ಕರುನಾಡು ಘರ್ಜನೆ ಸುದ್ದಿ :ಮಾರ್ಚ್ 29 ರ ಶನಿವಾರದಂದು ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಇದುಲ್ ಫಿತ್ರ ಹಬ್ಬವನ್ನು ಭಾನುವಾರ ( ಮಾ .30 ) ದಂದು ಆಚರಿಸಲಾಗುತ್ತದೆ ಎಂದು ಸೌದಿ ಅರೇಬಿಯಾದ ಚಂದ್ರನ ವೀಕ್ಷಣೆ ಸಮಿತಿಯು ಅಧಿಕೃತ ಪ್ರಕಟನೆ ಹೊರಡಿಸಿದೆ .
ಮುಸ್ಲಿಮರ ಹಿಜರಿ ಕ್ಯಾಲೆಂಡರ್ನ ನ ಶವ್ವಾಲ್ 1 ನೇ ದಿನದಂದು ಈದುಲ್ ಫಿತ್ರ ಅನ್ನು ಆಚರಿಸಲಾಗುತ್ತದೆ . ಇದಕ್ಕೂ ಮೊದಲು ಬರುವ ರಮಝಾನ್ ತಿಂಗಳಲ್ಲಿ ವಿಶ್ವವ್ಯಾಪಿಯಾಗಿ ಮುಸ್ಲಿಮರು ಉಪವಾಸ ಆಚರಣೆ ಮಾಡುತ್ತಾರೆ . ರಮಝಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಗ್ರಂಥ ಕುರ್ಆನ್ ಅವತೀರ್ಣಗೊಂಡಿರುವುದರಿಂದ ಪವಿತ್ರ ತಿಂಗಳಾಗಿ ಆಚರಣೆ ಮಾಡುತ್ತಾರೆ .
ಈದುಲ್ ಫಿತ್ರ ಹಬ್ಬವನ್ನು ಮಾರ್ಚ್ 30 ರ ಭಾನುವಾರದಂದು ಆಚರಿಸಲಾಗುವುದು ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.