ಕರುನಾಡು ಘರ್ಜನೆ ಸುದ್ದಿ ಬೆಂಗಳೂರು : ಲಂಚ ಪಡೆದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. HSR ಲೇಔಟ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಮತ್ತು ಹೆಡ್ ಕಾನ್ಸ್ಟೇಬಲ್ ಪೂಜಾರಿಯನ್ನ ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.

ಐಪಿಎಸ್ ಅಧಿಕಾರಿಯ ಸುಧೀರ್ ರೆಡ್ಡಿ ಕಡೆಯವರಿಂದ ಇಬ್ಬರು ಪೊಲೀಸ್ ಅಧಿಕಾರಿಗಳು ಲಂಚ ಪಡೆದಿದ್ದರು. 70 ಲಕ್ಷ ಮೌಲ್ಯದ ಮೊಬೈಲ್ ಟ್ಯಾಬ್ ಕಳ್ಳತನದ ಬಗ್ಗೆ ಸ್ವೀಸ್ ಕ್ಲಬ್ ಎಂಬ ಕಂಪನಿ ಕೋ ಫೌಂಡರ್ HSR ಲೇಔಟ್ ಠಾಣೆಗೆ ದೂರು ನೀಡಿದ್ರು.
ಈ ಪ್ರಕರಣ ಸಂಬಂಧ FIR ದಾಖಲಿಸಿಕೊಂಡ ಪೊಲೀಸರು ಯಾವುದೇ ಲ್ಯಾಪ್ಟಾಪ್ ರಿಕವರಿ ಮಾಡಲಿಲ್ಲ. ಪೊಲೀಸರು ದೂರುದಾರರು ಹಾಗೂ ಆರೋಪಿಗಳು ಇಬ್ಬರ ಕಡೆಯಿಂದಲೂ ಹಣ ಪಡೆದ ಆರೋಪ ಕೇಳಿಬಂದಿದೆ. ಈ ಬಗ್ಗೆ ನಿವೃತ್ತ ಐಪಿಎಸ್ ಅಧಿಕಾರಿ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ.
ಕಮಿಷನರ್ ದಯಾನಂದ ಅವರು ತನಿಖೆ ನಡೆಸಿ ವರದಿ ನೀಡುವಂತೆ ಆಗ್ನೇಯ ವಿಭಾಗದ ಡಿಸಿಪಿಗೆ ಸೂಚನೆ ನೀಡಿದ್ದರು. ವರದಿ ಆಧಾರಿಸಿ ಆಗ್ನೇಯ ವಿಭಾಗ ಡಿಸಿಪಿ ಸಾರ ಫಾತಿಮಾ ಅವರು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದಾರೆ.