ಕರುನಾಡು ಘರ್ಜನೆ ಸುದ್ದಿ : ಗದಗ ಎಪ್ರಿಲ್ 4: ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯ ಯಾವತ್ತೂ ಖಸಾಯಿಖಾನೆಗಳಲ್ಲಿ ಪ್ರಾಣಿವಧೆ ಮಾಡುವ ಹಾಗೂ ಮಾಂಸ ಮಾರಾಟಗಾರರಿಗೆ ತಿಳಿಯಪಡಿಸುವುದೇನೆಂದರೆ ಶ್ರೀ ರಾಮನವಮಿ
ಅಂಗವಾಗಿ ಏಪ್ರಿಲ್ 6 ರಂದು ಜಾನುವಾರುಗಳ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮಾಂಸ ಮಾರಾಟ ಮಾಡುವದಾಗಲಿ ಹಾಗೂ ಜಾನುವಾರುಗಳನ್ನು ವಧೆ ಮಾಡದಿರಲು
ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂಥವರ ಲೈಸನ್ಸನ್ನು ರದ್ದು ಮಾಡಲಾಗುವುದು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.