ಕರುನಾಡು ಘರ್ಜನೆ ಸುದ್ದಿ : ನವದೆಹಲಿ (ಡಿ.26): ತೀವ್ರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನ್‌ಮೋಹನ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನ್‌ಮೋಹನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು.
ದುಃಖವಾಗಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ನಮ್ಮ ದೇಶಕ್ಕೆ ನೀವು ಮಾಡಿದ ಸೇವೆಗೆ ಧನ್ಯವಾದಗಳು. ನಿಮ್ಮ ಆರ್ಥಿಕ ಕ್ರಾಂತಿಗಾಗಿ ನೀವು ಯಾವಾಗಲೂ ನೆನಪಿನಲ್ಲಿರುತ್ತೀರಿ ಮತ್ತು ಪ್ರಗತಿಪರ ಬದಲಾವಣೆಗಳನ್ನು ನೀವು ದೇಶಕ್ಕೆ ತಂದಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.
ಆದರೆ, ಟ್ವೀಟ್‌ಪೋಸ್ಟ್ ಮಾಡಿದ ಕೆಲ ಹೊತ್ತಿನಲ್ಲಿ ಅದನ್ನು ಡಿಲೀಟ್ ಕೂಡ ಮಾಡಿದ್ದರಾದರೂ, ಇದನ್ನು ಎಎನ್‌ಐ ಪೋಸ್ಟ್ ಮಾಡಿದೆ. ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಏಮ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.