ಕರುನಾಡು ಘರ್ಜನೆ ಸುದ್ದಿ ಗದಗ : ಸವಿತಾ ಸಮಾಜದ ರಾಜ್ಯ ನಾಯಕರು ಹಾಗೂ ವಕೀಲರಾದ ಬೇಂಗಳೂರಿನ ಬೈಲಪ್ಪ ನಾರಾಯಣಸ್ವಾಮಿ ಅವರ ಕ್ಷೌರಿಕ ವೃತ್ತಿ ನೈಪೂಣ್ಯತೆ ಹಾಗೂ ಸಮಾಜ ಸೇವೆಯಲ್ಲಿ ಕಾಣಬಹುದಾದ ವಿಶೇಷ ಗುಣಗಳೆಂದರೆ ಸ್ವಪರಿಶ್ರಮದಲ್ಲಿ ವಿಶ್ವಾಸ ಮತ್ತು ಅನನ್ಯ ಆತ್ಮಗೌರವ. ಅವರ ಈ ವಿಶೇಷಗಳು ಇಂದು ಅವರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದರು
ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ ಬೈಲಪ್ಪ ನಾರಾಯಣಸ್ವಾಮಿ ಅವರು ಸುಶಿಕ್ಷಿತರಾದರೂ ಬೆವರಿಳಿಸಿ ದುಡಿಯುವುದಕ್ಕೆ ಸಮಾಜಪರ ವಾದ ಮಾಡಲಿಕ್ಕೆ ಹಾಗೂ ಬಡ ಕ್ಷೌರಿಕರಿಗೆ ಸರಕಾರದಿಂದ ಸಿಗಬಹುದಾದ ಸೌಲಭ್ಯ ದೊರಕಿಸಿಕೊಡಲಿಕ್ಕೆ ಯಾವತ್ತು ಹಿಂಜರಿಯಲಾರದೆ ಇಂದು ಅವರು ಸಮಾಜದಲ್ಲಿ ಪ್ರಭಾವಿ ಜನನಾಯಕನಾಗಿ ಗುರುತಿಸಲ್ಪಡುತ್ತಿದ್ದಾರೆ ಎಂದ ಅವರು ಯುವ ಹಾಗೂ ಬಡ ಕ್ಷೌರಿಕರ. ಹಾಗೂ ಸವಿತಾ ಸಮಾಜದ ಮುಂದಿನ ಭವಿಷ್ಯದ ಬಗ್ಗೆ ಭವ್ಯ ಕಲ್ಪನೆಗಳನ್ನು ಹೊಂದಿದ ಕನಸುಗಾರ. ಎಂದ ಅವರು ಬೈಲಪ್ಪ ನಾರಾಯಣಸ್ವಾಮಿ ರಾಜ್ಯ ಮಟ್ಟದ ನಾಯಕನಾಗಿ ಕ್ರಿಯಾಶೀಲ ಸಂಘಟಿಕನಾಗಿ ಹೆಸರು ಸಂಪಾದಿಸಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಸಮರ್ಥ ನಾಯಕನಾಗಿ ಹೊರಹೊಮ್ಮಿದ್ದಾರೆ
ತನ್ನ ವೃತ್ತಿ ಜೊತೆಗೆ ಕರ್ನಾಟಕ ರಾಜ್ಯ ಸವಿತಾ ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಾಜ್ಯದ ಗುರು ಹಿರಿಯರು ಸವಿತಾ ಸಮಾಜದ ಮುಖಂಡರ ನೆರವಿನಿಂದ
ಕ್ಷೌರಿಕ ವೃತ್ತಿದಾರರನ್ನು ಅಸಂಘಟಿತಕ್ಕೆ ಆದೇಶ. ಸವಿತಾ ಸಮಾಜದ ಕುಲಾಶಾಸ್ಥ್ರಿಯ ಆದ್ಯಯನಕ್ಕೆ ಆದೇಶ. ಸವಿತಾ ಮಹರ್ಷಿ ಜಯಂತಿ ಆದೇಶ. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸರಕಾರಕ್ಕೆ ಕುಲಾಶಾಸ್ಥ್ರಿಯ ಅದ್ಯಾಯನದ ವರದಿ. ಜಾತಿ ನಿಂದನಕ್ಕೆ ಶಿಕ್ಷೆಗೂಳಿಸುವ ವರದಿ. ಪ್ರವರ್ಗ 1 ಕ್ಕೆ ಸೇರಿಸಬೇಕೆಂದು ಆದೇಶ. ಭಾರತೀಯ ಇತಿಹಾಸದ ಪುಟಗಳಲ್ಲಿ ಅನೇಕ ಶಾಸನಗಳಲ್ಲಿ ಕ್ಷೌರಿಕ ಸಮೂದಯವನ್ನು ನಾಯಿಂದ ಎಂದು ನಮೂದಾಗಿರುವುದರಿಂದ ಹಿಂದುಳಿದ ವರ್ಗಗಳ ಪಟ್ಟಿಯಿಂದ ನಾಯಿಂದ ತೆಗೆದಿರುವುದಕ್ಕೆ ಸೇರಿಸುವುದಕ್ಕೆ ವರದಿ. ಬೆಂಗಳೂರಿನ ರಾಜಾಜಿನಗರದ ಇ.ಎಸ್.ಆಯ್. ಆಸ್ಪತ್ರೆಯ ಮುಂಭಾಗದಲ್ಲಿ ಇರುವ ರಸ್ತೆಗೆ ಸವಿತಾ ಮಹರ್ಷಿ ರಸ್ತೆಗೆ ನಾಮಕರಣ ಮಾಡಿಸಿ ಅಲ್ಲಿ ಸವಿತಾ ಮಹರ್ಷಿ ಪುತ್ತಳಿ ನಿರ್ಮಾಣಕ್ಕೆ ಆದೇಶ ಮಾಡಲು ಸ್ಥಳೀಯ ಶಾಸಕರು , ಬಿ.ಬಿ.ಎಂ.ಪಿ ಸದಸ್ಯರ ಒಪ್ಪಿಗೆ ಪಡೆದು ಮಹಾಪೌರರಿಗೆ ನೀಡಿರುವ ಕ್ರಮ. ರಾಜ್ಯದ ಬಂದುಗಳ ಒತ್ತಾಯದ ಪರಿಣಾಮ ಸವಿತಾ ಸಮೂದಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ವರದಿ ತಯಾರಿಸಲು ಪ್ರಯತ್ನ. 2007 ರಿಂದ 2016 ರ ವರೆವಿಗೂ ಸತತವಾಗಿ ರಾಜ್ಯದಲ್ಲಿ ಜಾತಿ ನಿಂದನೆ ಮಾಡಿದ ಜ್ಯೋತಿಷರ , ನ್ಯೂಸ್ ಚಾನಲಗಳ ವಿರುದ್ದ , ಚಲನಚಿತ್ರ ನಟ ನಟಿಯರ ವಿರುದ್ದ ಪ್ರತಿಭಟನೆ ಮಾಡಿ ಅವರಿಂದ ಕ್ಷಮೆಯಾಚಿಸಿರುವುದು, ಇವೆಲ್ಲ ಸವಿತಾ ಸಮಾಜದ ಅಬ್ಯೂದಯಕ್ಕಾಗಿ ಎಲ್ಲಾ ಕಾರ್ಯಗಳಲ್ಲಿ ಹೋರಾಟ ಮಾಡಿ ಆದೇಶ. ವರದಿಗಳನ್ನು ಸರಕಾರಕ್ಕೆ ಸಲ್ಲಿಸಲು ಪ್ರಮುಖ ಪಾತ್ರ ವಹಿಸಿರುವ ಬೈಲಪ್ಪ ನಾರಾಯಣ ಸ್ವಾಮಿ ಯರವರು ಕರ್ನಾಟಕ ರಾಜ್ಯ ಸವಿತಾ ಸಮಾಜದಲ್ಲಿ ನೆಡೆಯುತ್ತಿದ್ದ ಎಲ್ಲಾ ವಿಷಯಗಳನ್ನು ನೇರವಾಗಿ ಜನರಿಗೆ ತಲುಪಿಸಿ ಜನರಿಗೆ ಅರಿವು ಮೂಡಿಸಿದ್ದು ಇವರ ಇನ್ನೂಂದು ಕಾರ್ಯ. ಮತ್ತು ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಬಿವೃದ್ದಿ ನಿಗಮ ಸ್ಥಾಪಿಸಲು ಮತ್ತು ಕೇಂದ್ರ ಸರಕಾರದಲ್ಲಿ ನಿಯಮಬದ್ದವಾಗಿ ನೋಂದಾಯಿಸಲು ಶ್ರಮ ಮತ್ತು ಸವಿತಾ ಸಮಾಜದ ಅಬಿವೃದ್ದಿ ನಿಗಮದಲ್ಲಿ ಸವಿತಾ ಸಮಾಜದ ಅಬಿವೃದ್ದಿಗಾಗಿ ನೀಡಿರುವ ಹಣದಲ್ಲಿ 1 ಕೋಟಿ ಖಾಸಗಿ ಕಂಪನಿಗೆ ನೀಡಲು ಮುಂದಾಗಿದ್ದಾಗ ಅದನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ ಪರಿಣಾಮ ಸರಕಾರ 1 ಕೋಟಿ ಹಣ ಬಿಡುಗಡೆ ಮಾಡದೆ ಇರುವುದು. ಹಾಗೂ ಕರ್ನಾಟಕ ರಾಜ್ಯ ಸವಿತಾ ಸಮಾಜಕ್ಕೆ ಸರಕಾರವು 1 ಕೋಟಿ ಅನುದಾನ ನೀಡಿದಾಗ ಅದನ್ನು ಸಂಘದ ಕೆಲವು ಪದಾಧಿಕಾರಿಗಳು ಅನ್ಯಾಯವಾಗಿ ದೋಚಲು ಪ್ರಯತ್ನ ಪಟ್ಟಾಗ ಸಂಘದ ಸದಸ್ಯರ ಜೂತೆಗುಡಿ 70 ಲಕ್ಷ ಊಳಿಸಿರುವುದು ಇವರ ಸಮಾಜದ ಕಾಳಜಿ ಎದ್ದು ಕಾಣುತ್ತಿದೆ ಎಂದು ಮಾತನಾಡುತ್ತಾ ಕೃಷ್ಧಾ ಎಚ್ ಹಡಪದ ಮುಂದುವರಿದು ಮಾತನಾಡಿ 50 ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬೈಲಪ್ಪ ನಾರಾಯಣಸ್ವಾಮಿ ಅವರ ವಿನಯಶೀಲ ಸಾಚಾ ನಡವಳಿಕೆಯ ಹಿರಿಯ ಸಂಘಟಕ ಕರ್ನಾಟಕ ರಾಜ್ಯ ಸವಿತಾ ಸಮಾಜದ ಹೆಮ್ಮೆ. ಭವಿಷ್ಯದ ನಾಯಕ. ಇವರು ಕಂಡ ಸವಿತಾ ಸಮಾಜದ ಸಮಘ್ರ ಅಭಿವೃದ್ದಿಯ ಕನಸುಗಳು ಸಾಕಾರಗೊಳ್ಳಲಿ. ಸಂಸಾರ, ಸಾರ್ವಜನಿಕ ಜೀವನ ಉತ್ಕರ್ಷ ಕಾಣಲಿ. ಸಮಾಜೋತ್ಥಾನ ಕಳಕಳಿ ಮುಂದುವರಿಯಲಿ. ಇವರಿಗೆ ಶ್ರೀ ಗದ್ವಾಲ್ ಜಮಲಮ್ಮ ದೇವಿ ಹರಸಲಿ ಎಂಬ ಸದಾಶಯ ಸಮಸ್ತ ಸವಿತಾ ಸಮಾಜ ಬಾಂಧವರದ್ದು ಜೊತೆಗೆ ಬೈಲಪ್ಪ ನಾರಾಯಣಸ್ವಾಮಿ ಅವರಿಗೆ ವಿಷೇಶವಾಗಿ ಗದಗ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಮತ್ತು ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಮತ್ತು ಜಿಲ್ಲಾ ಪದಾಧಿಕಾರಿಗಳಿಂದ ಶುಭ ಹಾರೈಕೆಗಳು ಸಲ್ಲಿಸಿದ್ದಾರೆ
ಕಾರವಾಗಿ ಹೇಳಿದ್ದನ್ನು ಸಿಹಿಯಾಗಿ ಸ್ವಿಕರಿಸಿ ಸಮಾಜದ ಮುಖ್ಯವಾಹಿನಿಗೆ ಬರುವರೇ..?
ರಾಜ್ಯದಲ್ಲಿ ನಮ್ಮ ಸವಿತಾ ಜನಾಂಗದಲ್ಲಿ ಬಹಳಷ್ಟು ಶ್ರೀಮಂತರು ಮತ್ತು ನ್ಯಾಯಾಧೀಶರು, ವಕೀಲರು, ಸಾಫ್ಟ್ವೇರ್ ಕಂಪನಿಗಳಲ್ಲಿ, ಕೆಲಸ ಮಾಡುವಂತಹ ನಮ್ಮ ಬಂಧುಗಳು,ಜೊತೆಗೆ ವೈದ್ಯರು, ಸರ್ಕಾರದಲ್ಲಿ ಕೆಲಸ ಮಾಡುವ ನೌಕರರು, ಸಾಕಷ್ಟು ಸಂಖ್ಯೆಯಲ್ಲಿ ವ್ಯಾಪಾರಸ್ಥರು,ಜೊತೆಗೆ ವಿಚಾರವಾದಿಗಳು ಇದ್ದಾರೆಂದು ಹೆಳಲು ಹೆಮ್ಮೆ ಆಗುತ್ತೆ ಆದರೆ ಈವರಲ್ಲಿ 5 ರಷ್ತು ಹೊರತು ಪಡಿಸಿ ಉಳಿದ 95 ರಷ್ಟು ಜನರು ಸವಿತಾ ಸಮಾಜದ ಹೆಸರು ಹೆಳದೆ ಸುಳ್ಳು ಜಾತಿ ಮತ್ತು ಸಮಾಜ ಹೆಳಿಕೊಂಡು ಕ್ಷೌರಿಕ ಜಾತಿಗೆ ಮತ್ತು ಸವಿತಾ ಸಮಾಜಕ್ಕೆ ಬಹು ದೊಡ್ಡ ಪ್ರಮಾಣದಲ್ಲಿ ದ್ರೋಹಬಗೆದು ಬದುಕುತ್ತಿದ್ದಾರೆ
ನಮ್ಮ ಸಮಾಜದ ಹೆಮ್ಮೇಯ ಶ್ರೀಮಂತ ಮತ್ತು ಹೃದಯವಂತ ನಾಮದೇವ ನಾಗರಾಜ ಮತ್ತು ಸದಾ ಕ್ಷೌರಿಕರ ಎಳಿಗೆಗಾಗಿ ಸೇವೆಯಲ್ಲಿರುವ ವಕೀಲರಾದ ಬೈಲಪ್ಪ ನಾರಾಯಣಸ್ವಾಮಿ ಇವರನ್ನ ನೋಡಿಯಾದ್ರು ತಾವುಗಳು ಬದಲಾಗಬೇಕು ಈ ಮೂಲಕ ಸವಿತಾ ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ಸಮಾಜದ ಬಡವರ ಪಾಲಿಗೆ ನೆರವಾಗುವ ಮೂಲಕ ನಾನೋಬ್ಬ ಕ್ಷೌರಿಕ ಜಾತಿಯವನು ಮತ್ತು ಸವಿತಾ ಸಮಾಜದ ಕುಟುಂಬದವನು ಎಂದು ಹೆಮ್ಮೆಯಿಂದ ಹೇಳಿ ಮುಂದೆ ಬಂದರೆ ರಾಜ್ಯದಲ್ಲಿ ಬೆಳೆದಂತ ಸಮುದಾಯಗಳಲ್ಲಿ ಸವಿತಾ ಸಮಾಜ ಕೂಡಾ ಒಂದಾಗಲು ಸಾಧ್ಯ ಎಂದು ಕಾರವಾಗಿ ಹೇಳಿದ್ದನ್ನು ಸಿಹಿಯಾಗಿ ಸ್ವಿಕರಿಸಿ ಸಮಾಜದ ಬಡವರ ನೆರವಿಗೆ ಸಮಾಜದ ಸೇವೆಗೆ ಮುಂದೆ ಬರುವರೇ ಕಾದು ನೊಡಬೇಕಾಗಿದೆ