ಕರುನಾಡು ಘರ್ಜನೆ ಸುದ್ದಿ : ಕಲಬುರಗಿ : ಪೊಲೀಸರು ಅಂದ್ರೇ ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಶಿಸ್ತಿನ ಸಿಪಾಯಿಗಳು. ಆದ್ರೆ ಇತ್ತೀಚೆಗೆ ಯಾಕೋ ರಾಯರ ಕುದುರೆ ಕತ್ತೆಯಾಯ್ತು ಅಂತಾರಲ್ಲ ಹಾಗಾಗಿದೆ ನಮ್ಮ ಪೊಲೀಸ್ ಇಲಾಖೆ ಕಥೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿ ಕೇಸ್ ಹಾಕೋ ಪೊಲೀಸರು ಈಗ ಕರ್ತವ್ಯದ ವೇಳೆಯಲ್ಲಿ ಎಕ್ಕಾ ರಾಜ ರಾಣಿ ಆಟವಾಡಿ ವಿವಾದಕ್ಕೀಡಾಗಿದ್ದಾರೆ.
ಕಲಬುರಗಿಯಲ್ಲಿ ಸ್ಟೇಷನ್ ನಲ್ಲೇ ಸಿಬ್ಬಂದಿ ಇಸ್ಪೀಟ್ ಆಟವಾಡಿರೋದು ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಪೊಲೀಸರ ಇಸ್ಪೀಟ್ ಆಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. 4 ಮಂದಿ ಸಿಬ್ಬಂದಿ ಕೆಳಗೆ ಕುಳಿತು ಇಸ್ಪೀಟ್ ಆಡಿರೋದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.