Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ | ದಿ.11/3205 ರಂದು ಸವಿತಾ ಮಹರ್ಷಿ ಜಯಂತಿ ಆಚರಣೆ ನಿಮಿತ್ತ

ಕರುನಾಡು ಘರ್ಜನೆ ಸುದ್ದಿ ಗದಗ:ಗದಗ | ದಿ.11/3205 ರಂದು ಸವಿತಾ ಮಹರ್ಷಿ ಜಯಂತಿ ಆಚರಣೆ ನಿಮಿತ್ತ  ಕವಲುದಾರಿಯಲ್ಲಿ ನಿಂತ ಹಿಂದೂ ಧರ್ಮದ ಅವಲೋಕನ ಇಂದಿನ ದಿನಗಳಲ್ಲಿ ತುರ್ತು ಅವಶ್ಯಕತೆ ಸುಸಂಸ್ಕೃತ ಸಮಾಜ ವ್ಯವಸ್ಥೆಗೆ ಪೂರ್ವಿಕರು ಯೋಚಿಸಿ ಬಳಕೆಗೆ ತಂದುದು ಬ್ರಾಹ್ಮಣ, ಕ್ಷತ್ರಿಯ,…

ಕರುನಾಡು ಘರ್ಜನೆ ಸುದ್ದಿ ಗದಗ:ಗದಗ | ದಿ.11/3205 ರಂದು ಸವಿತಾ ಮಹರ್ಷಿ ಜಯಂತಿ ಆಚರಣೆ ನಿಮಿತ್ತ  ಕವಲುದಾರಿಯಲ್ಲಿ ನಿಂತ ಹಿಂದೂ ಧರ್ಮದ ಅವಲೋಕನ ಇಂದಿನ ದಿನಗಳಲ್ಲಿ ತುರ್ತು ಅವಶ್ಯಕತೆ ಸುಸಂಸ್ಕೃತ ಸಮಾಜ ವ್ಯವಸ್ಥೆಗೆ ಪೂರ್ವಿಕರು ಯೋಚಿಸಿ ಬಳಕೆಗೆ ತಂದುದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ-ರೆಂಬ ಚಾತುರ್ವಣ್ರ ಪದ್ಧತಿ ಇಂದು ಇದು ಮೇಲಿನ ವರ್ಗಗಳಿಗೆ ವರವಾದರೆ ಕೆಳವರ್ಗಕ್ಕೆ ಕಡು ಶಾಪ. ತನ್ನ ಹುಟ್ಟಿನಿಂದಲೇ ಇಂಥವನೆಂದು ಹಣೆಪಟ್ಟಿ ಹಚ್ಚಿಕೊಂಡು ಏಗಬೇಕಾದ ಅಸಹಾಯಕತೆ.

ಅದರಲ್ಲೂ ಶೂದ್ರವರ್ಣದ ಈ ಸೇವಾ ವರ್ಗದಲ್ಲಿ ಒಂದೊಂದು ವೃತ್ತಿ ಒಂದೊಂದು ಪಂಗಡಕ್ಕೆ ಮೀಸಲು. ಈ ಉದ್ಯೋಗದಲ್ಲೇ ತಮ್ಮ ಬದುಕಿನ ಸಾಫಲ್ಯ ಕಾಣಬೇಕಾದ ಈ ಮಂದಿಗೆ ಜಾತಿ ಶಬ್ದ ಅಂಟಿಕೊಂಡದ್ದು ಇತ್ತೀಚೆಗೆ. ಇಂದೂ ಈ ವ್ಯವಸ್ಥೆಯ ಪರಿಧಿಯಲ್ಲಿ ಸುತ್ತುತ್ತಾ ಒದ್ದಾಡುತ್ತಿರುವ ವರ್ಗಗಳಲ್ಲಿ ಕ್ಷೌರಿಕರದ್ದೂ ಒಂದು ತೆರನಾದ ಕೀಳುಭಾವ, ಅರ್ಥವಾಗದ ಆಸ್ಪೃಶ್ಯತೆ, ಕ್ಷೌರಿಕರು ಕುರದ ಕಾರ್ಮಿಕರು. ಕತ್ತಿಯ ಅಲಗಿನ ನೆರವಿನಿಂದ ಮಾನವನ ವ್ಯಕ್ತಿತ್ವಕ್ಕೆ ರೂಪ ಕೊಡುವವರು.

ಆದರೆ ಸಮಾಜದ ವ್ಯವಸ್ಥೆಯಲ್ಲಿ ಸ್ವೀಕರಿಸಿಕೊಂಡ ತಮ್ಮ ಬದುಕಿಕೆಗೆ ತಾವಾಗಿಯೇ ಹೇರಿಕೊಂಡ ಸಮಾಜ ಹೇರಿದ ಆರೋಪಗಳಿಂದ ಬಿಡಿಸಿಕೊಳ್ಳಲಾಗದ ಅಸಹಾಯಕತನ ಈ ಕ್ಷೌರಿಕರದು. ಕ್ಷೌರ ವೃತ್ತಿಯನ್ನು ಉದರೆಂಭಣೆಯ ಕಸುಬಾಗಿ ಆಯ್ಕೆ ಮಾಡಿಕೊಂಡು ಒಂದು ಕುಲವೇ ಉಳಿಯಿತು. ಬೆಳೆಯಿತು, ಒಂದು ಜಾತಿಯೇ ನಿರ್ಮಾಣವಾಯಿತು. ತಮ್ಮ ಜೀವನ ನಿರ್ವಹಣೆಗೆಂದೋ ಊರಿನ ಹಿರಿಯರ ಒತ್ತಾಯಕ್ಕೊ, ಒಂದೊಂದು ಊರಿನಲ್ಲಿ ಒಂದೊಂದು ಕ್ಷೌರಿಕ ಕುಟುಂಬ ನೆಲೆ ನಿಂತಿತು. ಇಂದು ಹಳ್ಳಿಗಳಲ್ಲಿ ನೆಲೆ ನಿಂತವರು ಎಲ್ಲರೂ ಹಾಗೆಯೇ ಬಂದವರು.

ಹಿಂದೂ ಶಾಸ್ತ್ರದ ಪ್ರಕಾರ ಮಾನವನ ಪ್ರತಿಯೊಂದು ಶುಭ, ಅಶುಭ ಕಾರ್ಯಗಳಲ್ಲಿ ಬ್ರಾಹ್ಮಣರಿಂದ ಯಾವುದೇ ಕಾರ್ಯಕ್ಕೆ ಮೊದಲು ಕ್ಷೌರಿಕರ ಅವಶ್ಯಕತೆ ಇದ್ದೆ ಇದೆ. ಆದರೆ ಇವರ ಈ ನಿಷ್ಕಾಮ ಕರ್ಮಕ್ಕೆ ಸಮಾಜ ಇವರಿಗೆ ನೀಡಿದ್ದು ಅಸ್ಪೃಶ್ಯಪಟ್ಟಿ. ಕೆಲವಡೆ ಈತನ ನೆರಳು. ಸೋಂಕಿದರೂ ಮೈಲಿಗೆಯ ಭಾವ, ತಮ್ಮದೇ ಆದ ಆಚಾರ, ವಿಚಾರಗಳಿಂದ ಮೇಲ್ವರ್ಗದವರು ಎಂದು ಕರೆಸಿಕೊಂಡವರೊಂದಿಗೆ ಹೆಜ್ಜೆ ಹಾಕಲಾಗದೇ ಅಲ್ಲಲ್ಲಿಯೇ ಉಳಿದು. ತಿರಸ್ಕಾರ ಯೋಗ್ಯರು ಎನಿಸಿಕೊಂಡವರು ಈ ಕ್ಷೌರಿಕರು. ಸೀಮಿತ ಆದಾಯದ ಮೂಲಕ ಈ ಕೇಶಕರ್ತನ ಉದ್ಯೋಗ, ಆದರೆ ದಿನದಿನಕ್ಕೆ ಏರುತ್ತಿರುವ ಖರ್ಚು-ವೆಚ್ಚ ಸರಿದೂಗಿಸುವಲ್ಲಿ ಸೋತಾತ. ನೋವು-ನಲಿವು ಹಂಚಿಕೊಳ್ಳುವ ಇತರ ಸಮಾಜ ವ್ಯಕ್ತಿಗಳು ದೊರೆಯದಿದ್ದಾಗ ಎಲ್ಲವನ್ನೂ ಮರೆಯಲು ಕೆಟ್ಟ ಅಭ್ಯಾಸಗಳಿಗೆ ಶರಣಾಗುತ್ತಾನೆ. ಇದು ಈತನ ಬದುಕಿನ ದುರಂತ. ಇಷ್ಟೇ ಅಲ್ಲದೇ ಗಿರಾಕಿ ರೋಗಿಷ್ಟನಾಗಿರಲಿ. ಕುಡುಕು-ಕುರೂಪಿಯಾಗಿರಲಿ, ಎಲ್ಲವನ್ನು ಸಹಿಸಿಕೊಳ್ಳಬೇಕು. ನಗುನಗುತ್ತ ಕೆಲಸಕ್ಕೆ ತೊಡಗಬೇಕು. ಆತನ ಗಡ್ಡ-ಮೀಸೆ ತಿದ್ದುಬೇಕು. ಮಾಲೀಶು ಮಾಡಿ ಕುತ್ತಿಗೆ-ಯ ನೆಟ್ಟಿ ಲಟಕ್ಕೆನಿಸಬೇಕು. ಇಷ್ಟೆಲ್ಲ ಸ್ಪರ್ಶ ಸುಖ ಅನುಭವಿಸುವ ಗಿರಾಕಿ ಕೊನೆಗೆ ಕೂದಲು ತೆಗೆಸಿದ್ದಕ್ಕಾಗಿ ಸ್ನಾನ ಮಾಡುತ್ತೇನೆ ಎನ್ನುವುದಕ್ಕಿಂತ ಕ್ಷೌರಿಕನನ್ನು ಮುಟ್ಟಿಸಿಕೊಂಡಿದ್ದಕ್ಕೆ ಸ್ನಾನ ಮಾಡುತ್ತೇನೆ ಎನ್ನುತ್ತಾನೆ.

ಆಕಸ್ಮಾತ್ತಾಗಿ ಆದದ್ದು ಅಥವಾ ಮಾಡಿದ್ದೇ ಫ್ಯಾಶನ್ ಆಗಿರುವ ಇಂದಿನ ದಿನಗಳಲ್ಲಿ ಕ್ಷೌರಿಕರಿಗೆ ಹಿಪ್ಪಿಸ್ಟೈಲ್ ಒಂದು ತುಂಬಲಾರರದ ನಷ್ಟ. ಬಗೆ ಬಗೆಯ ರೇಜರ್‌ಗಳು, ಬ್ಲಡ್, ಹೇರ್ ಟ್ರಿಮ್ಮರ್, ಡೈ ಇತ್ಯಾದಿ ಆಧುನಿಕ ಸವಲತ್ತುಗಳು ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ದೊರಕುತ್ತವೆ. ಈ ಉದ್ಯೋಗದಿಂದಾಗಿಯೇ ಜೀವನೋಪಾಯ ಕಂಡುಕೊಂಡ ಈತ ಈಗ ಏನು ಮಾಡಬೇಕು? ಕ್ಷೌರಿಕರಿಗೆ ಮಾಡಿದ್ದೇ ಫ್ಯಾಶನ್ ಆಗಿರುವ ಆಕಸ್ಮಾತ್ತಾಗಿ ಅದದ್ದು ಅಥವಾ ಮಾಡಿದ್ದೆ ಪ್ಯಾಶನ್ ಆಗಿರುವ ಇಂದಿನ ದಿನಗಳಲ್ಲಿ ಹಿಪ್ಪಸ್ಟೈಲ್ ಒಂದು ತುಂಬಲಾರದ ನಷ್ಟ ಬಗೆಬಗೆಯ ರೇಜರ್‌ಗಳು, ಬೇಡ್, ಹೇರ್ ಟ್ರಿಮ್ಮರ್, ಡೈ ಇತ್ಯಾದಿ ಆಧುನಿಕ ಸವಲತ್ತುಗಳು ಮಾರುಕಟ್ಟೆ ಯಲ್ಲಿ ಯಥೇಚ್ಛವಾಗಿ ದೊರಕುತ್ತವೆ. ಈ ಉದ್ಯೋಗದಿಂದಾಗಿಯೇ ಜೀವನೋಪಾಯ ಕಂಡುಕೊಂಡ ಈತ ಈಗ ಏನು ಮಾಡಬೇಕು?

ಕ್ಷೌರಿಕ ವರ್ಗದ ಬೆರಳಿಣಿಕೆಯಷ್ಟು ಮಂದಿ ವಿದ್ಯಾವಂತರೂ ಶ್ರೀಮಂತರೆಂದೆನಿಸಿಕೊಂಡರೂ ಇಂದಿನ ದಿನಗಳಲ್ಲಿ ತಮ್ಮ ಸಮಾಜದ ಸರ್ವಾಂಗೀಣ ಪ್ರಗತಿಯತ್ತ ಏನೇನೋ ನೆರವಾಗುತ್ತಿಲ್ಲ. ಒಂದು ದೃಷ್ಟಿಯಿಂದ ನೋಡಿದರೆ ಕ್ಷೌರಿಕ ಸಮಾಜದ ಈಗಿನ ದುಃಸ್ಥಿತಿಗೆ ಇವರೇ ಕಾರಣರು, ಹಾಗಾದರೆ ಸಮಾಜ ಇವರಿಂದ ನಿರೀಕ್ಷಿಸಬಾರದೆ? ವಿದ್ಯಾವಂತರು, ಪ್ರಗತಿ ಹೊಂದಿದವರೆಲ್ಲರ ಬೇರೆ ಅಸ್ತಿತ್ವ ಪಡೆದಲ್ಲಿ ಕ್ಷೌರಿಕ ಜನಾಂಗ ಉದ್ದಾರವಾಗುವುದಾದರೂ ಹೇಗೆ? ಹೀಗೆ ಮುಂದುವರಿದರೆ ಇದು ಎಲ್ಲಿ ಅಂತ್ಯವಾಗಬಹುದು.

ಜನಾಂಗದ ವಾದ್ಯ ಕಲಾಕಾರರು ಸಂಗೀತ ಶಾಸ್ರೋಕ್ತ ಅಭ್ಯಾಸ ಮಾಡಿ ಖ್ಯಾತರಾಗಿದ್ದರೂ ಸರಕಾರ ಅವರನ್ನು ಕಲಾವಿದರೆಂದು ಪರಿಗಣಿಸುತ್ತಿಲ್ಲವೇಕೆ? ಹರಿಜನರಂತೆಯೇ ಕೆಲವಡೆಗಳಲ್ಲಿ ಅಸ್ಪೃಶ್ಯರಾಗಿ ದಿನದೂಡುತ್ತಿರುವ ಕ್ಷೌರಿಕ ಬವಣೆ ಗೊತ್ತಿದ್ದೂ ಸರಕಾರ ಕಣ್ಣು ಮುಚ್ಚಿಕೊತಿರುವಿದೇಕೆ? ಬೇರೆಲ್ಲಾ ಪಂಗಡಗಳಿಗೆ ಪ್ರಾತಿನಿದ್ಯ ನೀಡುತ್ತಿರುವಂತೆ ಕ್ಷೌರಿಕ ಜನಾಂಗಕ್ಕೆ ಪ್ರಾತಿನಿಧ್ಯ ನೀಡುತ್ತಿಲ್ಲವೇಕೆ? ಈ ಫ್ಯಾಶನ್ ಯುಗದಲ್ಲಿ ಬದುಕಿ ಮೂಲಪಥಕ್ಕೆ ಪೆಟ್ಟು ಬಿದ್ದದ್ದು ಕ್ಷೌರಿಕರಿಗೆ ಮಾತ್ರ ಎಂದು ಏಕೆ ? ಅರ್ಥ ಮಾಡಿಕೊಳ್ಳುವುದಿಲ್ಲ ? ಕೇಂದ್ರ ಸರಕಾರ ಕೇಶಕರ್ತನನ್ನು ಕುಶಲ ಕಲೆ ಎಂದು ಮಾನ್ಯತೆ ಮಾಡಿ ತರಬೇತಿ ಸಂಸ್ಥೆ ತೆರೆದಿದ್ದರೂ ನಮ್ಮ ರಾಜ್ಯ ಸರಕಾರ ತನ್ನ ಆಜ್ಞೆಗಳಲ್ಲಿ ಈ ವೃತ್ತಿಯನ್ನು ಕುಶಲಕಲೆ ಎಂದು ಇನ್ನೂ ಸ್ಪಷ್ಟವಾಗಿ ನಮೂದಿಸುತ್ತಿಲ್ಲವೇಕೆ ಸಾಮಾನ್ಯ ಕ್ಷೌರಿಕ ಈಗ ಎರಡು ಬಗೆಯ ಒತ್ತಡಗಳಿಂದ ಬಳಲುತ್ತಿದ್ದಾನೆ. ವಿದ್ಯಾವಂತ. ಶ್ರೀಮಂತರೆಂದು ಕರೆಸಿಕೊಳ್ಳುತ್ತಿರುವ ತಮ್ಮವರಿಂದಲೇ ಕೀಳಿರಿಮೆಗೆ ತುತ್ತಾಗಿರುವುದು. ಸಮಾಜದ ಭದ್ರ ವ್ಯವಸ್ಥೆಯಲ್ಲಿ ಸುತ್ತಲಿನ ಪರಿಸರದಿಂದ ಅಸ್ಪೃಶ್ಯ ಪಟ್ಟ ಗಿಟ್ಟಿಸಿಕೊಂಡಿರುವುದರಿಂದ ತಮ್ಮ ನ್ಯಾಯವಾದ ಕೇಳಿಕೆಗಳ ಬಗ್ಗೆ ಪ್ರಾಮಾಣಿಕ ಅಪೇಕ್ಷೆಗಳು ಸರಕಾರ ಪೂರೈಸದಿರುವುದೇಕೆ? ಅಂತೂ ಇಂದು ಈ ವರ್ಗದ ಕತೆ ಒಂದು ಮುಗಿಯದ ವ್ಯಥೆಯೂ ಹೌದು!, ಎಲ್ಲದಕ್ಕೂ ಕಾದು ನೋಡಬೇಕಾಗಿದೆ.

 

 

1. ಬಯಲು ಕ್ಷೌರ ಮುಕ್ತ ಮಾಡಲು ಭಾರತ ಸರ್ಕಾರದಿಂದ ಯೋಜನೆ ಆಗಲು ಇನ್ನೆಷ್ಟು ವರ್ಷಗಳು ಕಾಯಬೇಕು?

 

2. ಕಾಯಕ ಸಮುದಾಯದ ವೃತ್ತಿಗಳಲ್ಲಿ ಒಂದಾಗಿರುವ ಮತ್ತು ನಾಗರೀಕ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿರುವ ಕ್ಷೌರಿಕ ವೃತ್ತಿದಾರರಿಗೆ ಕನಿಷ್ಠ ಒಂದು ಕ್ಷೌರ ಕುಟೀರಗಳನ್ನು ಮಾಡಿಕೊಡುವ ಯೋಜನೆಗೆ ಯಾವುದೇ ರಾಜ್ಯ ಸರ್ಕಾರಗಳು ಮುಂದಾಗದಿರುವುದು ಬೇಸರ.

 

3. ಮೊನ್ನೆಯಷ್ಟೇ ಮಂಡಿಸಿದ ಬಜೆಟ್ ನಲ್ಲಿ ಕ್ಷೌರಿಕ ಕಾಯಕ ಸಮುದಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡದಿರುವುದು ನಿಜಕ್ಕೂ ಅಚ್ಚರಿ.

 

4. ಸಾಮಾನ್ಯ ಕ್ಷೌರಿಕರಿಗೆ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಪಡೆಯುವುದು ಅಸಾಧ್ಯ. ಕ್ಷೌರಿಕರ ಕಷ್ಟಗಳಿಗೆ ಸ್ಪಂದಿಸುವ ಸರ್ಕಾರ ಮುಂದಾಗಲಿ.

5. ಬಯಲು ಕ್ಷೌರಮುಕ್ತ ಗ್ರಾಮಗಳ ಆಗದ ಹೊರತು ಸ್ವಚ್ಛಭಾರತದ ಕನಸು ಅಪೂರ್ಣ.

 

 

Editor

Leave a comment