ಕರುನಾಡು ಘರ್ಜನೆ ಸುದ್ದಿ :ಗದಗ, ಫೆಬ್ರವರಿ 28: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಜಯಶಾಲಿಯಾಗಿದೆ.
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ನ ಕೃಷ್ಣಾ ಪರಾಪುರ ಆಯ್ಕೆಯಾಗಿದ್ದು ಉಪಾಧ್ಯಕ್ಷಿ ಶಕುಂತಲಾ ಅಕ್ಕಿ ಆಯ್ಕೆ ಆಗಿದ್ದಾರೆ 17 ಕಾಂಗ್ರೆಸ್ ಸದಸ್ಯರು, ಓರ್ವ ಶಾಸಕರ ಮತದಿಂದ ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ.
35 ಸಂಖ್ಯಾಬಲದ ನಗರಸಭೆಯಲ್ಲಿ 18 ಸದಸ್ಯರನ್ನ ಬಿಜೆಪಿ ಹೊಂದಿತ್ತು ಮೂವರು ಸದಸ್ಯರನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದರು 15 ಸದಸ್ಯರ ಜತೆ ಚುನಾವಣೆಯಲ್ಲಿ ಸಂಸದ ಬೊಮ್ಮಾಯಿ ಭಾಗಿಯಾಗಿದ್ದರು. ಪ್ರಕ್ರಿಯೆ ತಡೆಯಾಜ್ಞೆ ನಡುವೆಯೇ ಚುನಾವಣೆ ನಡೆದಿರುವ ಬಗ್ಗೆ ಆರೋಪ ಹಿನ್ನೆಲೆ ಪ್ರಕ್ರಿಯೆ ಮಧ್ಯೆ ಚುನಾವಣೆ ಬಹಿಷ್ಕರಿಸಿ ಸಂಸದ ಬೊಮ್ಮಾಯಿ ಹೊರಬಂದಿದ್ದಾರೆ. 
ಚುನಾವಣೆ ಕಾನೂನು ರೀತಿಯಲ್ಲಿಯಾಗಿದೆ: ಸಚಿವ ಎಚ್ಕೆ ಪಾಟೀಲ್
ಚುನಾವಣೆ ಬಳಿಕ ಸಚಿವ ಎಚ್ಕೆ ಪಾಟೀಲ್ ಹೇಳಿಕೆ ನೀಡಿದ್ದು, ಅಧ್ಯಕ್ಷರಾಗಿ ಕೃಷ್ಣಾ ಪರಾಪೂರ ಹಾಗೂ ಉಪಾಧ್ಯಕ್ಷೆ ಶಕುಂತಲಾ ಅಕ್ಕಿ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಡೆದ ಚುನಾವಣೆಯಲ್ಲಿ ಅವರಿಗೆ ಜಯ ಸಿಕ್ಕಿದೆ ಎಂದರು.
ಮೂರು ಸದಸ್ಯರ ಅಮಾನತು ಮಾಡುವಲ್ಲಿ ಸಚಿವರ ಪಾತ್ರ ಆರೋಪ ವಿಚಾರವಾಗಿ ಮಾತನಾಡಿ, ನಾವು ಆಗಲಿ, ನಮ್ಮ ಪಕ್ಷದವರಾಗಲಿ ಸದಸ್ಯತ್ವ ರದ್ದು ಮಾಡಲು ಹೋಗಿಲ್ಲ. ಅವರ ಮಾಡಿರುವ ಕೃತ್ಯಗಳಿಂದ ಅವರ ಸದಸ್ಯತ್ವ ರದ್ದಾಗಿದೆ ಎಂದು ತಮ್ಮ ಮೇಲಿನ ಆರೋಪಕೆ ತಿರುಗಿ ಉತ್ತರಿಸಿದಾರೆ.
TDR ವಿಚಾರದಲ್ಲಿ ಸುಪ್ರೀಂಕೋರ್ಟ್ಗೆ ಹಾಜರಾಗಿದ್ದೇವೆ. ವಿಶೇಷ ಸೂಚನೆಗಳನ್ನು ಕೊಟ್ಟಿದ್ದಾರೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೆ ಟಿಡಿಆರ್ ಮುಖಾಂತರ ರಾಜ್ಯದ ದೊಡ್ಡ ಆರ್ಥಿಕ ಭಾಗ ಯಾವುದೇ ದೊಡ್ಡ ವ್ಯಕ್ತಿಗೆ ಹೋಗಲು ಬಿಡಲ್ಲ. ಹಾಗೂ ಜಾಸ್ತಿ ಬೆಲೆಯನ್ನ ಕೊಡಲು ಆಗುದಿಲ್ಲವೆಂದು ಸುಪ್ರೀಂಕೋರ್ಟ್ಗೆ ತಿಳಿಸಿದ್ದೇವೆಎಂದಿದ್ದಾರೆ.