ಕರುನಾಡು ಘರ್ಜನೆ ಸುದ್ದಿ : ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ನೇತೃತ್ವದಲ್ಲಿ ವಕ್ಫ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯಿಸಿ , ಜಾಮೀಯ ಮಸೀದಿಯಿಂದ ಕಪ್ಪು ಪಟ್ಟಿ ಧರಿಸಿ , ಕಾಲ್ನಡಿಗೆ ಮೂಲಕ ಕೆ.ಕೆ.ಸರ್ಕಲ್ ವೃತ್ತದವರೆಗೆ ಮೆರವಣಿಗೆ ನಡೆಸಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು . ” ದೇಶದಲ್ಲಿ ಎಲ್ಲ ಸಮುದಾಯದವರಿಗೂ ಅವರದ್ದೇ ಆದ ಹಬ್ಬ ಆಚರಣೆ , ಪೂಜೆ , ನಮಾಜ್ ಮಾಡುವ ಧಾರ್ಮಿಕ ಹಕ್ಕನ್ನು ಕಾನೂನಿನಲ್ಲಿ ನೀಡಲಾಗಿದೆ .
ಆದರೆ ಕೇಂದ್ರ ಸರ್ಕಾರ ಸಮಾಜದಲ್ಲಿ ಶಾಂತಿ ಭಂಗ ಮಾಡುವಂತಹ , ಜನ ವಿರೋಧಿ ಕಾನೂನುಗಳನ್ನು ರೂಪಿಸಲು ಮುಂದಾಗಿದೆ ‘ ಎಂದು ಹೇಳಿದರು . “ ಪ್ರಧಾನಮಂತ್ರಿ ದೇಶದ ಸಂಪತ್ತನ್ನು ಒಂದೊಂದಾಗಿ ಮಾರುತ್ತಿದ್ದಾರೆ.
ಈಗ ಮುಸಲ್ಮಾನರ ಸಂಪತ್ತಿನ ಮೇಲೆ ಕಣ್ಣು ಹಾಕಿದ್ದಾರೆ . ವಕ್ಫ ತಿದ್ದುಪಡಿ ಮಸೂದೆಯಲ್ಲಿ ವಕ್ಫ ಆಸ್ತಿ ಮತ್ತು ದೇಶದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡುವ ಹಲವು ತಿದ್ದುಪಡಿಗಳಿದ್ದು , ಕೂಡಲೇ ಈ ಮಸೂದೆಯನ್ನು ರದ್ದು ಮಾಡಬೇಕೆಂದು ಹೇಳಿದರು.
ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಚೇರಮನ್ನ ಎ.ಡಿ.ಕೋಲಕಾರ ಮಾತನಾಡಿ , ‘ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯಾಗಿದೆ.
ವಕ್ಫ ಮಸೂದೆ ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ಹಾನಿ ಮಾಡುತ್ತದೆ . ಮಸೂದೆಯನ್ನು ಹಿಂಪಡೆಯಲು ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಕೋಟ್ಯಾಂತರ ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗಬೇಕು ‘ ಎಂದು ಒತ್ತಾಯಿಸಿದರು . ಪುರಸಭೆ ಸದಸ್ಯ ರಾಜು ಸಂಗೀಕಾರ ಮಾತನಾಡಿ , ವಕ್ಫ ತಿದ್ದುಪಡೆ ಮಸೂದೆ ದ್ವೇಷಪೂರಿತ ಕಾನೂನಾಗಿದ್ದು , ಯಾವುದೇ ಕಾರಣಕ್ಕೂ ಮಸೂದೆ ಜಾರಿಗೆ ತರಬಾರದು.
ಒಂದು ವೇಳೆ ಜಾರಿಗೆ ತಂದಲ್ಲಿ ಉಗ್ರ ಹೋರಾಟ ನಡೆಸಲಾಗುವುದು . ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ಎಲ್ಲ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂತ ಹಂತವಾಗಿ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ , ಎಸ್.ಎಂ ಆರಗಿದ್ದಿ, ನಾಸೀರ್ ಸುರಪುರ , ಮಾಸುಮಲಿ ಮದಗಾರ , ದಾದೇಸಾಬ ಹಣಗಿ , ಉಪಾಧ್ಯಕ್ಷ ಹಾಸೀಂ ಹಿರೇಹಾಳ , ಆರೀಫ್ ಮನಿಯಾರ , ಆಸೀಫ್ ಮೋಮಿನ್ , ಭಾಷು ಮುದಗಲ್ ಇಮ್ರಾನ್ ಅತ್ತಾರ , ಪತ್ತೇಸಾಬ ತಹಶಿಲ್ದಾರ , ಖಾಸಿಂಸಾಬ ಮುಚ್ಚಾಲಿ , ಮೆಹಬೂಬ್ ಮುದಗಲ್ ಸೇರಿದಂತೆ ಇತರರು ಇದ್ದರು .