ಕರುನಾಡು ಘರ್ಜನೆ ಸುದ್ದಿ: ಗದಗ ೨೦: ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್‌ರವರ ೧೧೭ನೇ ಜಯಂತಿ ಅಂಗವಾಗಿ ಗದಗ ನಗರದ ಪ್ರಮುಖ ಸರ್ಕಲ್‌ವೊಂದರಲ್ಲಿ ಡಾ. ಬಾಬು ಜಗಜೀವನರಾಮ್‌ರವರ ಪುತ್ಥಳಿ ಸ್ಥಾಪಿಸಿ ನಾಮಕರಣ ಮಾಡುವಂತೆ ಡಾ. ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾ. ಜಗಜೀವನರಾಮ ಸಮಾನತೆ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಸಮಿತಿಯ ಜಿಲ್ಲಾ ಸಂಚಾಲಕರಾದ ಯುವರಾಜ ಬಳ್ಳಾರಿ ಮಾತನಾಡಿದ ಭಾರತದ ದೇಶದ ಉಪಪ್ರಧಾನಿಯಾದ ದಲಿತರ ಧ್ವನಿಯಾಗಿ ಭಾರತ ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರ ಎಂಬ ಹೆಸರನ್ನು ಡಾ. ಬಾಬು ಜಗಜೀವನರಾಮರವರು ಗಳಿಸಿದವರಾಗಿದ್ದಾರೆ. ಇವರು ಭಾರತದ ದೇಶದ ಸರ್ವ ಧರ್ಮ ಮತ್ತು ಎಲ್ಲ ಜಾತಿ ಜನಾಂಗದವರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಇವರ ಹೆಸರಿನಲ್ಲಿ ಸರ್ಕಾರ ಸಮುದಾಯ ಭವನ ನಿರ್ಮಾಣ ಮಾಡಿದೆ. ಈಗ ಮನವಿ ಏನೆಂದರೆ ಡಾ. ಬಾಬು ಜಗಜೀವನರಾಮ ಇವರ ಜಯಂತಿ ಮಾಡುವಾಗ ಅವರ ಭಾವಚಿತ್ರವನ್ನು ಇಟ್ಟು ಅವರ ಜಯಂತಿ ಆಚರಿಸುತ್ತಾ ಬಂದಿರುತ್ತೇವೆ.
ಕಾರಣ ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಗದಗ-ಬೆಟಗೇರಿ ನಗರದ ಪ್ರಮುಖ ಸರ್ಕಲ್‌ವೊಂದರಲ್ಲಿ ಪುತ್ಥಳಿ ನಿರ್ಮಾಣ ಮಾಡಿ ಡಾ. ಬಾಬು ಜಗಜೀವನರಾಮ ಸರ್ಕಲ್ ಎಂಬ ಹೆಸರನ್ನು ನಾಮಕರಣ ಮಾಡಬೇಕೆಂದು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಗಣೇಶ ವಾಯ್. ಹುಬ್ಬಳ್ಳಿ ಉಪಸ್ಥಿತರಿದ್ದರು.