ಕರುನಾಡು ಘರ್ಜನೆ ಸುದ್ದಿ ಗದಗ:ಆ 13 ಗದಗ ನಗರದ ಗಾಂಧಿ ಸರ್ಕಲ್ ನಲ್ಲಿ ಆಶಾ ಕಾರ್ಯಕರ್ತೆರ ಅಹೋರಾತ್ರಿ ಧರಣಿ ಸತ್ಯಾಗ್ರಹ ಮೊದಲ ದಿನ ಪ್ರತಿಭಟನೆ ಕಳೆದ ಜನವರಿ ತಿಂಗಳಲ್ಲಿ ರಾಜ್ಯದ ಸುಮಾರು 42,000 ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ಷಲ್ಲಿ ಸತತ 4 ದಿನಗಳ ಹೋರಾಟ ಕೈಗೊಂಡಾಗ ಮಾನ್ಯ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ‘ಪ್ರತಿಯೊಬ್ಬರಿಗೂ ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಮತ್ತು ರಾಜ್ಯದ ಗೌರವಧನಗಳನ್ನು ಕ್ರೋಢೀಕರಿಸಿ ಕನಿಷ್ಠ ರೂ.10,000 ಗೌರವಧನ ಗ್ಯಾರಂಟಿ ಮಾಡುತ್ತೇವೆ ಮತ್ತು ಬಜೆಟ್ನಲ್ಲಿ ಸಹ ಹೆಚ್ಚಳ ಘೋಷಿಸುತ್ತೇವೆ’ ಎಂದು ಮಾತು ಕೊಟ್ಟ ಮೇಲೆ ಬೇಡಿಕೆ ಈಡೇರಿದ ಸಂತೋಷಕ್ಕೆ ಆಶಾ ಕಾರ್ಯಕರ್ತೆಯರ ಜೊತೆಗೆ ಇಡೀ ನಾಡೇ ಸಂಭ್ರಮಿಸಿತ್ತು. ಈಗ 7 ತಿಂಗಳು ಕಳೆದರೂ ಸರ್ಕಾರ ಕೊಟ್ಟ ಮಾತಿನಂತೆ ಆದೇಶ ಮಾಡುವುದು ಒತ್ತಟ್ಟಿಗಿರಲಿ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವಂತೆ ಜನರ ಪ್ರಾಣ ಉಳಿಸುವ ಈ ನತದೃಷ್ಟರನ್ನೇ ಕೆಲಸದಿಂದ ತೆಗೆದುಹಾಕಿ ಬೀದಿ ಪಾಲು ಮಾಡಲು ಹೊರಟಿರುವುದು ವಿಶ್ವಾಸ ದ್ರೋಹದ ಪರಾಕಾಷ್ಠೆಯಾಗಿದೆ
ಈ ಸಂದರ್ಭದಲ್ಲಿ ರಾಜ ಕಾರ್ಯದರ್ಶಿಗಳಾದ ಮಾತನಾಡಿ ಡಿ ನಾಗಲಕ್ಷ್ಮಿ ಮೇಡಂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಸಿದ್ದರಾಮಯ್ಯ ಅವರ ಸರ್ಕಾರ ಮಾತು ಕೊಟ್ಟ ಮರೆತ ಸರ್ಕಾರ ಎಂದು ಹೇಳಿದರು ನಾವು ಕಳಿದ ವರ್ಷಗಳಿಂದ ಹೋರಾಟ ಮಾಡ್ತಾ ಬಂದಿದ್ದೇವೆ ಆದರೆ ಸಿದ್ದರಾಮಯ್ಯ ನವರು ಸುಳ್ಳು ಆಶ್ವಾಸನೆ ಕೂಡಾ ತಾ ಬರುತ್ತಾ ಇದ್ದಾರೆ ಈ ಸಲ್ ನಮ್ಮ ಬೇಡಿಕೆ ಈಡೆಸುವರೆಗೂ ನಮ್ಮ ಹೋರಾಟ ಕೈ ಬಿಡುವುದಿಲ್ಲ . ಎಲ್ಲಾ ಸಾಮಾಜಿಕ ಕಳಕಳಿಯುಳ್ಳ ಜನತೆ, ಆಶಾ ಕಾರ್ಯಕರ್ತೆಯರ ಈ ನ್ಯಾಯೋಚಿತ ಹೋರಾಟವನ್ನು ಎಂದಿನಂತೆಯೇ ಬೆಂಬಲಿಸಿ, ರಾಜ್ಯ ಸರ್ಕಾರವು ಆಶಾಗಳ ಬೇಡಿಕೆಗಳನ್ನು ಈ ಕೂಡಲೇ ಬಗೆಹರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಶಾಗಳ ಸಂಘವು ಮನವಿ ಮಾಡುತ್ತದೆ. ಹಾಗೆಯೇ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಎಂದಿನಂತೆಯೇ ತಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು, ಹೋರಾಟದ ಯಶಸ್ಸಿಗೆ ಮುಂದಾಗಬೇಕೆಂದು ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಈ ಮೂಲಕ ಕರೆ ನೀಡುತ್ತದೆ.ಅಂತ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಳೆದ 17 ವರ್ಷ ಹಗಲಿರುಳು ಸೇವೆಗೈದ ಆಶಾ ಕಾರ್ಯಕರ್ತೆಯರ ಪರಿಶ್ರಮದಿಂದ, ತಾಯಿ ಮರಣ ಶೇ 83 ರಷ್ಟು, ಶಿಶು ಮರಣ ಶೇ.69 ಸಾಂಕ್ರಾಮಿಕ ಸಾವುಗಳು ಸೇರಿದಂತೆ ಇತರ ಸಾವಿನ ಪ್ರಮಾಣ ಶೇ.75 ತಗ್ಗಿರುವುದನ್ನು ಸ್ವತಃ ಸರ್ಕಾರವೇ ದೃಢಪಡಿಸಿದೆ. ಅಷ್ಟೇ ಅಲ್ಲದೇ ಕೊರೋನ ಕಾಲದಲ್ಲಿ ಆಶಾಗಳು ತಮ್ಮ ಜೀವದ ಹಂಗು ತೊರೆದು ಕೋಟ್ಯಂತರ ಜನರ ಪ್ರಾಣ ಉಳಿಸಿದ್ದಾರೆ. ಇಂತಹ ನಿಸ್ವಾರ್ಥ ಸೇವೆಗೈಯ್ಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠದಲ್ಲೇ ಕನಿಷ್ಠ 10 ಸಾವಿರ ಗೌರವಧನವನ್ನು ನೀಡಲು ಮೀನಾಮೇಷ ಎಣಿಸುತ್ತಿರುವುದು ಅತ್ಯಂತ ಖಂಡನಾರ್ಹವಾಗಿದೆ.
ಈ ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಪಿಎಫ್, ಇಎಸ್ಐ, ಗ್ರಾಚುಟಿ ಇತ್ಯಾದಿ ಸಾಮಾಜಿಕ ಭದ್ರತೆಗಳನ್ನು ಖಚಿತಗೊಳಿಸಬೇಕೆಂದು ILO ಹಾಗೂ ಇತರ ಸಾಂವಿಧಾನಿಕ ಸಂಸ್ಥೆಗಳು ಶಿಫಾರಸ್ಸು ಮಾಡಿರುವುದನ್ನು ಸರ್ಕಾರಗಳು ಅಲಕ್ಷಿಸುತ್ತಾ ಬಂದಿವೆ. ಇಂತಹ ಸಂದರ್ಭದಲ್ಲಿ ತಾಯಿ ಮಕ್ಕಳ ಆರೈಕೆ, ಸಾಂಕ್ರಾಮಿಕಗಳ ಬಗ್ಗೆ ಜಾಗೃತಿ, ಪರಿಸರ ನೈರ್ಮಲ್ಯ ಹತ್ತಾರು ಸರ್ವೆ ಕೆಲಸ ಕಾರ್ಯಗಳನ್ನು ಹಗಲು ರಾತ್ರಿ ನಿರ್ವಹಿಸುವ, ಬಹುತೇಕ ತಳ ಸಮುದಾಯದ ಒಂಟಿ ಮಹಿಳೆಯರಾದ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆ ‘ಜಾಗತಿಕ ಆರೋಗ್ಯ ನಾಯಕರು’ ಎಂಬ ಬಿರುದು ನೀಡಿದೆ. ಸರ್ಕಾರಗಳು ಅವರನ್ನು ‘ಫ್ರಂಟ್ ಲೈನ್ ವಾರಿಯರ್ಸ್’ ಎಂದು ಶ್ಲಾಘಿಸಿವೆ. ಆದರೆ ಇವರು ಗೌರವ ಘನತೆಯ ಬದುಕು ನಿರ್ವಹಿಸಲು ಬೇಕಾಗುವ ವೇತನದಿಂದ ಮಾತ್ರ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಇವರು ಮಾಡಿದ ಕೆಲಸಗಳು ಆನೈನ್ ಪೋರ್ಟಲ್ ನಲ್ಲಿ ಎಂಟ್ರಿ ಆಗದೇ ಪ್ರತಿ ವರ್ಷ ಹತ್ತಾರು ಸಾವಿರಾರು ರೂಪಾಯಿಗಳು ನಷ್ಟವಾಗುತ್ತಿವೆ. ಅಂತೆಯೇ ಆರ್.ಸಿ.ಹೆಚ್ ಪೋರ್ಟಲ್ ರದ್ದುಗೊಳಿಸಿ, ಬಿಡಿಬಿಡಿಯಾಗಿ ಕೊಡುವ ಬದಲು ಎಲ್ಲಾ ಪ್ರೋತ್ಸಾಹಧನಗಳನ್ನು ಸೇರಿಸಿ, ಒಟ್ಟಾಗಿ ನೀಡಬೇಕೆಂದು ಕೇಳುವುದರಲ್ಲಿ ನ್ಯಾಯವಿಲ್ಲವೇ? ಸರ್ಕಾರದ ವಕ್ತಾರರು ಕಾರ್ಯನಿಷ್ಠ ದಕ್ಷ ಅಧಿಕಾರಿಗಳ ಬಗ್ಗೆ ಗುಣಗಾನ ಮಾಡುತ್ತಾರೆ ಆದರೆ ಈ ದುಡಿಯುವ ಮಹಿಳೆಯರ ಪುಡಿಗಾಸು ಸಂಪಾದನೆಯೂ ಕೈಗೆಟುಕದಂತಾದಾಗ ಅದನ್ನು ಸರಿಪಡಿಸುವ ಸಶಕ್ತ ಅಧಿಕಾರಿಗಳ ಬರುವಿಕೆಗಾಗಿ ಎಷ್ಟು ಕಾಯಬೇಕೋ?
ಆಶಾಗಳು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕಳೆದ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಈಬೇಡಿಕೆಗಳಿಗೆ ಸ್ಪಂದಿಸುವ ಬದಲು ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರ ಮೇಲೆ ದಮನಕಾರಿ ತಂತ್ರಗಳನ್ನು ಅನುಸರಿಸುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಆಶಾಗಳ ಸಂಖ್ಯೆಯನ್ನು ತರ್ಕಬದ್ಧಗೊಳಿಸುವ ಹಾಗೂ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡುವ ಹೆಸರಲ್ಲಿ ಆಶಾಗಳನ್ನು ಕೆಲಸದಿಂದ ತೆಗೆದುಹಾಕುವ ಹುನ್ನಾರ ಮಾಡುತ್ತಿದೆ. ಆಶಾಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲು ಹೊರಟಿದೆ. ಇದು ಶೋಷಿತರಲ್ಲೇ ಶೋಷಿತರಾದ ಈ ದುಡಿಯುವ ಮಹಿಳೆಯರ ಆತ್ಮಗೌರವದ ಬೆನ್ನೆಲುಬನ್ನು ಮುರಿಯುವ ಸಂಚಿನ ಕ್ರಮವಲ್ಲದೆ ಮತ್ತೇನು?
ಭಾರತ ಸರ್ಕಾರದ 2014 ರ ಮಾರ್ಗಸೂಚಿಯಂತೆ ಒಂದು ಗ್ರಾಮಕ್ಕೆ 1000 ಜನಸಂಖ್ಯೆಗೆ ಅದೇ ಗ್ರಾಮದ ನಿವಾಸಿಯಾಗಿದ್ದು 8ನೇ ತರಗತಿ ಪೂರೈಸಿದ ಅಥವಾ ಅಷ್ಟು ಓದಿದವರು ಸಿಗದಿದ್ದರೆ ಸೇವೆ ಮಾಡಲು ಇಚ್ಚಿಸಲು ಮುಂದೆ ಬಂದ ಒಬ್ಬರನ್ನು ಆಶಾ ಕಾರ್ಯಕರ್ತೆಯನ್ನಾಗಿ ನೇಮಕ ಮಾಡಿಕೊಳ್ಳಬೇಕಷ್ಟೆ, 1000 ಜನಸಂಖ್ಯೆ ಮೇಲ್ಪಟ್ಟರೆ ಆಗ ಮತ್ತೊಬ್ಬ ಆಶಾಳನ್ನು ಆಯ್ಕೆ ಮಾಡಬೇಕು ಎಂದಿದೆ. ಈಗ ತರ್ಕಬದ್ದಗೊಳಿಸುವ ಹೆಸರಿನಲ್ಲಿ ಜನಸಂಖ್ಯೆ ಮಿತಿಯನ್ನು ಹೆಚ್ಚಿಸಿ, 1000 ಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಆಶಾ ಕಾರ್ಯಕರ್ತೆಗೆ ಯಾವುದೇ ರಕ್ಷಣೆ ಇಲ್ಲದೆ ಹತ್ತಾರು ಕಿಮೀ ದೂರದ ಬೇರೊಂದು ಗ್ರಾಮ/ಪ್ರದೇಶಕ್ಕೆ ಕಳೆಸುತ್ತಿರುವುದು, ಕೇಂದ್ರದ ನೇಮಕಾತಿ ಮಾರ್ಗಸೂಚಿಗೆ ವಿರುದ್ಧವಾಗಿದೆ. ಸರ್ಕಾರ ಅಥವಾ ಇಲಾಖೆ ತಾನೇ ರೂಪಿಸಿದ ಮಾರ್ಗಸೂಚಿಗೆ ತಕ್ಕಂತೆ ನಡೆಯದೆ ಆಶಾಗಳನ್ನು ಬಲಿಪಶುಗಳನ್ನಾಗಿ ಮಾಡುವುದನ್ನು ಹುನ್ನಾರವೆಂದಲ್ಲದೆ ಏನೆಂದು ಕರೆಯಬೇಕು?
ಇನ್ನೊಂದೆಡೆ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಆನ್ಲೈನ್ ಪೋರ್ಟಲ್ ಬಳಸಲಾಗುತ್ತದೆ. ಆದರೆ ಆಶಾ ಚಟುವಟಿಕೆಗಳು ಈ ಪೋರ್ಟಲ್ನಲ್ಲಿ ದಾಖಲಾಗುತ್ತಿಲ್ಲ ಎಂದಾಗ್ಯೂ ಈಗ ಅದೇ ದೋಷಪೂರಿತ ಅಥವಾ ದಾಖಲು ಮಾಡಲಾಗದ ಪೋರ್ಟಲ್ನಿಂದ ಆಶಾ ಕಾರ್ಯಕ್ಷಮತೆಯನ್ನು ಹೇಗೆ ಅಳೆಯಲು ಸಾಧ್ಯ?
ಅಂತೆಯೇ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಮಾಸಿಕ ಕನಿಷ್ಠ ರೂ.10,000 ಗೌರವಧನ ಖಚಿತಪಡಿಸುವ ಜೊತೆಗೆ ಕೆಲಸ ಮಾಡಿದಷ್ಟು ಪ್ರೋತ್ಸಾಹಧನ ನೀಡುವ ಆದೇಶ ಹೊರಡಿಸಬೇಕು. ಭರವಸೆ ನೀಡಿದಂತೆ ಬಜೆಟ್ನಲ್ಲಿ ರೂ.1000 ಗೌರವ ಧನ ಹೆಚ್ಚಳ ಮಾಡಬೇಕು. ಆಶಾಗಳನ್ನು ಹಾಗೂ ಸುಗಮಕಾರರನ್ನು ಕೆಲಸದಿಂದ ಕೈಬಿಡುವ ಕ್ರಮಗಳನ್ನು ಹಿಂಪಡೆಯಬೇಕು. ಈ ಬೇಡಿಕೆಗಳಿಗಾಗಿ ಆಗ್ರಹಿಸಿ, ದಿನಾಂಕ ಆಗಸ್ಟ್ 12, 13, 14, 2025 ರಂದು ರಾಜ್ಯವ್ಯಾಪಿಯಾಗಿ ಜಿಲ್ಲಾ ಕೇಂದ್ರಗಳಲ್ಲಿ ಆಶಾಗಳು ಮುಷ್ಕರ ಹೂಡಿ ಪ್ರತಿಭಟನಾ ಧರಣಿಯನ್ನು ಕೈಗೊಳ್ಳುತ್ತಾರೆ. ಎಲ್ಲಾ ಸಾಮಾಜಿಕ ಕಳಕಳಿಯುಳ್ಳ ಜನತೆ, ಆಶಾ ಕಾರ್ಯಕರ್ತೆಯರ ಈ ನ್ಯಾಯೋಚಿತ ಹೋರಾಟವನ್ನು ಎಂದಿನಂತೆಯೇ ಬೆಂಬಲಿಸಿ, ರಾಜ್ಯ ಸರ್ಕಾರವು ಆಶಾಗಳ ಬೇಡಿಕೆಗಳನ್ನು ಈ ಕೂಡಲೇ ಬಗೆಹರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಶಾಗಳ ಸಂಘವು ಮನವಿ ಮಾಡುತ್ತದೆ. ಹಾಗೆಯೇ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಎಂದಿನಂತೆಯೇ ತಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು, ಹೋರಾಟದ ಯಶಸ್ಸಿಗೆ ಮುಂದಾಗಬೇಕೆಂದು ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಈ ಮೂಲಕ ಕರೆ ನೀಡುತ್ತದೆ.ಗದಗ ಪ್ರತಿಭಟನೆ ಹಮ್ಮಿಕೊಳ್ಳಟಿದರು.
ವಿವಿಧ ಬೇಡಿಕೆ
1. ಮುಖ್ಯಮಂತ್ರಿಗಳು ಘೋಷಿಸಿದ – ರಾಜ್ಯದ ಗೌರವಧನ & ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ – ಮಾಸಿಕ ಕನಿಷ್ಟ ರೂ.10,000 ಗೌರವ ಧನ ಈ ಏಪ್ರಿಲ್ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿ.
2 .2025 ಮಾರ್ಚ್ ಬಜೆಟ್ ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.1,000 ಪ್ರೋತ್ಪಾಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡಿ.
3.ಜನಸಂಖ್ಯೆ ಹೆಚ್ಚಿಸಿ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು.
4.ಅವೈಜ್ಞಾನಿಕ ಆಶಾ ಪರ್ಫಾಮೆನ್ಸ್ ಅಪ್ರೈಸಲ್ ಕೈಬಿಡಿ!
5.ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಿ.
6.ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಿ.
7.2025ರಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಆಶಾ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಿ. ಇನ್ನಿತರ ಬೇಡಿಕೆಗಳು.