Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ l ಸಮಾನತೆಯ ರಥಯಾತ್ರೆ – ಸಮಾನತೆಯ ಬುತ್ತಿ.

ಕರುನಾಡು ಘರ್ಜನೆ ಸುದ್ದಿ : ಗದಗ :ಆತ್ಮೀಯ ಬಂಧುಗಳೇ ರಾಮಮಂದಿರ ನಿರ್ಮಾಣ ಭಾರತ ದೇಶದ ಬಹುಸಂಖ್ಯಾತ ಹಿಂದೂಗಳ ಬಹು ವರ್ಷಗಳ ಬೇಡಿಕೆಯಾಗಿತ್ತು , 22 ನೇ ಜನೇವರಿ –2024 ರಂದು ಆಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಗೊಂಡು ಈಗಾಗಲೇ ಇತಿಹಾಸದ ಪುಟಗಳಲ್ಲಿ ಸೇರಿಯಾಗಿದೆ…

ಕರುನಾಡು ಘರ್ಜನೆ ಸುದ್ದಿ : ಗದಗ :ಆತ್ಮೀಯ ಬಂಧುಗಳೇ ರಾಮಮಂದಿರ ನಿರ್ಮಾಣ ಭಾರತ ದೇಶದ ಬಹುಸಂಖ್ಯಾತ ಹಿಂದೂಗಳ ಬಹು ವರ್ಷಗಳ ಬೇಡಿಕೆಯಾಗಿತ್ತು , 22 ನೇ ಜನೇವರಿ –2024 ರಂದು ಆಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಗೊಂಡು ಈಗಾಗಲೇ ಇತಿಹಾಸದ ಪುಟಗಳಲ್ಲಿ ಸೇರಿಯಾಗಿದೆ . ವ್ಯಕ್ತಿತ್ವದ ಆದರ್ಶಗಳ

ಸಾಕ್ಷಿಯಾಗಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗಿದ್ದಾರೆ . ಅದರಂತೆ ವಿಶ್ವಗುರು ಬಸವಣ್ಣನವರು , ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕ‌ರವರು , ಗೌತಮ ಬುದ್ಧ , ಶಿಶುನಾಳ ಶರೀಫರು , ಮಹರ್ಷಿ ವಾಲ್ಮೀಕಿ , ಶ್ರೀ ಸಂತ ಸೇವಾಲಾಲ್ ಮಹಾರಾಜರು ಭಕ್ತ ಕನಕದಾಸರು , ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಸಮಾಜಕ್ಕೆ

ಸಮಾನತೆಯ ಸಂದೇಶ ಸಾರಿದ್ದಾರೆ , ಸಮಾನತೆಯ ಸಂದೇಶ ನೀಡಿ ನೂರಾರು ವರ್ಷಗಳೇ ಕಳೆದರೂ ಇನ್ನೂವರೆಗೂ ಸಮಾಜದಲ್ಲಿ ಅಸಮಾನತೆ ಇದೆ . ಹೀಗಾಗಿಯೇ ಲೋಕಕ್ಕೆಲ್ಲಾ ಮತ್ತಷ್ಟು ಪರಿಣಾಮಕಾರಿಯಾಗಿ ಸಮಾನತೆಯ ಸಂದೇಶ ಸಾರಬೇಕೆಂಬ

ಸದುದ್ದೇಶದಿಂದ ಸಮಾನತೆ ಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ . ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದ್ದೊಂದು ವಿಶಿಷ್ಟ ಯೋಚನೆ , ಯೋಜನೆಗೆ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾ ( ರಿ ) ಗದಗ – ಕರ್ನಾಟಕ ಮುಂದಾಗಿದೆ . ಇದರ ಭಾಗವಾಗಿ ಮಹಾನ್ ಮಾನವತಾವಾದಿ ಡಾ . ಬಾಬಾಸಾಹೇಬ್

ಅಂಬೇಡ್ಕರ್‌ರವರ ಜನ್ಮದಿನವಾದ ಏಪ್ರಿಲ್ 14 ರಿಂದ ಬಸವ ಜಯಂತಿಯವರೆಗೆ ಸಮಾನತೆ ರಥಯಾತ್ರೆ – ಸಮಾನತೆಯ ಬುತ್ತಿಯ ಕಾರ್ಯಕ್ರಮವು ಗದಗ ಜಿಲ್ಲೆಯಾದ್ಯಂತ ನಡೆಯಲಿದೆ . ರಾಮ , ಭೀಮ , ಬುದ್ಧ , ಬಸವ , ಕನಕದಾಸರು , ಮಹರ್ಷಿ ವಾಲ್ಮೀಕಿ , ಶ್ರೀ ಸಂತ ಸೇವಾಲಾಲ ಮಹಾರಾಜರು , ಶ್ರೀ ಶಿಶುನಾಳ ಶರೀಫರು ಹೀಗೆ ಅನೇಕ

ಮಹನೀಯರ ತತ್ವ , ಆದರ್ಶಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತದೆ . ದಿನಾಂಕ : 19 ನೇ ಎಪ್ರೀಲ್ 2025 ಮಧ್ಯಾಹ್ನ 3 ಘಂಟೆಗೆ ಸಮಾನತೆಯ ರಥಯಾತ್ರೆ – ಸಮಾನತೆಯ ಬುತ್ತಿ ಗದಗ – ಬೇಟಗೇರಿ ಅವಳಿ ನಗರದಲ್ಲಿರುವ ಬಸವೇಶ್ವರ ಸರ್ಕಲ್‌ನಿಂದ ( ಹತ್ತಿಕಾಳ ಕೂಟ್ ) ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ನಗರಸಭೆಯ ಆವರಣದಲ್ಲಿರುವ ಡಾ . ಬಿ .

ಆರ್ ಅಂಬೇಡ್ಕ‌ರವರ ಮೂರ್ತಿಗೆ ಮಾಲಾರ್ಪಣೆಯೊಂದಿಗೆ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಬೃಹತ್‌ ಬಹಿರಂಗ ಸಭೆ ನಡೆಯಲಿದೆ . ಅಂದು ನೂರಾರು ಸಂತರು – ಪರಣರು , ಪೌರಕಾರ್ಮಿಕರು , ಶ್ರಮಿಕರು , ಬುದ್ದಿಜೀವಿಗಳು , ಸಾಹಿತಿಗಳು , ಸ್ಮಶಾನ ಕಾವಲುಗಾರರು , ದೀನ ದಲಿತರು , ದಮನಿತರಿಗೆ ಬೃಹತ್‌ ಮೇರವಣಿಗೆಯೊಂದಿಗೆ ಬಹಿರಂಗ

ಸಭೆಯಲ್ಲಿ ಸನ್ಮಾನಿಸಿ ಗೌರವಿಸ ಲಾಗುವುದು . ತನ್ನ ಸಲಹೆ – ಸೂಚನೆ – ಸಹಕಾರ ತುಂಬಾ ಮುಖ್ಯವಾಗಿದ್ದು , ಈ ಕಾರ್ಯಕ್ರಮಕ್ಕೆ ತಾವು ತನ್ನವರೊಂದಿಗೆ ಹೆಚ್ಚಿನ ಜನಸಂಖ್ಯೆಯಲ್ಲಿ ಪಾಲ್ಗೊಂಡು , ಸಮಾನತೆಯ ರಥಯಾತ್ರೆ – ಸಮಾನತೆಯ ಬುತ್ತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರೊಂದಿಗೆ ಸಮಾನತೆಯ ಮಂದಿರ ನಿರ್ಮಾಣಕ್ಕೆ

ಎಲ್ಲರೂ ಕೈ – ಜೋಡಿಸಬೇಕೆಂದು ತಮ್ಮಲ್ಲಿ ಕಳಕಳೆಯ ವಿನಂತಿ , ಎಲ್ಲವೂ ಸಮಾನತೆಗಾಗಿ .. ! ಸಮಸಮಾಜ ನಿರ್ಮಾಣಕ್ಕಾಗಿ …. !! ಬನ್ನಿ ಭಾಗವಹಿಸಿ … ಸಮಾನತೆಯ ರಥಯಾತ್ರೆಯ ಸಮಾನತೆಯ ಬುತ್ತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

Editor

Leave a comment