ಕರುನಾಡು ಘರ್ಜನೆ ಸುದ್ದಿ: ಕೊಪ್ಪಳ ಜಿಲ್ಲಾ ಕುಕನೂರ್ ತಾಲೂಕು . ನಿಟ್ಟಾಲಿ ಗ್ರಾಮದ ನರ್ಸೇರಿಯಲ್ಲಿ ಪುನ ಹೈಬ್ರಿಡ್ ಸೀಡ್ಸ್ ಕಂಪನಿಯವರ ಕಡೆಯಿಂದ ರೈತ ಬೀಜ ಉತ್ಪಾದನೆ ಸಭೆಯ ಕಾರ್ಯಕ್ರಮವನ್ನು ವಿಜ್ರಂಬಣೆಯಿಂದ ಆಚರಿಸಲಾಯಿತು .ಈ ಬಾರಿ ರೈತರಿಗೆ ಮಳೆ ಇಲ್ಲದ ಕಾರಣ ಮಾಡಿದಂತಹ ಸೀಡ್ಸ್ ಕಂಪನಿಯ ಫ್ಲಾಟ್ ಗಳು ಇಳೆವರಿ ಬರದ ಇರುವ ಕಾರಣದಿಂದ. ರೈತರನ್ನು ಕರೆಸಿ ಲಾಭ ನಷ್ಟವನ್ನು ತಿಳಿದುಕೊಳ್ಳಲು ಸಭೆ ಏರ್ಪಡಿಸಲಾಯಿತು .
ಕಾರಣ ಏನೆಂದರೆ ಸೀಡ್ಸ್ ಮಾಡಿದಂತಹ ಎಲ್ಲಾ ರೈತರು ಈ ಸಾರಿ ಇಳವರಿ ಬಂದಿಲ್ಲ ಸರ್ ಎಂದು ಬೇಸತ್ತು ಕೇಳಿದಾಗ. ಅವರ ಕಷ್ಟವನ್ನು ಕೇಳಿದ ಸೀಡ್ಸ್ ಮುಖ್ಯಸ್ಥರು. ಇದ್ದಕ್ಕಿದ್ದಂತೆ ಕಂಪನಿಯವರು ಹೇಳಿದ ರೇಟಿಗಿಂತ ಈ ಸಾರಿ ಜಾಸ್ತಿ ಕೊಡುತ್ತೀವಿ ಯಾಕಂದರೆ ರೈತರಿಗೆ ಈ ಸರಿ ಲಾಭವಿಲ್ಲ ಎಂದು ತಾವು ತಿಳಿದುಕೊಂಡು ರೇಟ್ ಜಾಸ್ತಿ ಮಾಡಿದರು. ಬಂದಂತಹ ಎಲ್ಲಾ ರೈತರಿಗೂ ಸನ್ಮಾನ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು . ರೈತರ ಮುಖದಲ್ಲಿ ಖುಷಿ ತುಂಬಿಸಿದ ಕಂಪನಿಯವರಿಗೆ ಹಾಗೂ ಮಾಲಕರು ದೇವೇಂದ್ರಗೌಡ ಪಾಟೀಲ ಸೇಲ್ಸ್ ಮ್ಯಾನೇಜರ್ ಪರಮೇಶ್ವರ್ ಹಾಗೂ ಸೀಡ್ಸ್ ಮ್ಯಾನೇಜರ್ ಲೋಹಿತ ರಾಠೋಡ್ ಹಾಗೂ ವೇದಿಕೆ ಮೇಲೆ ಇದ್ದಂತ ಎಲ್ಲಾ ಗಣ್ಯ ವ್ಯಕ್ತಿಗಳಿಗೂ. ಎಲ್ಲಾ ರೈತರು ನಗುನಗುತ್ತಾ ಖುಷಿಯಿಂದ ಧನ್ಯವಾದಗಳು ತಿಳಿಸಿದರು.
ಕುಕನೂರು ತಾಲ್ಲೂಕು ವರದಿಗಾರ : ಭೀಮೇಶ್ S ಮಂಡಲಗೇರಿ