ಕರುನಾಡು ಘರ್ಜನೆ ಸುದ್ದಿ : ಗದಗ : ಇತ್ತೀಚೆಗೆ ಕರ್ನಾಟಕ ಘನ ಸರಕಾರ ಜಾರಿಗೊಳಿಸಲು ಮುಂದಾಗಿರುವ ಶ್ರೀ ಕಾಂತರಾಜ – ಜಯ ಪ್ರಕಾಶ ಹೆಗ್ಗಡೆ ಆಯೋಗವು ನೀಡಿರುವ ಜಾತಿಗಣತಿ ಸಮೀಕ್ಷಾ ವರದಿ
ಜಾರಿಗೊಳಿಸಲು ನಮ್ಮ ವಿರೋಧವಿದೆ . ಇದರಲ್ಲಿ ಅವರು ತಿಳಿಸಿದ ನಮ್ಮ ಸಮಾಜದ ಜನಗಣತಿ ಅಂಕಿ ಅಂಶಗಳು ಸತ್ಯಕ್ಕೆ ದೂರವಾಗಿದೆ , ರಣ ಕುರುಹಿನಶೆಟ್ಟಿ ಸಮಾಜದ ಮೂಲ ಪೀಠದ ಪೀಠಾಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪ್ರವಾಸ ಕೈಗೊಡ ಕುರುಹಿನಶೆಟ್ಟಿ ಸಮಾಜದ
ಜನಸಂಖ್ಯೆಯು ಸುಮಾರು 12 ಲಕ್ಷಕ್ಕೂ ಅಧಿಕ ವಿರುವುದು ನಮಗೆ ತಿಳಿದಿರು ವಿಷಯ. ಈಗ ಜಾರಿಗೊಳಿಸುತ್ತಿರುವ ಸಮೀಕ್ಷಾ ವರದಿ ಪ್ರಕಾರ ಪ್ರತಿಯೊಂದು ಊರಿನ ಮನೆ – ಮನೆಗೆ ತೆರಳಿ ಸರಿಯಾದ ಮಾಹಿತಿ ಸಂಗ್ರಹಿಸದೇ ಇರುವುದು , ಹತ್ತು ವರ್ಷಗಳ ಹಿಂದೆ ಮಾಡಿರುವ ಸಮೀಕ್ಷೆಯು ಅವೈಜ್ಞಾನಿಕವಾಗಿ ಇರುವುದರಿಂದ ಈಗ ಈ ವರದಿ
ಪ್ರಸ್ತುತವಾಗುವುದಿಲ್ಲ . ಹಿಂದುಳಿದ ಸಮುದಾಯ ಗಳಲ್ಲಿ ಒಂದಾಗಿರುವ ಕುರುಹಿನಶೆಟ್ಟಿ ಸಮಾಜವು ಆರ್ಥಿಕವಾಗಿ , ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಹಾಗೂ ರಾಜಕೀಯ ವಾಗಿ ಹಿಂದೆ ಉಳಿದಿರುವುದಕ್ಕೆ ಈ ತರದ ಅವೈಜ್ಞಾನಿಕ , ಅಪ್ರಾಯೋಗಿಕ ಸಮೀಕ್ಷೆಗಳೇ ಕಾರಣ , ಸರಕಾರವು ಇದನ್ನು ಬೇಗನೆ ಸರಿಯಾದ ಸಮೀಕ್ಷೆ ಮಾಡಿ ನಮ್ಮ ಸಮುದಾಯಕ್ಕೆ ಆದ
ಅನ್ಯಾಯವನ್ನು ಸರಿಪಡಿಸಬೇಕು ಇಲ್ಲ : ನದಲ್ಲಿ ನಮ್ಮ ಹಕ್ಕುಗಳಿಗಾಗಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ . ಈ ವಿಷಯವನ್ನು ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮ ಮಿತ್ತರು ಅವಲೋಕಿಸಿ ನಮ್ಮ ಸಮಾಜಕ್ಕೆ ಆದ ಅನ್ಯಾಯ ಸರಿಪಡಿಸಲು , ಸರ್ಕಾರದ ಕಣ್ಣು ತೆರೆಸಲು ನಾಗೆ ಸಹಕಾರ
ನೀಡಬೇಕೆಂದು ನಮ್ಮ ಕುರುಹಿನಶೆಟ್ಟಿ ಮೂಲಪೀಠ ಹಾಗೂ ಸಮಸ್ಯೆ ಕುರುಹಿನಶೆಟ್ಟಿ ಸಮಾಜ ಬಾಲ ಭಾರ ಪರವಾಗಿ ತಮ್ಮಲ್ಲಿ ಬಿನ್ನಹಿಸುತ್ತೇವೆ . ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಸ್ವಾಮಿಗಳು ಶ್ರೀಶೈಲ ಮೂಲಪೀಠ , ಬೆಟಗೇರಿ ಗದಗ ( ಅಖಿಲ ಭಾರತ ಕುರುಹಿನಶೆಟ್ಟಿ ಸಮಾಜ )
ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಸ್ವಾಮಿಗಳು , ಶ್ರೀಶೈಲ ಮೂಲಪೀಠ, ಬೆಟಗೇರಿ ಪತ್ರಿಕಾ ಗೋಷ್ಠಿ ಮಾಡಿದರು.