ಕರುನಾಡು ಘರ್ಜನೆ ಸುದ್ದಿ ಹಾವೇರಿ: ವ್ಯಕ್ತಿಯೊಬ್ಬ ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆ ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕೆ ಸಿಟ್ಟಾದ ಐವರು ಜನರ ಗುಂಪು ಮಾರಕಾಸ್ತ್ರಗಳ ಸಮೇತ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.ಕುರುಬಗೊಂಡ ಗ್ರಾಮದ ಸುನೀಲ ದೊಡ್ಡಮನಿ, అనిల ದೊಡ್ಡಮನಿ, ಶಾಂತಪ್ಪ ಹಾವೇರಿ, ರಾಮಪ್ಪ ಬಡಕರಿಯಪ್ಪನವರ, ಮಾರುತಿ ದೊಡ್ಡಮನಿ ಹಾಗೂ ಮತ್ತಿತರರ ವಿರುದ್ಧ ದೂರು ದಾಖಲಾಗಿದೆ. ಕುರುಬಗೊಂಡ ಗ್ರಾಪಂಗೆ ಸಂಬಂಧಪಟ್ಟ ಮಾಹಿತಿ ಪಡೆಯಲು ಗ್ರಾಮದ ಶಿವಪ್ಪ ಮಾಳಗಿ ಎಂಬಾತ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿಗಳು, ಚಾಕು ಇತರೆ ಮಾರಕಾಸ್ತ್ರಗಳೊಂದಿಗೆ ಗುಂಪು ಕಟ್ಟಿಕೊಂಡು ಅರ್ಜಿದಾರ ಶಿವಪ್ಪನ ಮನೆಗೆ ನುಗ್ಗಿ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಯ ರಕ್ಷಣೆ ಬಂದ ನನ್ನನ್ನು ಎಳೆದಾಡಿದ್ದಾರೆ ಎಂದು ಶಿವಪ್ಪನ ಪತ್ನಿ ಕವಿತಾ ಮಾಳಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ RTI ಮಾಹಿತಿ ಕೇಳಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ..!
ಕರುನಾಡು ಘರ್ಜನೆ ಸುದ್ದಿ ಹಾವೇರಿ: ವ್ಯಕ್ತಿಯೊಬ್ಬ ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆ ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕೆ ಸಿಟ್ಟಾದ ಐವರು ಜನರ ಗುಂಪು ಮಾರಕಾಸ್ತ್ರಗಳ ಸಮೇತ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.ಕುರುಬಗೊಂಡ ಗ್ರಾಮದ ಸುನೀಲ ದೊಡ್ಡಮನಿ, అనిల…