Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ವಿಶೇಷ

ಡಾ, ಬಾಬಾಸಾಹೇಬ್ ಅಂಬೇಡ್ಕರ ಅವರ ಆಶಯದಂತೆ ಬೌದ್ಧ ಧಮ್ಮ ಸ್ವೀಕರಿಸಿದ ಗದಗ ಜಿಲ್ಲೆಯ ದಲಿತ ಕುಟುಂಬಗಳು

ಕರುನಾಡು ಘರ್ಜನೆ ಸುದ್ದಿ ಗದಗ: ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ತಮ್ಮ ಇಡೀ ಜೀವಿತಾವಧಿಯಲ್ಲಿ ಹಿಂದೂ ಧರ್ಮದಲ್ಲಿನ ಜಾತಿಯತೆ,ಮೇಲು ಕೀಳು, ವರ್ಣಾಶ್ರಮ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿ ಕೊನೆಗೆ “ಹಿಂದುವಾಗಿ ಹುಟ್ಟಿದ್ದೆನೆ ಹಿಂದುವಾಗಿ ಸಾಯಲಾರೆ”ಎಂಬ ಅವರು ಆಡಿದ ಮಾತಿನಂತೆ 1956 ಅಕ್ಟೋಬರ್ 14…

ಕರುನಾಡು ಘರ್ಜನೆ ಸುದ್ದಿ ಗದಗ: ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ತಮ್ಮ ಇಡೀ ಜೀವಿತಾವಧಿಯಲ್ಲಿ ಹಿಂದೂ ಧರ್ಮದಲ್ಲಿನ ಜಾತಿಯತೆ,ಮೇಲು ಕೀಳು, ವರ್ಣಾಶ್ರಮ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿ ಕೊನೆಗೆ “ಹಿಂದುವಾಗಿ ಹುಟ್ಟಿದ್ದೆನೆ ಹಿಂದುವಾಗಿ ಸಾಯಲಾರೆ”ಎಂಬ ಅವರು ಆಡಿದ ಮಾತಿನಂತೆ 1956 ಅಕ್ಟೋಬರ್ 14 ರಂದು ಆವತ್ತು ವಿಜಯ ದಶಮಿಯದಿನ ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧಮ್ಮವನ್ನು ಸ್ವಿಕರಿಸಿದರು.1956 ಅಕ್ಟೋಬರ್ 14 ರ ನಂತರ ಪ್ರತಿ ವರ್ಷ ವಿಜಯ ದಶಮಿಯದಿನ ನಾಗಪುರದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ದೇಶ,ವಿದೇಶಗಳಿಂದ ಅಂಬೇಡ್ಕರ ಅವರ ಅನುಯಾಯಿಗಳು ಆವತ್ತಿನ ದಿನ ನಾಗಪುರದಲ್ಲಿ ಸೇರುತ್ತಾರೆ.

ಹಾಗೇಯೆ ಪ್ರತಿ ವರ್ಷವೂ ನಮ್ಮ ಗದಗ ಜಿಲ್ಲೆಯಿಂದ ನೂರಾರು ಜನ ನಾಗಪುರದ ಧಮ್ಮ ದೀಕ್ಷಾ ಭೂಮಿಗೆ ಬೇಟಿ ನೀಡುತ್ತಾರೆ.ಈ ಬಾರಿ 58 ನೇ ವರ್ಷದ ಧಮ್ಮ ಪರಿವರ್ತನಾ ದಿನಾಚರಣೆಗೆ ಗದಗ ಜಿಲ್ಲೆಯಿಂದ ಸುಮಾರು 160 ಜನ ನಾಲ್ಕು ಬಸ್ ಗಳ ಮೂಲಕ ಭಾಗವಹಿಸಿದ್ದಾರೆ.

 

58 ನೇ ವರ್ಷದ ಧಮ್ಮ ಪರಿವರ್ತನಾ ದಿನದಂದು ಡಾ.ಬಾಬಾ ಸಾಹೇಬರ ಆಶಯದಂತೆ ಗದಗ ಜಿಲ್ಲೆಯ ದಲಿತ ಮುಖಂಡರಾದ ಶರೀಫ್ ಬಿಳೆಯಲಿ,ಡಾ.ರಾಮಚಂದ್ರ ಹಂಸನೂರ ಅವರ ಕುಟುಂಬ ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್ ಹೊಸಮನಿ,ಬಾಲೇಹೊಸೂರಿನ ಕೇಶವ ಕಟ್ಟಿಮನಿ,ಮಂಜುನಾಥ ಚಲವಾದಿ,ಸಂಜಯ್ ಕನಕಮ್ಮನವರ ಅವರು ದೇಶದ ವಿವಿಧ ಬೌದ್ಧ ಕೇಂದ್ರಗಳ ಬಂತೇಜಿ ಅವರು ಸಮ್ಮುಖದಲ್ಲಿ ಬೌದ್ಧ ಧಮ್ಮವನ್ನು ಸ್ವೀಕಾರ ಮಾಡಿದರು.ಈ ಧಮ್ಮ ದೀಕ್ಷಾ ಸ್ವೀಕಾರ ಸಮಾರಂಭಕ್ಕೆ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಮೊಮ್ಮಗ ಭೀಮರಾವ್ ಯಶವಂತರಾವ್ ಅಂಬೇಡ್ಕರ ಅವರು ಉಪಸ್ಥಿತರಿದ್ದರು. ಅವರು ಧಮ್ಮ ದೀಕ್ಷಾ ಸ್ವೀಕರಿಸಿದ ಗದಗ ಜಿಲ್ಲೆಯವರಿಗೆ ಧಮ್ಮ ದೀಕ್ಷಾ ಪ್ರಮಾಣ ಪತ್ರವನ್ನು ನೀಡಿದರು.

 

ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ದಲಿತ ಮುಖಂಡರಾದ ಆನಂದ ಶಿಂಗಾಡಿ,ಮುತ್ತು ಬಿಳೆಯಲಿ,ಯಲ್ಲಪ್ಪ ರಾಮಗಿರಿ,ಮಂಜುನಾಥ ಗೊಂದಿಯವರ,ಅನಂತ ಕಟ್ಟಿಮನಿ,ರಮೇಶ್ ಕೋಳೂರು,ಬಸವರಾಜ ಚಲವಾದಿ,ಹುಚ್ಚಪ್ಪ ಚಲವಾದಿ,ಸತ್ಯಪ್ಪ ಚಲವಾದಿ.ಗದಗ ಜಿಲ್ಲೆಯ ಹಲವಾರು ಜನ ಉಪಸ್ಥಿತರಿದ್ದರು.

 

 

Editor

Leave a comment