Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಅಪರಾಧ

ಗದಗ : ಗದಗ ಆಕ್ರಮ ಪಡಿತರ ಅಕ್ಕಿ ಸಂಗ್ರಹ ಮತ್ತು ಮಾರಾಟ ತಡೆಗಟ್ಟುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಮಾನ್ಯ ತಾಲೂಕ ತಹಶೀಲ್ದಾರ ಗದಗ ರವರಿಗೆ ಮನವಿ.

ಕರುನಾಡು ಘರ್ಜನೆ ಸುದ್ದಿ : ಗದಗ 04 : ನಗರದ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಮತ್ತು ಮಾರಾಟ ತಡೆಗಟ್ಟುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಮಾನ್ಯ ತಾಲೂಕ ತಹಶೀಲ್ದಾರ ಗದಗ ರವರಿಗೆ ಮನವಿ ಸಲ್ಲಿಸಲಾಯಿತು. ಈ…

ಕರುನಾಡು ಘರ್ಜನೆ ಸುದ್ದಿ : ಗದಗ 04 : ನಗರದ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಮತ್ತು ಮಾರಾಟ ತಡೆಗಟ್ಟುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಮಾನ್ಯ ತಾಲೂಕ ತಹಶೀಲ್ದಾರ ಗದಗ ರವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಗದಗ ಅಧ್ಯಕ್ಷರಾದ ಇಸ್ಮಾಯಿಲ್ ರವರು ಮಾತನಾಡಿ , ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟ ಬಾರಿ ಜೋರಾಗಿದೆ ಬಡವರ ಹೊಟ್ಟೆ ತುಂಬಿಸುವ ಪಡಿತರ ಅಕ್ಕಿ ಯೋಜನೆ ಗದಗ ತಾಲೂಕಿನಲ್ಲಿ ಹಾಗೂ ಗದಗ – ಬೆಟಗೇರಿ ಅವಳಿ ನಗರದಲ್ಲಿ ರಾಜಾರೋಷವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.

ಗದಗ ತಾಲೂಕಿನ ಪ್ರತಿ ಗ್ರಾಮಗಳ ಹಾಗೂ ಗದಗ ಬೆಟಗೇರಿ ಅವಳಿ ನಗರದಲ್ಲಿ ಮನೆ , ಮನೆಗೆ ತೆರಳಿ ಕೆಳಹಂತದ ಅಕ್ರಮ ಅಕ್ಕಿ ದಂಧೆಕೋರರು ಪ್ರತಿ ಕೆ.ಜಿ.ಗೆ 12 ರೂಪಾಯಿಯಿಂದ 15 ರೂಪಾಯಿಗಳಂತೆ ಖರೀದಿ ಮಾಡಿ 20 ರೂಪಾಯಿಗೆ ಗದಗ ನಗರದಲ್ಲಿ ಇರುವ ದೊಡ್ಡ ದೊಡ್ಡ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆದಾರರಿಗೆ ಮಾರುತ್ತಾರೆ.

ಅವರು 12,14,16 ಚಕ್ರದ ವಾಹನಗಳಲ್ಲಿ ಆ ಅಕ್ರಮ ಪಡಿತರ ಅಕ್ಕಿ ತುಂಬಿದ ವಾಹನಗಳನ್ನು ಗದಗ ನಗರದಿಂದ ಹಾವೇರಿ ನಗರ , ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ , ಮಂಡ್ಯ , ಮಂಗಳೂರ ನಗರಗಳಿಗೆ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಹಾಗೂ ಗುಜರಾತ್ ರಾಜ್ಯಕ್ಕೆ ಅಕ್ರಮ ಪಡಿತರ ಅಕ್ಕಿ ಸಾಗಾಟವಾಗುತ್ತಿದೆ . ಅಕ್ರಮ ಅಕ್ಕಿ ಸಾಗಾಟ

ತಡೆಯಬೇಕಾದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಮತ್ತು ಅಕ್ರಮ ಪಡಿತರ ಅಕ್ಕಿ ಸಾಗಾಟಗಾರ ಜೊತೆಗೆ ಕೈ ಜೋಡಿಸಿದ್ದಾರೆ . ಈ ಎಲ್ಲಾ ವಿಷಯ ಮನಗಂಡು ದಯಾಳುಗಳಾದ ತಾವು ಈ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬಡವರ ಹೊಟ್ಟೆ ತುಂಬಿಸುವ ಯೋಜನೆಯ

ಉದ್ದೇಶ ಸಾಕಾರವಾಗಬೇಕು ಈ ಕೂಡಲೇ ಆಕ್ರಮ ಪಡಿತರ ಅಕ್ಕಿ ಸಂಗ್ರಹ , ಸಾಗಾಟ ತಡೆಗಟ್ಟಬೇಕು . ಇಲ್ಲವಾದರೆ ಗದಗ ತಾಲೂಕ ಹಾಗೂ ಗದಗ – ಬೆಟಗೇರಿ ಅವಳಿ ನಗರದಲ್ಲಿ ನಾವೇ ಹೋರಾಟ ಮಾಡಿ ತಡೆಗಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಖಾಜಾಸಾಬ ಕೊಪ್ಪಳ , ಅಸ್ಲಮ್ ಮಾಲದಾರ , ಸಾಧಿಕ ಚಿತವಾಡಗಿ , ಅನ್ವರ ಕೊಪ್ಪಳ , ಸಲೀಂ ಶಹಪೂರ , ಫಾರುಕ ದಂಡಿನ , ಸತೀಶ ರೋಣ , ಹೈದರಲಿ ಸವಣೂರ , ಮಹಮ್ಮದ ಅಲ್ಲಿ . ಶಬೀರ ದ್ಯಾಪೂರ , ಹಮಾಯತ್ , ಆಶೀಫ ಮಾಲದಾರ , ನೌವೀದ ಕಂಪ್ಲಿ , ರಸೂಲ ಬೇಪಾರಿ ಸೋಯಲ್ ಇನ್ನೂ ಮುಂತಾದ ಕರವೇ ಸ್ವಾಭಿಮಾನಿ ಕಾರ್ಯಕರ್ತರು ಉಪಸ್ಥಿತರಿದರು.

Editor

Leave a comment