಾಧೀಶರಾದ H. P. ಸಂದೇಶ ಅವರು ಹೆಚ್ಚಿನ ವಿಚಾರಣೆಗಾಗಿ ಸೆಪ್ಟೆಂಬರ್ 11-2024ಕ್ಕೆ ಮುಂದೂಡಿದ್ದಾಗಿ ತಿಳಿದು ಬಂದಿದೆ. ಅರ್ಜಿದಾರರ ಪರವಾಗಿ ಖ್ಯಾತ ನ್ಯಾಯವಾದಿಗಳಾದ ಶ್ರೀ K.L.ಪಾಟೀಲರು ವಾದ ಮಂಡಿಸಿದ್ದಾಗಿ ತಿಳಿದು ಬಂದಿದೆ. ಮುಂದಿನ ವಿಚಾರಣೆ ನಡೆಯುವವರೆಗೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಆಗುತ್ತಾ…? ಇದರಿಂದ ಗದಗ ಬೆಟಗೇರಿ ನಗರಸಭೆಯ 2ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆಗೆ ಗ್ರಹಣ ಹಿಡಿದಂತಾಯ್ತಾ..? ಎಂಬ ಪ್ರಶ್ನೆ ಅವಳಿ ನಗರದಲ್ಲಿ ಜೋರಾಗಿದೆ.
ಗದಗ ಬೆಟಗೇರಿ ನಗಸಭೆಯ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿರುದ್ಧ ಹೈಕೋರ್ಟ್ ಬೆಂಚ್ ಮೆಟ್ಟಿಲೇರಿದ ನಗರ ಸಭೆಯ ಹಾಲಿ ಕಾಂಗ್ರೆಸ್ ಸದಸ್ಯರು.?
ಕರುನಾಡು ಘರ್ಜನೆ ಸುದ್ದಿ : ಗದಗ ಬೆಟಗೇರಿ ನಗರಸಭೆ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿರುದ್ಧ ಧಾರವಾಡ ಹೈಕೋರ್ಟ್ ಬೆಂಚ್ ಮೇಟ್ಟಿಲೇರಿದ ಗದಗ ಬೆಟಗೇರಿ ನಗರಸಭೆ ಕಾಂಗ್ರೆಸ್ಸಿನ 1ನೇ ವಾಡಿನ ಸದಸ್ಯೆ ಶ್ರೀಮತಿ ಲಕ್ಷ್ಮೀ ಅನೀಲಕುಮಾರ ಸಿದ್ದಮ್ಮನಹಳ್ಳಿ ಹಾಗೂ 10ನೇ…