ಕರುನಾಡು ಘರ್ಜನೆ ಸುದ್ದಿ : ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಮೊದಲನೇ ಅವಧಿಗೆ ದಿನಾಂಕ 18.05.2016ರಂದು ಅಧ್ಯಕ್ಷರಾಗಿ ಜಿ,ಎಮ್ ದಂಡಿನರವರು ಆಯ್ಕೆಯಾದ ನಂತರ 2016-17 ಮತ್ತು 2017-18ನೇ ಸಾಲಿನಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ರೂ.:4 ಕೋಟಿ 65 ಲಕ್ಷ ರೂಪಾಯಿಗಳನ್ನು ವಕ್ಫ್ ಜೀರ್ಣೋದ್ಧಾರಕ್ಕಾಗಿ ರೂ.:2ಕೋಟಿ 77ಲಕ್ಷ ರೂಪಾಯಿಗಳನ್ನು ಅನುದಾನ ಮಂಜೂರು ಮಾಡಿಸಿರುತ್ತಾರೆ.
2018-19ನೇ ಸಾಲಿನಲ್ಲಿ ವಕ್ಫ್ ಜೀರ್ಣೋದ್ಧಾರಕ್ಕಾಗಿ 10ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಸಿರುತ್ತಾರೆ, 2019-20ನೇ ಹಾಗೂ 2020-21ನೇ ಸಾಲಿನಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ 10ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಸಿರುತ್ತಾರೆ ಅನುದಾನ ಮಂಜೂರಾಗಿರುತ್ತದೆ. 2 ಕೋಟಿಗಿಂತ ಹೆಚ್ಚು ಸ್ಥಳೀಯ ಶಾಸಕರ ಅನುದಾನದಿಂದ ಮಂಜೂರು ಮಾಡಿಸಿರುತ್ತಾರೆ.
ದಿನಾಂಕ 18.02.2020 ರಂದು ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜಿ,ಎಮ್ ದಂಡಿನರವರು ಆಯ್ಕೆಯಾದ ನಂತರ 2021-22ನೇ ಸಾಲಿನಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಜೀರ್ಣೋದ್ಧಾರಕ್ಕಾಗಿ 32 ಲಕ್ಷ ರೂಪಾಯಿಗಳನ್ನು ವಕ್ಫ್ ಅನುದಾನವನ್ನು ಮಂಜೂರು ಸರಕಾರದಿಂದ ಮಾಡಿಸಿರುತ್ತಾರೆ. 2022-23 ಹಾಗೂ 2023-24ನೇ ಸಾಲಿನಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ರೂ.:28 ಲಕ್ಷ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿಸಲು ಪ್ರಯತ್ನಿಸಿದ್ದರು 2024-25ನೇ ಸಾಲಿನಲ್ಲಿ ವಕ್ಫ ಜೀರ್ಣೋದ್ಧಾರಕ್ಕಾಗಿ 1 ಕೋಟಿ 60 ಲಕ್ಷ ರೂಪಾಯಿಗಳ ಅನುದಾನವನ್ನು ಮಂಜೂರು ಸರಕಾರದಿಂದ ಮಾಡಿಸಿರುತ್ತಾರೆ.
ಇವರ ನಿಸ್ವಾರ್ಥ ಸೇವೆ ಹಾಗೂ ಕಾರ್ಯವೈಕಾರಿಯನ್ನು ನೋಡಿ ಇವರನ್ನು ಸನ್ಮಾನ್ಯ ಶ್ರೀ ಹೆಚ್.ಕೆ.ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಇಲಾಖೆ ಮತ್ತು ಪ್ರವಾಸೋದ್ಯಮ ಸಚಿವರು, ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಮೂರನೇ ಬಾರಿ ಆಯ್ಕೆ ಮಾಡಲು ಶಿಫಾರಸ್ಸು ಮಾಡಿದ ನಂತರ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿAದ ಮತ್ತೆ ಮೂರನೇ ಬಾರಿ ದಿನಾಂಕ:27.02.2024ರAದು ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು, ಅಧಿಕಾರ ವಹಿಸಿಕೊಂಡ ನಂತರ ಮಾತನಾಡುತ್ತಾ ಈಗ ನನ್ನ ಕೆಲಸ ಗದಗದಲ್ಲಿರುವ ಎಲ್ಲಾ ಖಬರಸ್ತಾನಗಳಿಗೆ ಕಂಪೌAಡಗೋಡೆ ಕಟ್ಟಿಸಲು ಅನುದಾನ ಮಂಜೂರು ಮಾಡಿಸುವುದು ಹಾಗೂ ಗದಗ ಅಂಜುಮಾನ ಏ ಇಸ್ಲಾಂ ಕಮೀಟಿಯ ಚುನಾವಣೆಯ ಮುಖಾಂತರ ಕಮೀಟಿ ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆಂದು ಅಧಿಕಾರಿ ವಹಿಸಿಕೊಂಡಿದ್ದರು ಇವರ ನಿಟ್ಟಿನಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು, ಇಂದು ದಿನಾಂಕ:07.03.2024ರAದು
ಸಾಯಂಕಾಲ 7:30ಕ್ಕೆ ಗದಗ ಜಿಲ್ಲಾ ವಕ್ಫ್ ಸಂಸ್ಥೆಗಳ ಖಬರಸ್ತಾನ ಕಂಪೌಡ್ ಗೋಡೆಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿಕೊಂಡು ಬರುವ ನಿಟ್ಟಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಲು ಸಿದ್ದರಾಗಿದ್ದರು, ಇವರ ನಿಧನಕ್ಕೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ವಕ್ಫ ಕಾರ್ಯಲಯದ ಎಲ್ಲಾ ಸಿಬ್ಬಂದಿಗಳು ದು:ಖ ವ್ಯಕ್ತಪಡಿಸಿರುತ್ತಾರೆ. ಇವರ ಅಂತ್ಯಕ್ರಿಯೆ ದಿನಾಂಕ 07.04.2025 ರಂದು ಸಾಯಂಕಾಲ 5 ಗಂಟೆಗೆ ಡಂಬಳ ನಾಕಾದಲ್ಲಿರುವ ವಕ್ಫ್ ಸಂಸ್ಥೆಯಾದ ಖೌಮಿ ಕಿದಮತ್ತ ಮಜ್ಜೀದ್ (ಜನತ್‌ವುಲ್ ಫೀರದೋಸ್ ಮಜ್ಜೀದ್) ಜನಾಜಾ ನಮಾಜ ನಡೆಸಲಾಗುವುದು.
ಇಂದ ಜಿಲ್ಲಾ ವಕ್ಫ್ ಕಾರ್ಯಲಯ, ಗದಗ