Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಜಗತ್ತಿನ ಮೊಟ್ಟ ಮೊದಲ ನಾಗರಿಕ ಹಕ್ಕಿನ ಹೋರಾಟ  ಮಹಾಡ್ ಸತ್ಯಾಗ್ರಹ : ಬಾಲರಾಜ ಅರಬರ 

ಕರುನಾಡು ಘರ್ಜನೆ ಸುದ್ದಿ ಗದಗ ೨೮: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ರಾಜ್ಯ ಸಮಿತಿ ಹಮ್ಮಿಕೊಂಡಿರುವ ಮಹಾಡ್ ಸತ್ಯಾಗ್ರಹ: ಇತಿಹಾಸ ಮತ್ತು ವರ್ತಮಾನದ ಭಾರತ ಕುರಿತು ಒಂದು ವಿಚಾರ ಸಂಕಿರಣ ದಿ. ಮಾರ್ಚ ೩೦ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ…

ಕರುನಾಡು ಘರ್ಜನೆ ಸುದ್ದಿ ಗದಗ ೨೮: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ರಾಜ್ಯ ಸಮಿತಿ ಹಮ್ಮಿಕೊಂಡಿರುವ ಮಹಾಡ್ ಸತ್ಯಾಗ್ರಹ: ಇತಿಹಾಸ ಮತ್ತು ವರ್ತಮಾನದ ಭಾರತ ಕುರಿತು ಒಂದು ವಿಚಾರ ಸಂಕಿರಣ ದಿ. ಮಾರ್ಚ ೩೦ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಗದಗ ಜಿಲ್ಲಾ ಘಟಕದ ವತಿಯಿಂದ ನಡೆದ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಗದಗ ಜಿಲ್ಲಾ ಪ್ರಧಾನ ಸಂಚಾಲಕರಾದ ಬಾಲರಾಜ ಅರಬರ ಅವರು ಮಾತನಾಡಿ ೯೦ ವರ್ಷಗಳ ಹಿಂದೆ ಅಂದರೆ ಮಾರ್ಚ ೧೯೨೭ ರಂದು ಮಹಾರಾಷ್ಟçದಲ್ಲಿ ಬಾಬಾಸಾಹೇಬ ಅಂಬೇಡ್ಕರ ಅವರ ನೇತೃತ್ವದಲ್ಲಿ ಜಗತ್ತಿನ ಮೊಟ್ಟ ಮೊದಲ ನಾಗರಿಕ ಹಕ್ಕಿನ ಹೋರಾಟ ಎಂದು ಕರೆಯಬಹುದಾದ ಐತಿಹಾಸಿಕ ಮಹಾಡ್ ಸತ್ಯಾಗ್ರಹ ಪ್ರಾರಂಭವಾಯಿತು.

ಬ್ರಿಟಿಷ್ ಆಡಳಿತದಲ್ಲಿ ಅಸ್ಪçಶ್ಯ ಸಮುದಾಯಗಳಿಗೆ ವಂಚಿಸಲಾಗಿದ್ದ ನಾಗರಿಕ ಹಕ್ಕುಗಳನ್ನು ಒದಗಿಸುವ ಬೋಲೆ ರೆಸಲೂಶನ್ ಜಾರಿಗೆ ಬಂದ ಮೇಲೂ ಸಾರ್ವಜನಿಕ ಸ್ಥಳಗಳನ್ನು ಬಳಸುವ ಅವಕಾಶ ಅಸ್ಪçಶ್ಯ ಸಮುದಾಯಗಳಿಗೆ ಇರಲಿಲ್ಲ. ದಲಿತರನ್ನು ಮಡಿ- ಮೈಲಿಗೆಯ ಹೆಸರಿನಲ್ಲಿ ಮೇಲು-ಕೀಳು ಎನ್ನುವ ರಚನೆಯನ್ನು ರೂಪಿಸಿ ಶೋಷಿಸಿಕೊಂಡು ಬರುತ್ತಿದ್ದ ಹಿಂದೂ ಸಮಾಜ ಕಾನೂನಿಗೆ ಬೆಲೆ ಕೊಡಲಿಲ್ಲ. ಅದರಲ್ಲೂ ಕುಡಿಯುವ ನೀರಿನ ಮೂಲಗಳನ್ನು ಬಳಸಲು ಬಿಡದೆ ದಲಿತರಿಗೆ ಸಿಗಬೇಕಾದ ಹಕ್ಕುಗಳನ್ನು ನಿರಾಕರಿಸಿತ್ತು ಇದರ ವಿರುದ್ಧ ಹೋರಾಡಲು ಬಾಬಾಸಾಹೇಬರು ನೇತೃತ್ವದಲ್ಲಿ ಸ್ಥಾಪಿತವಾಗಿದ್ದ ಬಹಿಷ್ಕೃತ ಹಿತಕಾರಣಿ ಸಭಾ ನಿರ್ಧಾರ ಮಾಡಿತು. ಹಿಂದೂ ಧರ್ಮದ ಅಸ್ಪçಶ್ಯತೆಯ ಆಚರಣೆಯನ್ನು ಧಿಕ್ಕರಿಸಿ ಅಂಬೇಡ್ಕರ ಮಹಾಡ್‌ನ ಚೌಡಾರ ಕೆರೆಯ ನೀರನ್ನು ಸಾರ್ವಜನಿಕವಾಗಿ ಕುಡಿಯುವುದರ ಮೂಲಕ ಸಾಂಪ್ರದಾಯಿಕ ಸಮಾಜಕ್ಕೆ ಸವಾಲು ಎಸೆದರು. ಆ ಮೂಲಕ ಎಲ್ಲ ಜನರಂತೆ ಸಾರ್ವಜನಿಕ ಸೌಲಭ್ಯಗಳನ್ನು ಬಳಸುವುದು ದಲಿತರ ಹಕ್ಕು ಎನ್ನುವುದನ್ನು ಭಾರತೀಯ ಸಮಾಜಕ್ಕೆ ಸಾರಿ ಹೇಳಿದರು.

ಚೌಡಾರ್ ಕೆರೆಯ ನೀರನ್ನು ಕುಡಿಯುವ ಮೂಲಕ ಅಂಬೇಡ್ಕರ್ ಅಸ್ಪçಶ್ಯತೆಯ ರೋಗಕ್ಕೆ ಮದ್ದು ನೀಡಿ ಹಿಂದೂ ಧರ್ಮಕ್ಕೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರು.

ಅದರೆ ಸವರ್ಣೀಯ ಜನರು ಅಸ್ಪçಶ್ಯರು ಮುಟ್ಟಿದ ನೀರು ಅಪವಿತ್ರವಾಯಿತು ಎಂದು ಸಗಣಿ, ಗಂಜಲು, ಹಾಲು, ತುಪ್ಪ, ಹಾಕಿ ಕೆರೆಯನ್ನು ಶುದ್ಧೀಕರಣ ಮಾಡುವ ಮೂಲಕ ಹಿಂದೂ ಧರ್ಮದ ಜಾತಿಯ ರೋಗವನ್ನು ಇನ್ನಷ್ಟು ಉಲ್ಬಣಗೊಳಿಸಿಕೊಂಡರು.

ಬಾಬಾಸಾಹೇಬರ ನೇತೃತ್ವದಲ್ಲಿ ದಲಿತ ಸಮುದಾಯ ಶಾಂತಿಯುತವಾಗಿ ನಡೆಸಿದ ಈ ಹೋರಾಟದ ವಿರುದ್ಧ ಅಸಹನೆಗೊಂಡ ಮೇಲ್ಜಾತಿಯ ಜನ ಹೋರಾಟಗಾರ ಮೇಲೆ ದಾಳಿ ನಡೆಸಿ ಹಿಂಸಾಚಾರ ಮಾಡಿದರು.

ಹಿಂದೂ ಧರ್ಮದ ಮಡಿ ಮೈಲಿಗೆಯ ಕಲ್ಪನೆ ಮತ್ತು ದಲಿತರನ್ನು ಕೀಳಾಗಿ ನೋಡುವ ಮೇಲ್ಜಾತಿಗಳ ಅಹಂಕಾರಕ್ಕೆ ಬಾಬಾಸಾಹೇಬರು ಕೊಟ್ಟ ಮೊದಲ ಪೆಟ್ಟು ಮಹಾಡ್ ಸತ್ಯಾಗ್ರಹ ಕೇವಲ ಕುಡಿಯವ ನೀರನ್ನು ಪಡೆಯುವುದಷ್ಟೇ ಮಹಾಡ್ ಸತ್ಯಾಗ್ರಹದ ಉದ್ದೇಶವಾಗಿರಲಿಲ್ಲ. ಬದಲಾಗಿ ತಮ್ಮಿಂದ ಕಸಿದುಕೊಂಡಿದ್ದ ಘನತೆಯಿಂದ ಬದುಕುವ ಹಕ್ಕನ್ನು ಪುನಃ ಪಡೆದುಕೊಳ್ಳಲು ಮಾಡಿದ ಪ್ರಯತ್ನ

ಮಹಾಡ್ ಸತ್ಯಾಗ್ರಹ ದ ನಂತರ ಬಾಬಾಸಾಹೇಬರು ಈ ದೇಶದ ದಲಿತ, ದಮನಿತರೆ ಏಕಮಾತ್ರ ನಾಯಕನಾಗಿ, ವಿಮೋಚಕನಾಗಿ ಹೊರಹೊಮ್ಮಿದರು. ಮಹಾರಾಷ್ಟçದಲ್ಲಿ ಆರಂಭವಾದ ಮಹಾಡ್ ಸತ್ಯಾಗ್ರಹ ವಿಸ್ತರಣೆಯಾಗಿ ಅಂಬೇಡ್ಕರ್ ನೇತೃತ್ವದಲ್ಲಿ ರಾಷ್ಟçಮಟ್ಟದ ಚಳುವಳಿಯಾಗಿ ಬೆಳೆಯಿತು. ಮಾನವ ಹಕ್ಕುಗಳಿಗಾಗಿ ಜಗತ್ತಿನಾದ್ಯಂತ ನಡೆದಿರುವ ದೊಡ್ಡ ಹೋರಾಟಗಳ ಸಾಲಿಗೆ ಮಹಾಡ್ ಸತ್ಯಾಗ್ರಹ ಸೇರಿದೆ ಎಂದು ಹೇಳಿದ ಅವರು ಇವತ್ತಿಗೂ ದೇಶದಲ್ಲಿ ಕುಡಿಯುವ ನೀರಿನ ಹಕ್ಕಿಗಾಗಿ ಹೋರಾಡಬೇಕಾದ ಸಂದರ್ಭಗಳು ದಲಿತರ ಮುಂದೆ ಇವೆ. ದಲಿತ ಸಮುದಾಯದ ಬಾಲಕನೊಬ್ಬ ಶಾಲೆಯಲ್ಲಿ ಕುಡಿಯುವ ನೀರಿನ ಕೂಡ ಮುಟ್ಟಿದನೆಂಬ ಕಾರಣಕ್ಕೆ ಥಳಿತಕ್ಕೊಳಗಾಗಿ ಸಾಯುವ ಪರಿಸ್ಥಿತಿ ಇಂದಿಗೂ ಇದೆ ಮಹಾಡ್ ಸತ್ಯಾಗ್ರಹ ದಲಿತರ ವಿಮೋಚನೆಗೆ ದಾರಿದೀಪವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪ್ರಧಾನ ಸಂಚಾಲಕರಾದ ಬಾಲರಾಜ ಅರಬರ, ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗರಾಜ ಗೋಕಾವಿ, ಮುತ್ತಪ್ಪ ಭಜಂತ್ರಿ, ಪೂಜಾ ಬೇವೂರ, ಹೊನ್ನಪ್ಪ ಸಾಕಿ, ಪ್ರಕಾಶ ಕಮಡೊಳ್ಳಿ, ಕುಮಾರ ಕಮತರ, ಅರುಣ ಹಿರೇಮಠ, ಮರಿಯಪ್ಪ ನಡಗೇರಿ, ಸಂತೋಷ ಜಾಲಣ್ಣವರ, ರವಿಕುಮಾರ ನಿಡುಗುಂದಿ, ಮಾರುತಿ ಅಂಗಡಿ, ಗೋವಿಂದರಾಜ್ ಡಂಬರ, ರಸೂಲಸಾಬ ತಹಶೀಲ್ದಾರ, ಕೆಂಚಪ್ಪ ಮ್ಯಾಗೇರಿ, ಹನಮಂತ ಕಿರಟಗೇರಿ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Editor

Leave a comment