ಕರುನಾಡು ಘರ್ಜನೆ ಸುದ್ದಿ ಗದಗ ಬೆಳಧಡಿ : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ಗದಗ ತಾಲೂಕಿನ ಬೆಳಧಡಿ ಗ್ರಾಮದ ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ದಾಖಲಾತಿಯಲ್ಲಿ ದಾಖಲೆ ಬರೆಯುತ್ತಿದೆ. ಹೌದು, ಬೆಳಧಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಮಾರ್ಟ್ ಕ್ಲಾಸ್ ನಲ್ಲಿ ಆಂಗ್ಲ ಮಾಧ್ಯಮ ಶಾಲೆ ಈಗ ರಾಜ್ಯದ ಗಮನ ಸೆಳೆಯುತ್ತಿದೆ.
ಬೆಳಧಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ಶೇ.95 ರಷ್ಟು ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಇಲ್ಲಿ ಓದಿದವರು ವೈದ್ಯರು, ಇಂಜಿನಿಯರ್, ಸರ್ಕಾರಿ ಉದ್ಯೋಗಿಗಳಾಗಿದ್ದಾರೆ. ಶಾಲೆಯಲ್ಲಿ ಸದ್ಯ 221 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎಲ್ಕೆಜಿಯಿಂದ ಏಳನೇ ತರಗತಿಯ ತನಕ ಇದೆ . ಮುಂದಿನ ವರ್ಷ ದಾಖಲಾತಿ 500 ದಾಟುವ ನೀರಿಕ್ಷೆ ಇದೆ.
ಬೆಳಧಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲಿ 7 ಶಿಕ್ಷಕರು ಅತಿಥಿ ಶಿಕ್ಷಕರು ಒಟ್ಟು 9 ಶಿಕ್ಷಕಕರು. ಇವರು ಕಳೆದ ಐದಾರು ವರ್ಷಗಳಿಂದ ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸರ್ಕಾರದಿಂದ ಮಂಜೂರಾದ ಶಾಲೆಗೆ ಸ್ಮಾರ್ಟ್ ಸಿಟಿ ಸ್ಮಾರ್ಟ್ ಕ್ಲಾಸ್ಗಳು ಇವೆ. ಇಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ಲೈಬ್ರರಿ ಹೊಂದಿದೆ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರತಿ ದಿನ ಮಧ್ಯಾಹ್ನ ಊಟ, ಹಾಲು, ಬಾಳೆಹಣ್ಣು ನೀಡಲಾಗುತ್ತಿದೆ.ಎಸ್ಡಿಎಂಸಿ ಅಧ್ಯಕ್ಷರ ವಿರೇಶ ಎಂ.ಕಲ್ಮಠ ಇವರ ಒಂದು ಸೇವೆ ಅತ್ಯುತ್ತಮವಾಗಿದೆ ಶಾಲೆ ಮೇಲ್ವಿಚಾರಣೆ: ಶಾಲಾ ಅಭಿವೃದ್ಧಿ ಸಮಿತಿಯು ಶಾಲೆಯ ಉಸ್ತುವಾರಿ ನೋಡುಕೊಳ್ಳುತ್ತಿದೆ. ಈ ಸಮಿತಿಗೆ ಪೋಷಕರೇ ಸದಸ್ಯರಾದ ಕಾರಣಕ್ಕೆ ಶಾಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶಾಲೆಗೆ ಏನೇ ಸಮಸ್ಯೆ ಎದುರಾದರೂ ಸಮಿತಿಯವರು ತಕ್ಷಣ ಬಗೆಹರಿಸುತ್ತಾರೆ. ಶಾಲಾ ಅಭಿವೃದ್ಧಿ ಸಮಿತಿಯವರೇ ಈ ಮೂಲಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.
SDMC ಅಧ್ಯಕ್ಷರು ವಿರೇಶ ಎಂ.ಕಲ್ಮಠ ಮಾತನಾಡಿ ಇಲ್ಲಿ ಶಿಕ್ಷಣ ತುಂಬಾ ಚನ್ನಾಗಿದೆ ಎಂದು ತಿಳಿದು ನನ್ನ ಮೂರು ಮಕ್ಕಳನ್ನು ಈ ಶಾಲೆಗೆ ದಾಖಲಿಸಿದ್ದೇನೆ. ಮಗಳನ್ನು ಐದನೇ ತರಗತಿಗೆ, ಮೂರು ನೇ ತರಗತಿ ಎಲ್ಕೆಜಿ ಗೆ ದಾಖಲಿಸಿದ್ದೇನೆ. ಇಲ್ಲಿ ಶಿಕ್ಷಣ ಚೆನ್ನಾಗಿದೆ ಎಂದು ಹೇಳುತ್ತಿದ್ದರು. ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಬಗ್ಗೆ ಕಳವಳ ಇದೆ ಎಂದು ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದರು.
ಪೋಷಕರಾದ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಬಸವರಾಜ ಪೂಜಾರ ಮಾತನಾಡಿ, ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವಷ್ಟು ಆರ್ಥಿಕವಾಗಿ ಶಕ್ತರಲ್ಲ. ಇದೇ ಶಾಲೆಯಲ್ಲಿ ನಮ್ಮ ಊರಿನ ಮಕ್ಕಳು ಓದಿ ಈಗ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.ಇದರಿಂದ ನಾನು ನನ್ನ ಮಕ್ಕಳನ್ನು ಇಲ್ಲೇ ಓದಿಸುತ್ತಿದ್ದೇನೆ. ನನ್ನ ಮಗು ಈಗ ಇಲ್ಲಿ ಎಲ್ಕೆಜಿ ಓದುತ್ತಿದೆ. ಈ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಇರುವುದಕ್ಕೆ ತುಂಬಾ ಸಂತೋಷವಾಗಿದೆ. ಇದರಿಂದ ನನ್ನ ಮಗುವನ್ನು ಇಲ್ಲಿಗೆ ಸೇರಿಸಿದ್ದೇನೆ. ನನ್ನಂತೆ ಬಡವರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿದ್ದಾರೆ. ನನ್ನ ಮಗಳು ಈಗ ಮೂರನೇ ತರಗತಿ, ಅವಳು ಇಂಗ್ಲಿಷ್ ವಿಷಯವನ್ನು ಚೆನ್ನಾಗಿ ಓದುತ್ತಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.

ಹೆಚ್ಚುವರಿ ಕೊಠಡಿ ಅವಶ್ಯಕತೆ ಇದೆ:ಶಾಲೆಯ ಮುಖ್ಯೋಪಾಧ್ಯಾಯರಾದ ಭೋಜರಾಜ .ಬಿ.ಹಡಪದ ಮಾತನಾಡಿ ನಮ್ಮಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಇದೆ. ಎಲ್ಕೆಜಿ, ಯುಕೆಜಿ ಮಕ್ಕಳ 2025/2026 ದಾಖಲಾತಿ ಆದರೂ ಸಹ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಬರುತ್ತಿದ್ದಾರೆ. ಶಾಲೆಯಲ್ಲಿ 9 ಜನ ಶಿಕ್ಷಕರಿದ್ದಾರೆ. ಇಲ್ಲಿ ಪಿಇ ಟೀಚರ್ ಹಾಗೂ ಮುಖ್ಯ ಶಿಕ್ಷಕರು ಇದ್ದಾರೆ. ಇಲ್ಲಿನ ಎಸ್ಡಿಎಂಸಿ ಸಮಿತಿ ಚೆನ್ನಾಗಿದೆ. ಮಕ್ಕಳು ಜಾಸ್ತಿ ಆಗಿರುವುದರಿಂದ ಹೆಚ್ಚುವರಿ ಕೊಠಡಿಯ ಅವಶ್ಯಕತೆ ಇದೆ ಎಂದರು.
ಶಿಕ್ಷಕ ಪಿ ಸರ್ ಅಗಸಿಮನಿ ಅವರು ಮಾತನಾಡಿ, ಇಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅನೇಕರು ನಮ್ಮ ಶಾಲೆಯ ಶಿಕ್ಷಕರು, ಉದ್ಯಮಿಗಳಾಗಿದ್ದಾರೆ. ಇದು ನಮ್ಮ ಶಾಲೆಗೆ ಹೆಮ್ಮೆಯಾಗಿದೆ. ಎಂದು ಹೇಳಿದರು.
ನಲಿ ಕಲಿ ಶಾಲೆಯ ಕೊಠಡಿ ಕಣ್ಣು ತುಂಬುವಂತಿದ್ದು ಇದೆ: ಶಾಲೆಯಲ್ಲಿ ಟೀಚರ ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ ಈ ಶಾಲೆಯಲ್ಲಿ ಓದುವ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗ್ತಿದೆ ತರಗತಿಯ ವಿದ್ಯಾರ್ಥಿಗಳು ಮಾತನಾಡಿ, ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಇಲ್ಲಿನ ಶಿಕ್ಷಕರ ನಮ್ಮ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಎಲ್ಲರೂ ಚೆನ್ನಾಗಿ ಪಾಠ ಮಾಡುತ್ತಾರೆ. ಮಧ್ಯಾಹ್ನದ ಬಿಸಿ ಊಟ ಚೆನ್ನಾಗಿರುತ್ತದೆ. ಜೊತೆಗೆ ಬಾಳೆಹಣ್ಣು, ಮೊಟ್ಟೆ ಕೊಡುತ್ತಾರೆ. ಈ ಶಾಲೆಯಲ್ಲಿ ಓದುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬ ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನಮ್ಮ ಶಾಲೆಯಲ್ಲಿ ಪಾಠ ಚೆನ್ನಾಗಿ ಮಾಡುತ್ತಾರೆ. ನಮಗೆ ಏನೇ ಸಂದೇಹವಿದ್ದರೂ ಪರಿಹರಿಸುತ್ತಾರೆ. ನಾನು ದೊಡ್ಡವನಾದ ಮೇಲೆ ಐಎಎಸ್ ಅಧಿಕಾರಿ ಆಗಬೇಕೆಂದುಕೊಂಡಿದ್ದೇನೆ. ಮಧ್ಯಾಹ್ನದ ಊಟ ಚೆನ್ನಾಗಿದ್ದು, ಬಾಳೆಹಣ್ಣು, ಮೊಟ್ಟೆ ಕೊಡುತ್ತಾರೆ ಎಂದರು.