Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಮೇರಾ ವತನ್ ಫೌಂಡೇಶನ್ (ರಿ) ವತಿಯಿಂದ ಹುಬ್ಬಳ್ಳಿಯ ನೈಋತ್ಯ ರೇಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ 

ಕರುನಾಡು ಘರ್ಜನೆ ಸುದ್ದಿ ಗದಗ ೦೩ : ಗದಗ-ಬೆಟಗೇರಿ ರೇಲ್ವೆ ನಿಲ್ದಾಣದಲ್ಲಿ ಬೆಟಗೇರಿ ಭಾಗದ ಕಡೆಗೆ ಅಂದರೆ, ಹೊಸಪೇಟೆ ಎಂಡ್ ಕಡೆಗೆ ಟಿಕೇಟ್ ಕೌಂಟರ್ ಹಾಗೂ ರೇಲ್ವೆ ನಿಲ್ದಾಣದಿಂದ ಬೆಟಗೇರಿಯ ಕುರಹಟ್ಟಿಪೇಟೆ ಕಡೆಗೆ ಹೋಗಿ-ಬರಲು ಮೇಲ್ಸೇತುವೆ ನಿರ್ಮಾಣಕ್ಕೆ ಮೇರಾ ವತನ್ ಫೌಂಡೇಶನ್…

ಕರುನಾಡು ಘರ್ಜನೆ ಸುದ್ದಿ ಗದಗ ೦೩ : ಗದಗ-ಬೆಟಗೇರಿ ರೇಲ್ವೆ ನಿಲ್ದಾಣದಲ್ಲಿ ಬೆಟಗೇರಿ ಭಾಗದ ಕಡೆಗೆ ಅಂದರೆ, ಹೊಸಪೇಟೆ ಎಂಡ್ ಕಡೆಗೆ ಟಿಕೇಟ್ ಕೌಂಟರ್ ಹಾಗೂ ರೇಲ್ವೆ ನಿಲ್ದಾಣದಿಂದ ಬೆಟಗೇರಿಯ ಕುರಹಟ್ಟಿಪೇಟೆ ಕಡೆಗೆ ಹೋಗಿ-ಬರಲು ಮೇಲ್ಸೇತುವೆ ನಿರ್ಮಾಣಕ್ಕೆ ಮೇರಾ ವತನ್ ಫೌಂಡೇಶನ್ (ರಿ) ಹಾಗೂ ಶಿರಹಟ್ಟಿ ಗಲ್ಲಿ, ಕುರಹಟ್ಟಿಪೇಟೆ, ಬೆಟಗೇರಿ ವತಿಯಿಂದ ಪ್ರಧಾನ ವ್ಯವಸ್ಥಾಪಕರು ನೈಋತ್ಯ ರೇಲ್ವೆ ವಿಭಾಗ ಹುಬ್ಬಳ್ಳಿ ಇವರಲ್ಲಿ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.

ಮನವಿ ಸಲ್ಲಿಸಿ ಮೇರಾ ವತನ್ ಫೌಂಡೇಶನ್ (ರಿ) ಸಂಸ್ಥಾಪಕ್ ಅಧ್ಯಕ್ಷರಾದ ಯಾಸೀನ್‌ಸಾಬ್ ಬೊದ್ಲೆಖಾನ್ ಮಾತನಾಡಿ ಗದಗ-ಬೆಟಗೇರಿ ರೇಲ್ವೆ ನಿಲ್ದಾಣದಲ್ಲಿ ಬೆಟಗೇರಿ ಭಾಗದ ಕಡೆಗೆ ಒಂದು ಟಿಕೆಟ್ ಕೌಂಟರ್ ಆಗಬೇಕು ಅನ್ನುವ ಮತ್ತು ನಿಲ್ದಾಣದಿಂದ ಬೆಟಗೇರಿಗೆ ಹೋಗಿ ಬರಲು ಒಂದು ಮೇಲ್ಸೆತುವೆ ನಿರ್ಮಾಣ ಆಗಬೇಕು ಅನ್ನುವ ಕನಸು ಬಹಳ ದಿನಗಳಿಂದಲೂ ಕನಸಾಗಿಯೇ ಉಳಿಯುತ್ತಾ ಹೊರಟಿದೆ.

ಈ ಬಗ್ಗೆ ಈ ಹಿಂದೆ ಹಲವಾರು ಪ್ರತಿಭಟನೆಗಳು, ಧರಣಿಗಳು, ಸತ್ಯಾಗ್ರಹಗಳು ನಡೆದರೂ ಕೂಡಾ ಈವರೆಗೆ ಯಾವುದೇ ಪ್ರಯೋಜನವಾಗದೇ ರೇಲ್ವೆ ಇಲಾಖೆ ಮೌನಕ್ಕೆ ಶರಣಾಗಿದ್ದು ವಿಪರ್ಯಾಸದ ಸಂಗತಿ. ಸದರಿ ಬೆಟಗೇರಿ ಭಾಗದಿಂದ ಬರುವ ರೇಲ್ವೆ ಪ್ರಯಾಣಿಕರು ‘ಗುಡ್ಡ ಸುತ್ತಿ ಮೈಲಾರಕ್ಕೆ ಬಂದAತೆ’ ಅನ್ನುವ ನಾಣ್ಣುಡಿಯಂತೆ ಬೆಟಗೇರಿಯ ಅಂಡರ್‌ಪಾಸ್‌ಗಳನ್ನು ಸುತ್ತಿಹಾಕಿ ನಿಲ್ದಾಣಕ್ಕೆ ಬಂದು ಟಿಕೇಟ್ ಪಡೆದು ಪ್ರಯಾಣಿಸಬೇಕಾಗಿರುತ್ತದೆ. ರಾತ್ರಿವೇಳೆಯಲ್ಲಿ ಪ್ರಯಾಣಿಸುವ ಮತ್ತು ದೂರದಿಂದ ಬಂದಿಳಿದು ಬೆಟಗೇರಿ ಕಡೆಗೆ ಹೋಗುವ ಪ್ರಯಾಣಿಕರು ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಾ ಬರುತ್ತಿದ್ದಾರೆ. ರಾತ್ರಿವೇಳೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತು ಬಂದಿಳಿಯುವ ಪ್ರಯಾಣಿಕರಿಗೆ ವೇಳೆಗೆ ಸರಿಯಾಗಿ ಬಸ್ಸು, ಅಟೋಗಳು ಸಿಗದೇ ಪರಿತಪ್ಪಿಸುವಂತಾಗಿರುತ್ತದೆ. ಒಂದುವೇಳೆ ಸಿಕ್ಕರೂ ಅತೀ ಹೆಚ್ಚಿನ ದರ ತೆತ್ತು ಬೆಟಗೇರಿ ಭಾಗದ ಕಡೆಗೆ ಹೋಗಬೇಕಾಗುತ್ತದೆ. ಈ ದುಬಾರಿ ಭಾಡಿಗೆ ಹಣ ನೀಡಿ ಪ್ರಯಾಣಿಸದ ಪ್ರಯಾಣಿಕರು ಬಳ್ಳಾರಿ ಗೇಟ್, ಅಂಡರ್‌ಪಾಸ್, ಹಾಗೂ ಝಂಡಾ ಸರ್ಕಲ್ ಹತ್ತಿರ ಇರುವ ಮೇಲ್ಸೇತುವೆಯನ್ನು ಬಳಿಸಿಕೊಂಡು ಹೋಗಬೇಕಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಬೆಟಗೇರಿಗೆ ಹೋಗಬೇಕೆಂದರೆ, ಸುತ್ತು ಹಾಕಿ ಹೋಗಬೇಕು. ಇಂತಹ ವೇಳೆಯಲ್ಲಿ ಏನಾಗುತ್ತದೋ ಅನ್ನುವ ಭಯ ಮಹಿಳಾ ಮತ್ತು ವೃದ್ಧ ಪ್ರಯಾಣಿಕರಿಗೆ ಕಾಡದೇ ಇರಲಾರದು.

ಈ ನಿಟ್ಟಿನಲ್ಲಿ ಹಲವಾರು ಕಳ್ಳತನ ವ. ಸುಲಿಗೆಗಳು ನಡೆದ ಘಟನೆಗಳನ್ನೂ ಅಲ್ಲಗಳೆಯುವಂತಿಲ್ಲಾ. ಇವೆಲ್ಲವೂಗಳನ್ನು ಅನುಭವಿಸಿಯೇ ಬೆಟಗೇರಿ ಭಾಗದ ಕಡೆಗೆ, ಬೆಟಗೇರಿಯ ಕುರಹಟ್ಟಿಪೇಟೆ ಹತ್ತಿರ ಇರುವ ಗೂಡ್‌ಶೆಡ್ ಆಸುಪಾಸು ಒಂದು ಟಿಕೆಟ್ ಕೌಂಟರ್ ಹಾಗೂ ಹೊಸಪೇಟೆ ಎಂಡ್ ಕಡೆಗೆ ಮೇಲ್ಸೇತುವೆ ಬೇಡಿಕೆ ಮಾಡಲಾಗುತ್ತಿದೆ. ಅಲ್ಲದೇ ಮಳೆಗಾಲದಲ್ಲಿ ಈ ಅಂಡರ್‌ಪಾಸ್‌ಗಳಲ್ಲಿ ಸಾಕಷ್ಟು ಮಳೆನೀರು ನಿಂತು ವಾಹನಗಳು, ಸಾರ್ವಜನಿಕರು ಓಡಾಡಲೂ

ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಲ್ಲದೇ ಬೆಟಗೇರಿ ಭಾಗದ ಮುಸ್ಲಿಂ ಸಾರ್ವಜನಿಕರು ಈದಗಾ ಮೈದಾ ಹೋಗಬೇಕೆಂದರೂ ಅಂಡರ್‌ಪಾಸ್ ಮೂಲಕ ಸುತ್ತುಹರಿದೇ ಹೋಗಬೇಕಾಗಿರುತ್ತದೆ.

ಹೀಗಾಗಿ ರೇಲ್ವೆ ನಿಲ್ದಾಣದ ಉತ್ತರ ದಿಕ್ಕಿನ ಕಡೆಗೆ ಅಂದರೆ, ಬೆಟಗೇರಿ ಭಾಗದ ಕಡೆಗೆ ಒಂದು ಟಿಕೇಟ್ ಕೌಂಟರ್ ಹಾಗೂ ರೈಲುಗಳು ನಿಲ್ಲುವ ಹೊಸಪೇಟೆ ಎಂಡ್‌ನಲ್ಲಿ ಮೇಲ್ಸುತುವೆ ನಿರ್ಮಾಣ ಮಾಡುವುದು ಅತೀ ಅವಶ್ಯಕತೆ ಇರುತ್ತದೆ. ಬೆಟಗೇರಿ ಸಾರ್ವಜನಿಕರ ಬಹು ದಿನಗಳಿಂದ ನೆನಗುದಿಗೆ ಬಿದ್ದಿರುವ ಈ ಬೇಡಿಕೆ ಮತ್ತು ಕನಸು ಅತೀ ಶೀಘ್ರದಲ್ಲಿ ನೆರವೇರಿಸಿಕೊಟ್ಟಲ್ಲಿ ತುಂಬಾ ಅನುಕೂಲವಾಗಿ ಮುಂದಾಗುವ ಅವಘಡಗಳು, ಅನಾಹುತಗಳು ತಪ್ಪಿಸುವಂತಾಗುತ್ತದೆ.

ಆದ್ದರಿಂದ ಮಾನ್ಯರು ಈಗಲಾದರೂ ನಮ್ಮ ಮನವಿಯನ್ನಾದರೂ ಪರಿಗಣಿಸಿ ಗಂಭೀರ ಸಮಸ್ಯೆ ಪರಿಗಣಿಸಿ ಬೆಟಗೇರಿಯ ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿಕೊಡಬೇಕೆಂದು ಆ ಮೂಲಕ ಮಾನ್ಯರಲ್ಲಿ ಬೆಟಗೇರಿ ಶಹರದ ಎಲ್ಲಾ ೧೦ ವಾರ್ಡುಗಳ ಸಾರ್ವಜನಿಕರ ಪರವಾಗಿ ಹಾಗೂ ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿರುವ ಪ್ರಯಾಣಿಕರ ಪರವಾಗಿ ಮನವಿ ಪತ್ರವನ್ನು ಸಲ್ಲಿಸಿ ವಿನಂತಿಸಿಕೊAಡರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳು ಶೌಕತ್ ಕಾತರಕಿ ಗೌರವಾಧ್ಯಕ್ಷರಾದ ಇಬ್ರಾಹಿಂಸಾಬ್ ದಾವಲಖಾನ್, ಸದಸ್ಯರಾದ ರಾಜೆಸಾಬ್ ಬೊದ್ಲೆಖಾನ್, ಮನ್ಸೂರ ಅಹಮದ್ ಶಿರಹಟ್ಟಿ, ಇಸ್ಮಾಯಿಲ್ ಬದಾಮಿ ಉಪಸ್ಥಿತರಿದ್ದರು.

Editor

Leave a comment