ಕರುನಾಡು ಘರ್ಜನೆ ಸುದ್ದಿ ಗದಗ 29: ಗದಗ, ಹಾವೇರಿ ಜಿಲ್ಲೆಯ ವಕ್ಫ್ ಸ್ವತ್ತುಗಳ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸನ್ಮಾನ್ಯ ಶ್ರೀಯುತ ಬಿ. ಝಡ್. ಜಮೀರ ಅಹ್ಮದ ಖಾನ ಮಾನ್ಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಸನ್ಮಾನ್ಯ ಶ್ರೀಯುತ ಅನ್ವರಭಾಷಾ ಕೆ. ಮಾನ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ವಕ್ಷ ಮಂಡಳಿ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ “ವಕ್ಫ್ ಅದಾಲತ” ಹಾವೇರಿ ನಗರದ ಆರ್.ಟಿ.ಓ. ಕಚೇರಿ ಹತ್ತಿರದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ದಿನಾಂಕ 03-09-2024 ರಂದು ಬೆಳಿಗ್ಗೆ 10-00 ಗಂಟೆಗೆ ಜರುಗಲಿದೆ.
ಆದ್ದರಿಂದ ಗದಗ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಯ ಮುತವಲ್ಲಿ, ಮುಖ್ಯಸ್ಥರಿ, ಪದಾಧಿಕಾರಿಗಳು ಹಾಗೂ ಅಡಳಿತಾಧಿಕಾರಿಗಳು ಸದರಿ ವಕ್ಫ್ ಆದಾಲತ ಪ್ರಕ್ರಿಯೆಯಲ್ಲಿ ಹಾಜರಾಗಿ ತಮ್ಮ ಕುಂದು ಕೊರತೆಗಳ ಪರಿಹಾರಕ್ಕಾಗಿ ಅರ್ಜಿಗಳನ್ನು ಅದೇ ದಿನ ಬೆಳಿಗ್ಗೆ 9-00 ಗಂಟೆಗೆ ಸಲ್ಲಿಸಿ ಮಾನ್ಯ ಸಚಿವರು ಹಾಗೂ ಅಧ್ಯಕ್ಷರಿಂದ ಸಂವಾದ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಲು ಜಿ.ಎಂ. ದಂಡಿನ ಗದಗ ಅಧ್ಯಕ್ಷರು ಜಿಲ್ಲಾ ವಕ್ಷ ಸಲಹಾ ಸಮಿತಿ ಗದಗ ಹಾಗೂ ಗದಗ ಜಿಲ್ಲಾ ವಕ್ಫ್ ಅಧಿಕಾರಿ ರೆಹಮುತುಲ್ಲಾ ಪೆಂಡಾರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.