ಕರುನಾಡು ಘರ್ಜನೆ ಸುದ್ದಿ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗರದ ಧಾಂಪುರ್ ಪ್ರದೇಶದಲ್ಲಿ ಅನ್ಯ ಕೋಮಿನ ಕುಟುಂಬದ ಇಬ್ಬರು ಮಹಿಳೆಯರು, ಓರ್ವ ಸವಾರ ಬೈಕ್ನಲ್ಲಿ ತೆರಳುತ್ತಿರುತ್ತಾರೆ. ಈ ವೇಳೆ ಅಡ್ಡ ಹಾಕಿರುವ ಯುವಕರು ಜೋಶ್ನಲ್ಲಿಯೇ ಆ ಕುಟುಂಬದ ಮೇಲೆ ಹೋಳಿ ಹಾಕಿದ್ದಾರೆ. ಆಗ ಮೂವರು ನಮಗೆಲ್ಲ ಹಚ್ಚ ಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಲೆಕ್ಕಿಸದ ಯುವಕರು ಮತ್ತಷ್ಟು ಜೋರಾಗಿ ಹ್ಯಾಪಿ ಹೋಳಿ, ಹ್ಯಾಪಿ ಹೋಳಿ ಎನ್ನುತ್ತಾ ಜೈ ಶ್ರೀರಾಮ್, ಹರ.. ಹರ ಮಹಾದೇವ್ ಎನ್ನುತ್ತಾ ಸವಾರನಿಗೆ ಹಾಗೂ ಹಿಂದೆ ಕುಳಿತ ವೃದ್ಧೆಗೆ ನೀರು ಸುರಿದು, ಕಲರ್ ಹಾಕಿದ್ದಾರೆ. ಬಳಿಕ ಬೈಕ್ ಮುಂದೆ ಹೋಗುತ್ತಿದ್ದಂತೆ ಯುವಕರು ಓಡಿ ಹೋಗಿ ಹೋಳಿ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಸಂತ್ರಸ್ತ ಕುಟುಂಬವನ್ನು ತಲುಪಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಪಾಲ್ಗೊಂಡ ಯುವಕರಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗ್ತಿದೆ.
ಹೋಳಿ ಹುಣ್ಣಿಮೆ ಎಂದರೆ ಮನೆಯಲ್ಲಿ ಸಿಹಿ ಊಟ ಮಾಡಿ, ಸ್ನೇಹಿತರಿಗೆ, ಸಂಬಂಧಿಗಳಿಗೆ ಬಣ್ಣಗಳನ್ನು ಹಚ್ಚಿ ಖುಷಿ ಪಡುವುದು. ಇನ್ನೇನು ನಾಳೆ ಹೋಳಿ ಹಬ್ಬ ಇರುವುದರಿಂದ ಕೆಲವೆಡೆ ಯುವಕರು ಇಂದೇ ಬಣ್ಣ ಆಡುವುದು ಪ್ರಾರಂಭಿಸಿದ್ದಾರೆ. ಸದ್ಯ ಈ ರೀತಿ ಹೋಳಿ ಆಡುವಾಗ ಯುವಕರ ಗುಂಪೊಂದು ಅನ್ಯ ಕೋಮಿನ ಕುಟುಂಬದ ಮೇಲೆ ಹೋಳಿ ಹಾಕಿ, ನೀರು ಸುರಿದು ಜೈ ಶ್ರೀರಾಮ್, ಹರ.. ಹರ ಮಹಾದೇವ್ ಎನ್ನುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಸಂಬಂಧ ಕೇಸ್ ಕೂಡ ದಾಖಲಿಸಲಾಗಿದೆ ಎನ್ನಲಾಗಿದೆ.