ಕರುನಾಡು ಘರ್ಜನೆ ಸುದ್ದಿ : ಗದಗ ತಾಲೂಕಿನ ಜಂದಿ ಪೀರ ದರ್ಗಾ ಹತ್ತಿರ ಇರುವ ಕೊಠಡಿಯಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಶನಿವಾರ ನಡೆದಿದೆ.
ನೇಣಿಗೆ ಶರಣಾದ ವ್ಯಕ್ತಿ ನಜೀರಬಾಷಾ ತಂದೆ ಹುಸೇನಸಾಬ ಗೋರಲೀಕೊಪ್ಪ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಾ : ಹಿರೇವಡಟ್ಟಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ವಯಸ್ಸು : 39 ವರ್ಷ ಎಂದು ಅಂದಾಜಿಸಲಾಗಿದೆ.
ಸಾಲ ಮಾಡಿ , ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ದಿ : 26-10/2024 ರಂದು ಶನಿವಾರ ಗದಗ ತಾಲೂಕಿನ ಜಂದಿ ಪೀರ ದರ್ಗಾ ಹತ್ತಿರ ಇರುವ ಉಗ್ರಾಣ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.