ಕರುನಾಡು ಘರ್ಜನೆ ಸುದ್ದಿ ಗದಗ (ಕಾರಾಗೃಹ) ಸಬ್ ಜೈಲಿನಲ್ಲಿ ರಕ್ಷಾ ಬಂಧನ ಅಧ್ಯಕ್ಷನಿಯಾದ ಶ್ರೀಮತಿ ಮಂಜುಳಾ ಕಡಕೋಳ ನೇತ್ರತ್ವದಲ್ಲಿ ಸಬ್ ಜೈಲಿನಲ್ಲಿ ರಕ್ಷಾ ಬಂಧನ ಅಥವಾ ರಾಖಿ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧದ ಅಭಿವ್ಯಕ್ತಿಯಿಂದಾಗಿ ಅಮೂಲ್ಯವಾದ ಒಂದು ಹಬ್ಬವೆಂದು ಗುರುತಿಸಿಕೊಂಡಿದೆ. ಈ ಶುಭ ದಿನದಂದು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.
ಅದರಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಗದಗ ಜಿಲ್ಲಾ ಅಧ್ಯಕ್ಷನಿಯಾದ ಶ್ರೀಮತಿ ಮಂಜುಳಾ ಕಡಕೋಳ ಖೈದಿಗಳಿಗೆ ಬರುವ ದಿನಗಳಲ್ಲಿ ತಾವುಗಳು ಹೊಸ ಬದುಕಿನೊಂದಿಗೆ ತಮಗೆ ಜೀವನ ಆಗಿರಲಿ ದಿನ ನಿತ್ಯದ ಜೀವನದಲ್ಲಿ ಏನಾದರೂ ಘಟನೆ ಇದ್ದರೆ ಅದನ್ನು ಮರಿತು ಜೈಲಿಂದ ಹೊರ ಬಂದ ಮೇಲೆ ಜೀವನ ರೂಪಿಸಿಕೊಳ್ಳಿ ಅಂತ ಕಿವಿ ಮಾತು ಹೇಳಿದರು.ಖೈದಿಗಳೊಂದಿಗೆ ರಕ್ಷಾ ಬಂಧನ ಆಚರಿಸಿದರು.
ಈ ಸಂದರ್ಭದಲ್ಲಿ ಗದಗ ಕಾರಾಗೃಹ ಅಧೀಕ್ಷಕರು ಈರಣ್ಣ ರಂಗಾಪೂರ, ಜೈಲರ್ ಆದ ಸೋಮಲಿಂಗಪ್ಪ ಕಾಳೆ, ಶ್ರೀ ಸಿರಾಜ್ ಲಕ್ಕುಂಡಿ, ಶೌಕತ ಕಾತರಕಿ ,ಶ್ರೀಮತಿ ನಂದಿನಿ ಎಸ್. ಹಾದಿಮನಿ , ರೇಣುಕಾ ಕರಕಟ್ಟಿ, ಶ್ರೀಮತಿ ವಿಜಯಲಕ್ಷ್ಮಿ ಆಸೂಟಿ ,ಪ್ರದೀಪ ವಜ್ರರಾಂಗಿ, ಸೋಮಶೇಖರ ,ಆನಂದ ಚಲವಾದಿ,ಲಕ್ಷ್ಮೀ ಪೂಜಾರ,ಗೌರವ ಕಟ್ಟಿಮನಿ,ಶಿವಲೀಲಾ ತಳವಾರ, ಲೀಲಾವತಿ ತಳವಾರ ಹಾಗೂ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಶೈಲಪ್ಪನವರು ಮಾಡಿದರು.