ಕರುನಾಡು ಘರ್ಜನೆ ಸುದ್ದಿ ಬೆಳಗಾವಿ : ಜಿಲ್ಲೆಯ ನಿಪ್ಪಾಣಿ ನಗರ ಹೊರವಲಯದ ಸ್ತವನಿಧಿ ಘಟ್ಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.
ಖಾನಾಪುರ ತಾಲ್ಲೂಕಿನ ಜಾಂಬೋಟಿಯ ನಾರಾಯಣ ನಾಗು ಪಾರವಾಳಕರ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.ಜಾಂಬೋಟಿಯ ರೇಷ್ಮಾ ಕುಡತುರಕರ ಹಾಗೂ ಶಂಕರ ಪಾರವಾಳಕರ ಸ್ಥಿತಿ ಗಂಭೀರವಾಗಿದ್ದು, 15 ಜನರಿಗೆ ಸಣ್ಣ–ಪುಟ್ಟ ಗಾಯವಾಗಿವೆ. ತಮಿಳುನಾಡಿನಿಂದ ನಿಪ್ಪಾಣಿ ಮಾರ್ಗವಾಗಿ ಮುಂಬೈಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಜೀಪ್‌ಗೆ ಗುದ್ದಿದೆ. ಮತ್ತೊಂದು ಬದಿಯಲ್ಲಿದ್ದ ಎರಡು ಕಾರು ಮತ್ತು ಒಂದು ಬೈಕ್ಗೂ ಲಾರಿ ಅಪ್ಪಳಿಸಿದೆ
ಜಾಂಬೋಟಿ ಗ್ರಾಮಸ್ಥರು ಜೀಪ್ನಲ್ಲಿ ಕೊಲ್ಹಾಪುರದ ಮಹಾಲಕ್ಷ್ಮಿ ದೇವಿ ಮತ್ತು ಜ್ಯೋತಿಬಾ ದೇವಸ್ಥಾನಕ್ಕೆ ಹೊರಟಿದ್ದರು.
ಘಟನೆ ಸಂಬಧ ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.