ಕರುನಾಡು ಘರ್ಜನೆ ಸುದ್ದಿ : ಬೆಟಗೇರಿ 25 : ಅಮನ್ ಆಂಗ್ಲ ಮಾಧ್ಯಮ ಶಾಲೆ ಬೆಟಗೇರಿಯಲ್ಲಿ ಶೈಕ್ಷಣಿಕ ವರ್ಷದ 2025-26 ನೇ ಸಾಲಿನ ಶಾಲಾ ಸಂಸತ್ತು ಮಂತ್ರಿ ಮಂಡಲದ ಚುನಾವಣೆಯನ್ನು ದಿನಾಂಕ 23/06/2025 ಸೋಮವಾರದಂದು ನಡೆಸಲಾಯಿತು .
ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ವಿದ್ಯಾರ್ಥಿಗಳಿಗೆ ದೇಶದ ಚುನಾವಣೆಯ ಮಾದರಿಯನ್ನು ಅನುಸರಿಸಿ ಮಂತ್ರಿ ಮಂಡಲವನ್ನು ರಚಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಗಳ ಅನುಸಾರ ವಿವಿಧ ಖಾತೆಗಳನ್ನು ಪಡೆದ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ .
ನಾಯಕತ್ವ ಗುಣವನ್ನು ಬೆಳೆಸಿಕೊಂಡು , ಪ್ರಜಾಪ್ರಭುತ್ವದ ಸೂಕ್ಷ್ಮತೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವರು . ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯರಾದ ಎಸ್ . ಎಚ್ . ಸವದತ್ತಿ ಅವರು ಮಾತನಾಡಿ ಚುನಾವಣೆಯಲ್ಲಿ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು .
ಗುರುವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು . ಚುನಾಯಿತ ಪ್ರತಿನಿಧಿಗಳಾದ ನೇಹಾ ರೋಣದ ( 10 ನೇ ತರಗತಿ ) ಶಾಲಾ ಸಂಸತ್ತಿನ ಮುಖ್ಯಸ್ಥಳಾಗಿ , ಖಾಲಿದ್ ಲಕ್ಕುಂಡಿ ( 9 ನೇ ತರಗತಿ ) ಶಿಕ್ಷಣ ಮಂತ್ರಿ , ಅರ್ಶ ಕುದರಿ ( 10 ನೇ ) ಶಿಕ್ಷಣ ಮಂತ್ರಿ , ನೂರಜಹಾನ ಶಾಲಗಾರ ( 10 ನೇ ) ಕ್ರೀಡಾ ಮಂತ್ರಿ , ಅಮಾನುಲ್ಲಾ ಪಾನಿಗಟ್ಟಿ ( 10 ನೇ ) ಕ್ರೀಡಾ ಮಂತ್ರಿ , ಮುಸ್‌ಫೀರಾ ನಧಾಫ ( 9 ನೇ ) ಆರೋಗ್ಯ ಮಂತ್ರಿ , ಶೀರಿನಬಾನು ಕಿನ್ನಾಳ ( 10 ನೇ ) ಆರೋಗ್ಯ ಮಂತ್ರಿ , ಅರ್ಶಿಯಾಸುಲ್ತಾನಾ ಮುಲ್ಲಾ ( 9 ನೇ ) ಸ್ವಚ್ಛತಾ ಮಂತ್ರಿ , ಸುಮಯ್ಯಾ ಅಣ್ಣಿಗೇರಿ ( 10 ನೇ ) ಸ್ವಚ್ಛತಾ ಮಂತ್ರಿ , ಅರ್ಪಾ ಡಂಬಳ ( 10 ನೇ ) ಸಾಂಸ್ಕೃತಿಕ ಮಂತ್ರಿ , ಐಮನ್ ಬೊದ್ಲೇಖಾನ ( 9 ನೇ ) ಸಾಂಸ್ಕೃತಿಕ ಮಂತ್ರಿ , ಸಾಹೀಲ್ ನಾಗರಕಟ್ಟಿ ( 10 ನೇ ) ಪ್ರವಾಸ ಮಂತ್ರಿ , ರುಕ್ಸಾರ ಚೋಪದಾರ ( 10 ನೇ ) ಪ್ರವಾಸ ಮಂತ್ರಿ , ಸಹನಾ ರಾಲದೊಡ್ಡಿ ಹಣಕಾಸು ಮಂತ್ರಿ , ರಿಹಾನ ಬಿಜಾಪುರ್ ( 10 ನೇ ) ಹಣಕಾಸು ಮಂತ್ರಿ , ಅತುಫಾಮರಿಯಮ್ ಶೇಖ ( 10 ನೇ ) ಪರೀಕ್ಷಾ ಮಂತ್ರಿ , ಕೃಪಾ ಕರಿಯಪ್ಪನ್ನವರ ( 9 ನೇ ) ಪರೀಕ್ಷಾ ಮಂತ್ರಿ , ಈ ರೀತಿ ಖಾತೆಗೆ ಆಯ್ಕೆಗೊಂಡು ಪ್ರಮಾಣ ವಚನಗೈದರು
ಚುನಾವಣೆಯಲ್ಲಿ ಆಯ್ಕೆಗೊಂಡ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸರ್ವಸದಸ್ಯರು ಶುಭ ಕೋರಿದರು.