ಕರುನಾಡು ಘರ್ಜನೆ ಸುದ್ದಿ ಗದಗ: ಸೌಖ್ಯದಾ ಆಸ್ಪತ್ರೆ, ಗದಗದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾll ತೇಜಸ್ವಿನಿ ಹಿರೇಮಠ ಅವರು ಅವಧಿಪೂರ್ವ ಹಾಗೂ ಕಡಿಮೆ ತೂಕ (1127, 1473, 1451, ಗ್ರಾಂ) ಹೊಂದಿದ್ದ ತ್ರಿವಳಿ ಮಕ್ಕಳ ಹೆರಿಗೆಯನ್ನು ಸುರಕ್ಷಿತವಾಗಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಾll ಶಿವನಗೌಡ ಜೋಳದರಾಶಿ, ಚಿಕ್ಕ ಮಕ್ಕಳ ತಜ್ಞರು, ಅವರು ಸಹ ಈ ಮೂರೂ ಮಕ್ಕಳ ಆರೋಗ್ಯವನ್ನು ಸುಧಾರಿಸುವಲ್ಲಿ ಸುಮಾರು ಒಂದು ತಿಂಗಳು ಅವಿರತ ಶ್ರಮಿಸಿದ್ದಾರೆ.ಈಗ ಮೂರು ಮಕ್ಕಳು ಸಹ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಅತ್ಯಂತ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ.ಈ ಸಾಧನೆಗೆ, ಸೌಖ್ಯದಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ನ ಪರವಾಗಿ ಡಾ|| ತೇಜಸ್ವಿನಿ ಹಿರೇಮಠ ಹಾಗೂ ಡಾll ಶಿವನಗೌಡ ಜೋಳದ ರಾಶಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರೊಂದಿಗೆ ನಿರಂತರ ಶ್ರಮಿಸಿದ ಶುಶ್ರೂಷಕರ ತಂಡ ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಕೂಡಾ ಅಭಿನಂದನೆಗಳನ್ನು ತಿಳಿಸುತ್ತೇವೆ.
ಸೌಖ್ಯದಾ ಆಸ್ಪತ್ರೆ, ಗದಗಿನಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ
ಕರುನಾಡು ಘರ್ಜನೆ ಸುದ್ದಿ ಗದಗ: ಸೌಖ್ಯದಾ ಆಸ್ಪತ್ರೆ, ಗದಗದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾll ತೇಜಸ್ವಿನಿ ಹಿರೇಮಠ ಅವರು ಅವಧಿಪೂರ್ವ ಹಾಗೂ ಕಡಿಮೆ ತೂಕ (1127, 1473, 1451, ಗ್ರಾಂ) ಹೊಂದಿದ್ದ ತ್ರಿವಳಿ ಮಕ್ಕಳ ಹೆರಿಗೆಯನ್ನು ಸುರಕ್ಷಿತವಾಗಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.…