ಕರುನಾಡು ಘರ್ಜನೆ ಸುದ್ದಿ : ಬಳ್ಳಾರಿ ಗಂಡನ ಕೊಲೆಗೆ 11 ಜನರ ಟೀಂ ಕಟ್ಟಿದ್ಲು ಹೆಂಡತಿಅನೈತಿಕ ಸಂಬಂಧ.. ಪತಿಗೆ ಚಟ್ಟ ಕಟ್ಟಿದ ನೌಟಂಕಿ ಹೀಗೆ ಗೋಳಾಡುತ್ತಾ ಕಣ್ಣೀರಾಕಿ ನಾಟಕ ಮಾಡಿದ್ದ ನೌಟಂಕಿ ಮಹಿಳೆ ಹೆಸರು ನೀಲವೇಣಿ. ಮೃತ ವೆಂಕಟೇಶ್ನ ಹೆಂಡತಿ.. ಆವತ್ತು ವೆಂಕಟೇಶ್ ಹತ್ಯೆಯಾದ ದಿನ ಶವಗಾರದ ಬಳಿ ಬಂದು ದೊಡ್ಡ ಹೈಡ್ರಾಮಾವನ್ನೇ ಮಾಡಿದ್ದಳು.ನಾನು ತಾಳಿ ತೆಗೆಯಲ್ಲ. ಬಳೆ ಒಡೆಯೋದಿಲ್ಲ ಅಂತಾ ಬಣ್ಣ ಹಚ್ಚಿಕೊಳ್ಳದೇ ಆ್ಯಕ್ಟ್ ಮಾಡಿದ್ದಳು. ಆದ್ರೆ, ನೌಟಂಕಿ ನೀಲವೇಣಿಯ ನಿಜ ಬಣ್ಣ ಬಟಾಬಯಲಾಗಿದೆ.
ಮೃತ ವೆಂಕಟೇಶ್ ಕೊಲೆ ರಹಸ್ಯ ಬೆನ್ನತ್ತಿದ್ದ ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸರು ಕೊಲೆ ನಡೆದ 24 ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ವೆಂಕಟೇಶ್ ಹತ್ಯೆಗೆ ಹೆಂಡತಿಯೇ ಸುಪಾರಿ ಕೊಟ್ಟಿರುವ ಸ್ಫೋಟಕ ವಿಷ್ಯ ಬಹಿರಂಗವಾಗಿದೆ. ಪತ್ನಿ ನೀಲವೇಣಿ ಶವಗಾರದ ಮುಂದೆ ಕಲ್ಪನಾ ರೇಂಜ್ನಲ್ಲಿ ಫರ್ಪಾರ್ಮೆನ್ಸ್ ಕೊಟ್ಟಾಗಲೇ ಪೊಲೀಸರಿಗೆ ಡೌಟ್ ಬಂದಿತ್ತು. ಹಾಗೇ ವೆಂಕಟೇಶ್ ಕುಟುಂಬಸ್ಥರು ಕೂಡ ಆಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ರು. ಆದ್ರೆ ನೀಲವೇಣಿ ಗಂಡನನ್ನ ಕೊಲ್ಲೋದಕ್ಕೆ 11 ಜನರ ಕ್ರಿಕೆಟ್ ಟೀಮ್ ಕಟ್ಟಿದ್ದು ಇದೀಗ ಪೊಲೀಸರ ತನಿಖೆಯಿಂದ ಹೊರ ಬಿದ್ದಿದೆ. ಅಂದ ಹಾಗೇ ನೀಲವೇಣಿ ತನ್ನ ಪತಿಗೆ ಚಟ್ಟ ಕಟ್ಟಲು 11 ಜನರ ಟೀಮ್ ಕಟ್ಟಲು ಕಾರಣವೇನು? ಯಾಕೆ ಸುಪಾರಿ ಕೊಟ್ಟಳು ಅಂತ ನೋಡೊದಾದ್ರೆ.ನೌಟಂಕಿ
ಡೌವ್ ನೀಲವೇಣ!
22 ವರ್ಷದ ಆನಂದ್ ಎಂಬಾತನ ಜೊತೆ ನೀಲವೇಣಿ ಅನೈತಿಕ ಸಂಬಂಧ ಹೊಂದಿದ್ದಳು. ಹಾಗೇ ಮೃತ ವೆಂಕಟೇಶ್ ನೀಲವೇಣಿ ನಡತೆಯ ಬಗ್ಗೆ ಸಂಶಯ ಪಟ್ಟಿದ್ದ, ಇದೇ ಕಾರಣಕ್ಕೆ ವೆಂಕಟೇಶ್ ಹಾಗೂ ನೀಲವೇಣಿ ಜಗಳ ಆಡ್ತಿದ್ರು. ವೆಂಕಟೇಶ್ ಇದ್ರೆ ಸಂಬಂಧಕ್ಕೆ ಅಡ್ಡಿಯಾಗ್ತಾನೆ ಅಂತೇಳಿ ನೀಲವೇಣಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಬ್ರೂಸ್ ಪೇಟೆ ಪೊಲೀಸರು, ನೀಲವೇಣಿ ಹಾಗೂ ಆನಂದ್ ಸೇರಿ ಒಟ್ಟು 11 ಮಂದಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.. ಆದ್ರೆ, ಪತ್ನಿಯ ಪರಪುರುಷನ ಸಂಘಕ್ಕೆ ಪತಿ ಕೊಲೆಯಾಗಿದ್ದು ನಿಜಕ್ಕೂ ದುರಂತ.