ಕರುನಾಡು ಘರ್ಜನೆ ಸುದ್ದಿ ಹೊಸಪೇಟೆ: ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವೇದಿಕೆಯಲ್ಲಿ ಭಾಷಣ ಆರಂಭಿಸುವ ಮೊದಲು ಗಣ್ಯರ ಪರಿಚಯಿಸುವ ವೇಳೆ ಮೊದಲ ಸಾಲಿನಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿಯವರ (ಐಎಎಸ್ ಅಧಿಕಾರಿ) “ನೀನ್ಯಾಕೆ ಇಲ್ಲಿ ಕೂತಿದ್ದೀಯಾ” ಎಂದು ಸಿಎಂ ಸಿದ್ದರಾಮಯ್ಯ ಗದರಿಸಿ ಎಬ್ಬಿಸಿ ಕಳುಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮಾಜಿ ಶಾಸಕ ಸಿರಾಜ್ ಶೇಖ್ ಅವರ ಪುತ್ರನ ಆರತಕ್ಷತೆ ಸಮಾರಂಭದಲ್ಲಿ ಆಯೋಜಿಸಿದ್ದ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ನವ ವಿವಾಹಿತರಿಗೆ ಶುಭ ಕೋರಿದರು. ಸಮಾರಂಭದ ವೇದಿಕೆಯಲ್ಲಿ ಸಿದ್ದರಾಮಯ್ಯ ಭಾಷಣದ ವೇಳೆ ಮೊದಲ ಸಾಲಿನ ಕುರ್ಚಿಯಲ್ಲಿ ಕುಳಿತಿದ್ದ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ರನ್ನು ಸಿದ್ದರಾಮಯ್ಯ ಯಾರು ನೀವು…ಎಂದು ಕೇಳಿ ಡಿಸಿನಾ ನೀನು ಡಿಸಿ.. ನೀನ್ಯಾಕೆ ಇಲ್ಲಿ ಕುಳಿತಿದ್ದೀಯಾ.. ಸ್ವಾಮೀಜಿ ಪಕ್ಕದಲ್ಲೇ ಕುಳಿತಿದ್ದೀಯಾ.. ಅಲ್ಲಿ ಹೋಗು ಎಂದು ಗದರಿಸಿ ಕಳುಹಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.