ಕರುನಾಡು ಘರ್ಜನೆ ಸುದ್ದಿ ಗದಗ : ಕರ್ನಾಟಕ ರಾಜ್ಯ ಡಾ . ಪಂಡಿತ ಪುಟ್ಟರಾಜ ರೈತ ಸಂಘ ವತಿಯಿಂದ ಗದಗ ಜಿಲ್ಲಾ ಪೊಲೀಸ್ ಘಟಕದಿಂದ 2022 , 2023 , 2024 ನೇ ಸಾಲಿನ ಮುಖ್ಯಮಂತ್ರಿಯವರ ಪೊಲೀಸ್ ಪದಕ ಪಡೆದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ : 07-04-2025 ರಂದು ಶ್ರೀ ಷ.ಬ , ಫಕೀರೇಶ್ವರ
ಸ್ವಾಮಿಗಳ ಓಂಕಾರೇಶ್ವರ ಹಿರೇಮಠ ಮಲ್ಲಸಮುದ್ರ ಗದಗದಲ್ಲಿ ಅದ್ದೂರಿಯಾಗಿ ಜರುಗಿತು . ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ , ಫಕೀರೇಶ್ವರ ಸ್ವಾಮಿಗಳ ಓಂಕಾರೇಶ್ವರ ಹಿರೇಮಠ ಮಲ್ಲಸಮುದ್ರ ಗದಗ ಇವರು ವಹಿಸಿದ್ದರು . ಅಧ್ಯಕ್ಷತೆ ವಹಿಸಿದ್ದರು.
ಎಮ್.ಪಿ. ಕರ್ನಾಟಕ ರಾಜ್ಯ ಡಾ . ಪಂ . ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮುಳಗುಂದ ರವರು ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಶಂಕರಗೌಡ ಜಯನಗೌಡ್ರ ಕನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷರು , ಶ್ರೀ ಮಂಜುನಾಥ ಬೋವಿವಡ್ಡರ ಕನಾಟಕ ರಾಜ್ಯ ರೈತ ಸಂಘ ತಾಲೂಕ ಅಧ್ಯಕ್ಷರು , ಬಸವರಾಜ ವಡ್ಡರ ಕಾರ್ಮಿಕರ ಸಂಘದ
ಅಧ್ಯಕ್ಷರು ರವರು ಪಾಲ್ಗೊಂಡಿದ್ದರು . ಸನ್ಮಾನಿತರಾಗಿ ಶ್ರೀ ಸಿದ್ದರಾಮೇಶ್ವರ ಗಡ್ಡದ ಆರಕ್ಷಕ ನಿರೀಕ್ಷಕರು ಗದಗ ಗ್ರಾಮೀಣ ಠಾಣೆ , ಮಂಜುನಾಥ ಕುಸುಗಲ್ ಆರಕ್ಷಕ ನಿರೀಕ್ಷಕರು ಮುಂಡರಗಿ ಠಾಣೆ , ಲಾಲಸಾಬ ಜೂಲಕಟ್ಟಿ ಆರಕ್ಷಕ ಉಪನಿರೀಕ್ಷಕರು ಗದಗ ಗ್ರಾಮೀಣ ಠಾಣೆ , ಆನಂದಸಿಂಗ ದೊಡ್ಡಮನಿ ಸಿ.ಇ.ಎನ್ . ಠಾಣೆ , ಬಸವರಾಜ ಗುಡ್ಡಾಪೂರ
ಸಿ.ಎಚ್.ಸಿ . ಗದಗ ಗ್ರಾಮೀಣ ಠಾಣೆ , ಹನುಮಂತಗೌಡ ಮರಿಗೌಡ್ರ ಎ.ಎಚ್.ಸಿ . ಡಿ.ಎ.ಆರ್ . ಗದಗ , ಪ್ರವೀಣ ಕಲ್ಲೂರ ಸಿ.ಪಿ.ಸಿ. ಗದಗ ಶಹರ ಠಾಣೆ , ಮಾರುತಿ ಜೋಗದಂಡಿಕರ ಪಿ.ಎಸ್.ಐ . ಗದಗ , ಕಪ್ಪತ್ತನವರ ರಾಜ್ಯ ಗುಪ್ತವಾರ್ತೆ , ಶ್ರೀಮತಿ ಜಿ.ಟಿ. ಜಕ್ಕಲಿ ಪಿ.ಎಸ್.ಐ. ಗದಗ ಶಹರ , ಶ್ರೀಮತಿ ಶಕುಂತಲಾ ನಾಯ್ಕ ಪಿ.ಎಸ್.ಐ. ಟ್ರಾಪಿಕ್ ರವರುಗಳನ್ನು ಕರ್ನಾಟಕ ರಾಜ್ಯ ಡಾ . ಪಂಡಿತ ಪುಟ್ಟರಾಜ ರೈತ ಸಂಘ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಿ , ಗೌರವಿಸಲಾಯಿತು
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಹಾಂತೇಶ ಶಲಿಯಪ್ಪನವರ ನೆರವೇರಿಸಿದರು . ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ಲಾವುದ್ದೀನ ಮೆಹಬೂಬಸಾಬ ಮುಳಗುಂದ , ಪ್ರಶಾಂತ ಕಟ್ಟಿಮನಿ ಹರ್ಲಾಪೂರ ಗ್ರಾಮ ಘಟಕದ ಅಧ್ಯಕ್ಷರು , ಮಂಜುನಾಥ ಉಮಚಗಿ ಗ್ರಾಮ ಘಟಕದ ಅಧ್ಯಕ್ಷರು , ಹರ್ತಿ ಗ್ರಾಮ ಘಟಕ ಮಹಿಳಾ ಅಧ್ಯಕ್ಷರಾದ ರೇಖಾ ಬೆಂತೂರ 
ಹುಸೇನಬಿ ನದಾಫ ಗದಗ , ಸೋಫಿಯಾ ನದಾಫ ಗದಗ , ಚನ್ನಬಸವ ಕೊಪ್ಪಣ್ಣವರ ಬಳಗಾನೂರ , ಶ್ರೀಮತಿ ನೀಲವ್ವ ಕೊಪ್ಪಣ್ಣನವರ ಬಳಗಾನೂರ , ನಿಂಗವ್ವ ತಿಪ್ಪಣ್ಣವರ ಹರ್ತಿ ಹಾಗೂ ರಾಜ್ಯ ಘಟಕ , ಜಿಲ್ಲಾ ಘಟಕ , ತಾಲೂಕ ಘಟಕ ಹಾಗೂ ಗ್ರಾಮ ಘಟಕದವರು ಪಾಲ್ಗೊಂಡಿದ್ದರು.