ಕರುನಾಡು ಘರ್ಜನೆ ಸುದ್ದಿ ಗದಗ: ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ರೂ.10000 ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ಆದೇಶವನ್ನು ಕೂಡಲೇ ನೀಡುವ ಕುರಿತು ಮತ್ತು 2025-2026 ನೇ ಸಾಲಿನ ಬಜೆಟ್‌ನಲ್ಲಿ ಎಲ್ಲಾ ಯೋಜನಾ ಕಾರ್ಯಕರ್ತೆಯರಿಗೆ ರೂ. 1000 ಹೆಚ್ಚಳ ಮಾಡಿದಂತೆ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡುವ ಕುರಿತು ಮನವಿ
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ, ಇದೇ ಜನವರಿ 7 ರಿಂದ 10ರವರೆಗೆ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದಿದ್ದು ತಮಗೆ ತಿಳಿದಿದೆ. ರೂ.15.000 ನಿಶ್ಚಿತ ಗೌರವಧನಕ್ಕಾಗಿ ಆಗ್ರಹಿಸಿ ನಡೆಸಿದ ಈ ಹೋರಾಟದಲ್ಲಿ ರಾಜ್ಯದ 40,000 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಜನವರಿ 10 ರಂದು ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ, ತಾವು ಸಂಘದ ಪದಾಧಿಕಾರಿಗಳನ್ನು ಕರೆದು ಸಭೆ ಮಾಡಿದ್ದೀರಿ. ಈ ಸಭೆಯಲ್ಲಿ ಮಾನ್ಯ ಆರೋಗ್ಯ ಸಚಿವರು. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು. ಈ ಕೆಳಗಿಂತೆ ತೀರ್ಮಾನಿಸಲಾಗಿತ್ತು
ಎಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.10000 ಗಳ ಗೌರವಧನವನ್ನು ನೀಡಲಾಗುವುದು. ರೂ.10,000 ಹೊರತುಪಡಿಸಿ, ಕಾಂಪೋನೆಂಟ್ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ.10,000 ಗ್ಯಾರಂಟಿಯಾಗಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂದು ತಮ್ಮ ಉಪಸ್ಥಿತಿಯಲ್ಲಿ ನಡೆಯಿತು. ನಂತರ* ಆಯವ್ಯಯ ಪೂರ್ವಭಾವಿ ಸಭೆ ನಡೆಸುವಾಗ ಆಶಾ ಕಾರ್ಯಕರ್ತೆ ಸಂಘದೊಂದಿಗೂ ಸಭೆ ನಡೆಸಲಾಗುವುದು. ಸರ್ಕಾರ ನಿಮ್ಮೊಂದಿಗಿದೆ ಎಂದು ತಾವು ಭರವಸೆ ನೀಡಿರುತ್ತೀರಿ. ಸಂಘದಿಂದ ಸಾಕಷ್ಟು ಪ್ರಯತ್ನಿಸಿದಾಗ್ಯೂ ಈ ಸಭೆ ನಡೆಸಿರುವುದಿಲ್ಲ. ಈ ಆಯವ್ಯಯದಲ್ಲಿ ರಾಜ್ಯದ ಸುಮಾರು 2,50,000 ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೂ ರೂ. 1000 ಹೆಚ್ಚಿಸಿ, ಇದೇ ಬಜೆಟ್ ನಲ್ಲಿ ಸೇರಿಸಿ, ಆದೇಶಿಸಬೇಕು. ಇವು ತಮ್ಮ ಉಪಸ್ಥಿತಿಯಲ್ಲಿ ನಡೆದ ಸಭೆಯ ನಿರ್ಧಾರಗಳಾಗಿದೆ.
ಈ ತೀರ್ಮಾನಗಳನ್ನು ಆರೋಗ್ಯ ಇಲಾಖೆಯ ಮಾನ್ಯ ಆಯುಕ್ತರು ತಮ್ಮ ಪರವಾಗಿ ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್‌ಕ್ಕೆ ಆಗಮಿಸಿ ಸಾವಿರಾರು ಆಶಾಗಳ ಮುಂದೆ ಬಂದು ಘೋಷಣೆ ಕೂಡ ಮಾಡಿದ್ದಾರೆ. ಮಾಧ್ಯಮಗಳಲ್ಲೂ ಕೂಡ ಅಧಿಕೃತವಾಗಿ ಪ್ರಕಟಗೊಂಡಿದೆ. ತಮ್ಮ ಪಕ್ಷದ ಹಲವಾರು ಸಚಿವರುಗಳು, ಶಾಸಕರು ಈ ಬಗ್ಗೆ ಪೋಸ್ಟಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ ನೋವಿನ ವಿಷಯವೆಂದರೆ ಇಲ್ಲಿಯವರೆಗೆ ಈ ಕುರಿತು ಸ್ಪಷ್ಟ ಆದೇಶ ಹೊರಬಿದ್ದಿಲ್ಲ.
ಆಶಾಗಳಿಗೆ ಈ ಬಜೆಟ್‌ನಲ್ಲಿ ತಂಡ ಆಧಾರಿತ ರೂ. 1000 ಹೆಚ್ಚಳ ಎಂದು ಕೇವಲ ಸುಮಾರು 22000 ಆಶಾಗಳಿಗೆ ರೂ.10,000 ನೀಡಲು ಬೇಕಿದ್ದ ಹೆಚ್ಚುವರಿ ಬಜೆಟ್ ನೀಡಿರುತ್ತಾರೆ. ಈ ತಂಡ ಆಧಾರಿತ ಹಣ ಈಗಾಗಲೇ ಸುಮಾರು 20000 ಆಶಾಗಳಿಗೆ ಇತ್ತು. ಇನ್ನುಳಿದ 22000 ಆಶಾಗಳಿಗೆ ಅಗತ್ಯ ಇದ್ದ ಹಣ ಬಜೆಟ್ ನಲ್ಲಿ ಘೋಷಿಸಿರುವರು.
ಈ ಹಿನ್ನಲೆಯಲ್ಲಿ, ತಾವು ಮಧ್ಯ ಪ್ರವೇಶ ಮಾಡಿ, ನಿಮ್ಮೊಂದಿಗೆ ಆದ ತೀರ್ಮಾನಗಳಂತೆ ಆರೋಗ್ಯ ಇಲಾಖೆಯು ಸ್ಪಷ್ಟ ಆದೇಶ ನೀಡುವಂತೆ ಸೂಕ್ತ ಕ್ರಮಕೈಗೊಳ್ಳಬೇಕಾಗಿ ಮನವಿ ಮಾಡುತ್ತೇವೆ.

ಬೇಡಿಕೆಗಳು:
1. ಮಾನ್ಯ ರಾದ ತಾವು ಘೋಷಿಸಿದ ಭರವಸೆಯಂತೆ, ಎಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ರೂ.10000 ಗಳ ಗೌರವಧನವನ್ನು ನೀಡಲಾಗುವುದು. ರೂ.10,000 ಹೊರತುಪಡಿಸಿ. ಕಾಂಪೋನೆಂಟ್ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ.10,000 ಗ್ಯಾರಂಟಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು. ಇದರಂತೆ ಕೂಡಲೇ ಆದೇಶಿಸಬೇಕು.
2. ಆಯವ್ಯಯದಲ್ಲಿ ರಾಜ್ಯದ ಸುಮಾರು 2,50,000 ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೂ ರೂ. 1000 ಹೆಚ್ಚಿಸಿ, ಇದೇ ಬಜೆಟ್‌ನಲ್ಲಿ ಸೇರಿಸಿ, ಆದೇಶಿಸಬೇಕು.ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಜಿಲ್ಲಾ ಗೌರವ ಅಧ್ಯಕ್ಷರಾದ ಸುರೇಶ್.G, ಕಾರ್ಯದರ್ಶಿ ಲಕ್ಷ್ಮೀ ಪೂಜಾರ್, ಉಪಾಧ್ಯಕ್ಷರಾದ ಪ್ರೇಮ ಪಾಟೀಲ್, ಸುಂದರಮ್ಮ ಪಾಟೀಲ್, ಅನ್ನಪೂರ್ಣ ಕಾಟವ, ಬಡಿಮ ಶೇಖ್, ಶೋಭಾ ಮಲ್ಲನಗೌಡ, ಸದಸ್ಯರಾದ ಗೌರವ್ವ ಕಟ್ಟಿಮನಿ, ರೇಣುಕಾ, ಪಂಕಜ, ಹಾಗೂ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.