ಕರುನಾಡು ಘರ್ಜನೆ ಸುದ್ದಿ ಗದಗ ೦೩: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಗದಗ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ಗೋಷ್ಠಿ ಜರುಗಿತು. ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗದಗ ಜಿಲ್ಲಾ ಪ್ರಧಾನ ಸಂಚಾಲಕರಾದ ಬಾಲರಾಜ ಅರಬರ ಮಾತನಾಡಿ ಸಾವಿರಾರು ವರ್ಷಗಳ ಹಸಿವು, ಅಸ್ಪಶ್ಯತೆ, ಅಜ್ಞಾನ, ಮಹಿಳಾ ಶೋಷಣೆ ಮುಂತಾದವುಗಳಿAದ ಕೂಡಿದ್ದ ಅಸಮಾನತೆ ಸಮಾಜದ ಬದಲಾವಣೆಗಾಗಿ ಮತ್ತು ಭಾರತದ ಪ್ರಗತಿಗಾಗಿ ಸ್ವಾತಂತ್ರ್ಯ ಸಮಾನತೆ, ಸಹೋದರತೆಗಳ ನೆಲೆಯ ಮೇಲೆ ಸಮಗ್ರ ಸಂವಿಧಾನವನ್ನು ರಚಿಸಿ ಭದ್ರ ಬುನಾದಿಯನ್ನು ಹಾಕಿ, ಹುಟ್ಟಿದ ಪ್ರತಿಯೊಬ್ಬರೂ ಘನತೆ, ಗೌರವಗಳಿಂದ ಬದುಕಲು, ಆಸ್ತಿ-ಅಧಿಕಾರ, ಸಂಪತ್ತು ಇವುಗಳ ಸಮಾನ ಹಂಚಿಕೆಗಾಗಿ ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಶ್ರಮಿಸಿದವರು ಮಹಾಚೇತನ ಡಾ. ಬಾಬಾಸಾಹೇಬ ಅಂಬೇಡ್ಕರರು
ಅಂಬೇಡ್ಕರವರ ವಿಚಾರಗಳ ಪ್ರೇರಣೆಯಾಗಿಸಿಕೊಂಡು ಕರ್ನಾಟಕ ನೆಲದಲ್ಲಿ ಪ್ರೊ. ಬಿ. ಕೃಷ್ಣಪ್ಪನವರ ನಾಯಕತ್ವದಲ್ಲಿ ಪ್ರಾರಂಭವಾದ ದಲಿತ ಸಂಘರ್ಷ ಸಮಿತಿ ನಾಡಿನ ಉದ್ದಗಲಕ್ಕೂ ಶೋಷಕ ಶಕ್ತಿಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಮೂಲಭೂತ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ಪ್ರತಿಭಟನೆ, ಸಭೆ-ಸಮಾರಂಭ, ಧರಣಿ, ಮುತ್ತಿಗೆ, ಜಾಥಾ, ಚರ್ಚೆ, ಸಂವಾದ, ಕಾಯ್ದೆ ಕಾನೂನುಗಳಿಗೆ ಒತ್ತಾಯಿಸಿ ನಡೆಸಿದ ಚಳುವಳಿಗಳು ಅಸಂಖ್ಯಾ ಪ್ರಶ್ನಿಸುವ ಪ್ರತಿಭಟಿಸುವ ಮತ್ತು ವೈಚಾರಿಕ ವೈಜ್ಞಾನಿಕತೆಯನ್ನು ಬಿತ್ತುತ್ತಿರುವ ಸಾವಿರಾರು ಕಾರ್ಯಕರ್ತರ ತ್ಯಾಗ ಬಲಿದಾನಗಳಿಂದ ಕಟ್ಟಿದ ನಮ್ಮ ದಲಿತ ಚಳುವಳಿಗೀಗ ೫೦ ವರ್ಷಗಳು. ಇದೇ ದಲಿತ ಚಳವಳಿ ಕರ್ನಾಟಕದ ಜನ ಚಳುವಳಿಗಳಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ.
ಆದರೆ ಕೆಲವು ಮತೀಯ ಶಕ್ತಿಗಳ ವಿಚಿದ್ರಕಾರಿ ನೀತಿಗಳಿಂದ ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ಸಾವಿರಾರು ಜಾತಿ, ಉಪಜಾತಿಗಳನ್ನಾಗಿ ಛಿದ್ರಗೊಳಿಸಿ ಅಸಮಾನತೆಯನ್ನು ಸೃಷ್ಟಿಸಿದರು. ಇಂದು ಇದೇ ಕೋಮುವಾದಿಗಳು ಒಕ್ಕೂಟಗಳಿಂದ ರಚನೆಯಾದ ದೇಶವನ್ನು ಏಕತೆಯ ಹೆಸರಿನಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ನಗಣ್ಯ ಮಾಡಿ, ಒಂದು ದೇಶ, ಒಂದು ಕಾನೂನು, ಒಂದು ಭಾಷೆ, ಒಂದು ಸಂಸ್ಕೃತಿ, ಒಂದೇ ಧರ್ಮ ಎಂದು ಪಠಿಸುತ್ತಿದ್ದಾರೆ.
ಇಂತಹ ಮತೀಯ ಮತ್ತು ಜಾತಿವಾದಿ ಶಕ್ತಿಗಳ ವಿರುದ್ಧ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ದ.ಸಂ.ಸ. ದ ನಾಯಕತ್ವ ವಹಿಸಿರುವ ಮಾವಳ್ಳಿ ಶಂಕರವರು ಸಮ ಸಮಾಜದ ಕನಸುಗಳನ್ನು ನನಸಾಗಿಸಲು ನಾಡಿನ ಉದ್ದಗಲಕ್ಕೂ ನೀಲಿ ಅಭಿಯಾನವನ್ನು ಕೈಗೊಂಡು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಚಳವಳಿಗೆ ಹೊಸ ಚೈತನ್ಯವನ್ನು ತುಂಬಿ ಮುನ್ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಪೂರ್ವಿಕರಾದಿಯಾಗಿ ಡಾ. ಬಿ. ಆರ್. ಅಂಬೇಡ್ಕರ ಅವರ ವಿಚಾರಧಾರೆಗಳನ್ನು ಜನಾಂದೋಲವನ್ನಾಗಿ ರೂಪಿಸುವ ಅನಿವಾರ್ಯವಿರುವ ಕಾರಣ ಇದೇ ಅಕ್ಟೋಬರ ೫ ಮತ್ತು ೬, ೨೦೨೪ ರಂದು ತುಮಕೂರು ನಗರದ ಶ್ರೀ ದೇವರಾಜ ಅರಸು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಪಕ್ಕ ಎಂಪ್ರೆಸ್ ಅಡಿಟೋರಿಯಂನಲ್ಲಿ ರಾಜ್ಯ ಸರ್ವ ಸದಸ್ಯರ ಮಹಾಅಧಿವೇಶನ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊAಡರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಗದಗ್ ಜಿಲ್ಲಾ ಪ್ರಧಾನ ಸಂಚಾಲಕರಾದ ಬಾಲರಾಜ್ ಅರಬರ, ದಸಂಸ ಒಕ್ಕೂಟ ಜಿಲ್ಲಾ ಸಂಚಾಲಕರಾದ ನಾಗರಾಜ್ ಗೋಕಾವಿ, ವೆಂಕಟೇಶಯ್ಯ, ಮುತ್ತಪ್ಪ ಭಜಂತ್ರಿ, ಮಾಂತೇಶ್ ನಡಗೇರಿ, ವಾಸುದೇವ ಹುಣಿಸಿಮರದ, ಗುರುರಾಜ್ ಭಜಂತ್ರಿ, ಸಂತೋಷ್ ಬಣಕಾರ, ಮುತ್ತು ಚೌಡಣ್ಣವರ, ಪ್ರಕಾಶ್ ಗಡ್ಡದವರು, ಸಂತೋಷ್ ಜಾಲಣ್ಣವರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.