ಕರುನಾಡು ಘರ್ಜನೆ ಸುದ್ದಿ ಗದಗ: ಉತ್ತರ ಪ್ರದೇಶದ ಸಂಬಲ್‌ನಲ್ಲಿ ನಡೆದ ಗೋಲಿ ಬಾರ್‌ನಲ್ಲಿ ಐದು ಜನರ ಹತ್ಯೆ ನಡೆಸಿದ ಘಟನೆಯನ್ನು ವಿರೋಧಿಸಿ ಹಾಗೂ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಎಸ್‌ಡಿಪಿಐನಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದಂತಹ ಎಸ್‌ಡಿಪಿಐ ಗದಗ ಜಿಲ್ಲಾಧ್ಯಕ್ಷರು ಬಿಲಾಲ್ ಗೋಕಾವಿ ಮಾತನಾಡಿ, ದೇಶದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳು(ಮಸೀದಿ, ಮದರಸಾ, ದರ್ಗಾ ) ಇರಬಾರದು ಎಂಬ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸಂಘ ಪರಿವಾರದ ಈ ಆಡಳಿತ ವ್ಯವಸ್ಥೆಗೆ ಪೊಲೀಸ್ ವ್ಯವಸ್ಥೆ ಕೂಡ ಪೂರಕವಾಗಿ ಕೆಲಸ ಮಾಡುತ್ತಿದೆ. ಈ ಅನ್ಯಾಯದ ವಿರುದ್ಧ ರಾಷ್ಟ್ರದ್ಯಂತ ಸೋಶಿಯಲ್ ಡೆಮೋಕ್ರ್ಯಾಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಹೋರಾಟ ಮಾಡಲಾಗುತ್ತಿದೆ.
ಉತ್ತರ ಪ್ರದೇಶದ ಸಂಬಲ್ ನಲ್ಲಿ ಮಸೀದಿಯ ಸರ್ವೆ ನಡೆಸಲು ಅನುಮತಿ ನೀಡಿರುವುದು ಪ್ರಾರ್ಥನಾ ಸ್ಥಳ ಸಂರಕ್ಷಣಾ ಕಾಯ್ದೆ 1991ರಡಿ ಸ್ಪಷ್ಟ ಉಲ್ಲಂಘನೆ ಯಾಗಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ಉತ್ತರ ಪ್ರದೇಶ ದಲ್ಲಿ ಕಾನೂನು ಸುವ್ಯವಸ್ಥೆ ಹದ ಗೆಟ್ಟಿದ್ದು, ಜಂಗಲ್ ರಾಜ್ಯವಾಗಿದೆ ಎಂದು ದೂರಿದರು. ಪೋಲೀಸರ ಲಾಠಿ ಬೂಟು, ಗುಂಡೆಟಿಗೆ ಸಮಾಜ ಹೆದರುವುದಿಲ್ಲ,ಜೀವವನ್ನು ಪಣಕ್ಕೆ ಇಟ್ಟಾದರೂ ಸರಿ ನ್ಯಾಯವನ್ನು ಪಡೆದು ಕೊಳ್ಳುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ SDPI ಗದಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ, ಉಪಾಧ್ಯಕ್ಷರು ಹಿದಾಯತುಲ್ಲಾ ಕಾಗದಗಾರ,ಕಾರ್ಯದರ್ಶಿ ಇರ್ಫಾನ್ ಗುಳಗುಂದಿ, ಗದಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಫ್ಫಾನ್ ತರಫ್ದಾರ್, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಕಾಗದಗಾರ್, ಸಯ್ಯದ್ ಮದಾರ, ಹಾಗೂ ಮಾಜಿ ನಗರಸಭಾ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರು M. ಇಸ್ಮಾಯಿಲ್ ಸಾಬ್,ಅಬ್ದುಲ್ಲಾ ಕೊಟ್ಟೂರ್, ಸಲೀಂ ಅಹ್ಮದ್ ಮಾಳೆಕೊಪ್ಪ, ಸಾದಿಕ್ ದೊಡ್ಡಮನಿ, ಸಾದಿಕ್ ಶಿರಹಟ್ಟಿ,ಮುಸ್ತಾಕ್ ಕಟ್ಟಿಮನಿ, ಹಸ್ಸನ್ ನಾಗನೂರ್, ಸಮೀರ್ ಕೊಟ್ಟೂರು,ಮುಸ್ತಾಕ್ ಹೊಸಮನಿ, ಅನ್ವರ್ ಮುಲ್ಲಾ, ಸಮೀರ್ ಕೊಲ್ಕರ್, ಪಕ್ಷದ ಕಾರ್ಯಕರ್ತರು, ಮಹಿಳೆಯರು, ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆ ಉದ್ದೇಶಿಸಿ ಅನ್ವರ್ ಬಾಗೇವಾಡಿ ಅವರು ಮಾತನಾಡಿ ಶಾಂತ ರೀತಿಯಿಂದ ಪ್ರತಿಭಟನೆ ಯಲ್ಲಿ ಭಾಗವಹಿಸಿದ ಎಲ್ಲರಿಗೂ ವಂದಿಸಿ,ಪ್ರತಿಭಟನೆಗೆ ಸಹಕರಿಸಿದ ಪೊಲೀಸ್ ಇಲಾಖೆ ಅವರಿಗೂ ಕೂಡ ಅಭಿನಂದನೆ ಸಲ್ಲಿಸಿದರು.