Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಮುಂಬೈ I ಭುಗಿಲೆದ್ದ ಹಿಂಸಾಚಾರ- ನಾಗ್ಪುರ್‌ ಹಲವೆಡೆ ಕರ್ಫ್ಯೂ ಜಾರಿಗೋಳಿಸಿದ ಪೊಲೀಸ್‌ ಕಮಿಷನರ್‌.!

ಕರುನಾಡು ಘರ್ಜನೆ ಸುದ್ದಿ : ಮುಂಬೈ :ಮಹಾರಾಷ್ಟ್ರದಲ್ಲಿ ಮೊಘಲ್‌ ಔರಂಗಜೇಬ್‌ ಸಮಾಧಿಯನ್ನು ಧ್ವಂಸಗೊಳಿಸಬೇಕು ಎನ್ನುವ ಕೂಗು ತೀವ್ರಗೊಂಡಿದ್ದು, “ಔರಂಗಜೇಬ್‌ ಸಮಾಧಿಯನ್ನು ಸರ್ಕಾರವೇ ಕೆಡವದಿದ್ದರೆ, ಬಾಬರಿ ಮಸೀದಿ ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ಎಚ್ಚರಿಕೆ ನೀಡಿವೆ.  …

ಕರುನಾಡು ಘರ್ಜನೆ ಸುದ್ದಿ : ಮುಂಬೈ :ಮಹಾರಾಷ್ಟ್ರದಲ್ಲಿ ಮೊಘಲ್‌ ಔರಂಗಜೇಬ್‌ ಸಮಾಧಿಯನ್ನು ಧ್ವಂಸಗೊಳಿಸಬೇಕು ಎನ್ನುವ ಕೂಗು ತೀವ್ರಗೊಂಡಿದ್ದು, “ಔರಂಗಜೇಬ್‌ ಸಮಾಧಿಯನ್ನು ಸರ್ಕಾರವೇ ಕೆಡವದಿದ್ದರೆ, ಬಾಬರಿ ಮಸೀದಿ ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ಎಚ್ಚರಿಕೆ ನೀಡಿವೆ.

 

ಔರಂಗಜೇಬ್‌ ಸಮಾಧಿ ಸಂರಕ್ಷಿತಾ ಸ್ಥಳವಾಗಿರವುದರಿಂದ ಅದರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ, ವೈಭವೀಕರಿಸುವುದಕ್ಕೆ ಅವಕಾಶ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. ಈ ಮಧ್ಯೆ, ಇದರ ಬೆನ್ನಲ್ಲೇ ಸಮಾಧಿಯ ಸುತ್ತಲೂ ಪೊಲೀಸ್‌ ಭದ್ರತೆಯನ್ನು ಬಿಗಿಗೊ ಳಿಸಲಾಗಿದೆ.

 

ಛತ್ರಪತಿ ಸಂಭಾಜಿ ನಗರ ಜಿಲ್ಲೆಯಲ್ಲಿರುವ ಸಮಾಧಿ ಧ್ವಂಸಗೊಳಿಸುವಂತೆ ಆಗ್ರಹಿಸಿ ವಿಹಿಂಪ ಮತ್ತು ಬಜರಂಗ ದಳ ಸೋಮವಾರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ. ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಕರಸೇವೆ ಮತ್ತು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿವೆ.

 

ಹಂತ ಹಂತವಾಗಿ ಪ್ರತಿಭಟನೆ ನಡೆಯಲಿದ್ದು, ಕೊನೆಗೆ ಚಲೋ ಸಂಭಾಜಿ ನಗರ ಎಂಬ ಪಾದಯಾತ್ರೆ ಹಮ್ಮಿಕೊಳ್ಳಲಿದ್ದೇವೆ ಎಂದು ವಿಎಚ್‌ಪಿ ಹೇಳಿದೆ.

 

ಔರಂಗಜೇಬ್‌ ಗೆ ಫ‌ಡ್ನವೀಸ್‌ ಹೋಲಿಕೆ-ಪರಿಷತ್ತಲ್ಲಿ ಗಲಾಟೆ:

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಹರ್ಷವರ್ಧನ್‌ ಸಪ್ಕಾಲ್ ಅವರು ಮಹಾರಾಷ್ಟ್ರ ಮುಖ್ಯ ಮಂತ್ರಿ ಫ‌ಡ್ನವೀಸ್‌ ಅವರನ್ನು ಮೊಘಲ್‌ ದೊರೆ ಔರಂಗಜೇಬ್‌ ಗೆ ಹೋಲಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಧಾನಪರಿಷತ್‌ನಲ್ಲಿ ಈ ವಿಚಾರ ಪ್ರಸ್ತಾಪಿಸಿ ಗದ್ದಲವೆಬ್ಬಿಸಿದ ಆಡಳಿತಾರೂಢ ಶಾಸಕರು ಸಪ್ಕಾಲ್‌ ವಿರುದ್ಧ ಕೇಸು ದಾಖಲಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾ ಯಿಸಿದ್ದಾರೆ.

 

ಏನಿದು ವಿವಾದ?

ಔರಂಗಜೇಬ್‌ ವಿರುದ್ಧ ಛತ್ರಪತಿ ಶಿವಾಜಿ ಪುತ್ರ ಸಂಭಾಜಿ ಹೋರಾಟದ ಕತೆಯುಳ್ಳ ಛಾವಾ ಚಿತ್ರ ಫೆ.14ರಂದು ಬಿಡುಗಡೆಯಾಯಿತು. ಈ ಬೆನ್ನಲ್ಲೇ ಔರಂಗಜೇಬ್‌ ನಡೆಸಿದ ದೌರ್ಜನ್ಯ ಕುರಿತು ವಾಕ್ಸಮರ ನಡೆಯುತ್ತಿತ್ತು. ಈ ಮಧ್ಯೆ, ಎಸ್‌ಪಿ ಶಾಸಕ ಅಬು ಅಜ್ಮಿ ಔರಂಗಜೇಬ್‌ ಒಳ್ಳೆಯ ರಾಜನಾಗಿದ್ದ ಎಂದಿದ್ದು ವಿವಾದವಾಯಿತು. ಬಳಿಕ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರು ಸಂಭಾಜಿನಗರದಲ್ಲಿರುವ ಔರಂಗಜೇಬ್‌ ಸಮಾಧಿ ಧ್ವಂಸಕ್ಕೆ ಒತ್ತಾಯ ಹೇರಲಾರಂಭಿಸಿದರು. ಇದರ ಭಾಗವಾಗಿ ನಾಗಪುರದಲ್ಲಿ ಹಿಂದೂ ಸಂಘ ಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.

 

ಭುಗಿಲೆದ್ದ ಹಿಂಸಾಚಾರ- ನಾಗ್ಪುರ್‌ ಹಲವೆಡೆ ಕರ್ಫ್ಯೂ ಜಾರಿ:

ಔರಂಗಜೇಬ್‌ ಸಮಾಧಿ ತೆರವುಗೊಳಿಸಬೇಕೆಂಬ ವಿಚಾರ ನಾಗ್ಪುರ್‌ ನಲ್ಲಿ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ನಾಗ್ಪುರದ ಕೋಟ್ವಾಲಿ, ಗಣೇಶ್‌ ಪೇಟ್‌, ತೆಹ್‌ ಸಿಲ್‌, ಲಕಾಡ್‌ ಗಂಜ್‌, ಪಾಚ್‌ ಪಾವೋಲಿ, ಶಾಂತಿನಗರ್‌, ನಂದವನ್‌, ಇಮಾಮ್‌ ವಾಡ್‌, ಯಶೋಧ ನಗರ್‌ ಹಾಗೂ ಕಪಿಲ್‌ ನಗರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿರುವುದಾಗಿ ನಾಗ್ಪುರ್‌ ಪೊಲೀಸ್‌ ಕಮಿಷನರ್‌ ರವೀಂದರ್‌ ಕುಮಾರ್‌ ಸಿಂಗಾಲ್‌ ತಿಳಿಸಿದ್ದಾರೆ.

 

Editor

Leave a comment