ಕರುನಾಡು ಘರ್ಜನೆ ಸುದ್ದಿ : ಗದಗ ಜುಲೈ 20: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಗದಗ ಜಿಲ್ಲೆಯಲ್ಲಿ ಜುಲೈ 22 ರ ಜಿಲ್ಲಾ ಪ್ರವಾಸದ ವಿವರ.
ಜುಲೈ 22 ರಂದು ಮದ್ಯಾಹ್ನ 11 ಗಂಟೆಗೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿಗೆ ಆಗಮಿಸಿ ಶಿರಹಟ್ಟಿಯ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ತಾಲೂಕ ಆಸ್ಪತ್ರೆಯ ಶಿಲಾನ್ಯಾಸ, ಬಾಲೆಹೊಸೂರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ವಸತಿ ನಿಲಯ ಉದ್ಘಾಟನೆ ಹಾಗೂ ಮುಂಡರಗಿ ಬಿ ಪಿ ಎಚ್ ಪ್ರಯೋಗಾಲಯ, ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡುವರು.
ನಂತರ ಧಾರವಾಡಕ್ಕೆ ಪ್ರಯಾಣ ಬೆಳೆಸುವರೆಂದು ಸಚಿವರ ಕಾರ್ಯಲಯ ಪ್ರಕಟಣೆ ತಿಳಿಸಿದೆ.