ಕರುನಾಡು ಘರ್ಜನೆ ಸುದ್ದಿ : ಆಗ್ರಾ ಬೀದಿ ನಾಯಿಗಳ ಅಟ್ಟಹಾಸ ಮುಂದುವರೆದಿದ್ದು, ಆಗ್ರಾದ ಈದ್ಗಾ ಕಾಲೋನಿಯಲ್ಲಿ ಬೆಳಗ್ಗೆ 8:30ರ ಸುಮಾರಿಗೆ
ವಾಕಿಂಗ್ ಗೆ ಹೋಗಿದ್ದ ಮಹಿಳೆ ಮೇಲೆ ನಡುರಸ್ತೆಯಲ್ಲೇ 8 ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ವಾಕಿಂಗ್ಗೆ ತೆರಳಿದ್ದ ಮಹಿಳೆ ಮೇಲೆ ಎಂಟು ನಾಯಿಗಳ ದಂಡು ದಾಳಿ ಮಾಡಿದೆ.
ಮಹಿಳೆ ಕೈಯಲ್ಲಿ ನಾಯಿಗಳನ್ನು ಓಡಿಸಿ ತನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ನಾಯಿಗಳ ದಂಡು ಆಕೆಯ ಮೇಲೆ ದಾಳಿ ಮಾಡಿದೆ. ಮಹಿಳೆ ಕಿರುಚುತ್ತಾ ನೆಲದ ಮೇಲೆ ಬೀಳುತ್ತಾ ಮತ್ತು ನಾಯಿಗಳು ಅವಳ ಬಟ್ಟೆಗಳನ್ನು ಹಲ್ಲುಗಳಿಂದ ಎಳೆದುಕೊಂಡು ಖಾಲಿ ಜಾಗಕ್ಕೆ ಕರೆದೊಯ್ಯುತ್ತವೆ.ಮೈ ತುಂಬ ಗಾಯ ಗಳಾಗಿವೆ ಯಂದು ವರದಿ ಯಾಗಿದೆ.