Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಸಮಾನತೆ, ಶಾಂತಿ ಹಾಗೂ ನ್ಯಾಯದ ಹರಿಕಾರ ಪೈಗಂಬರ ಮೊಹಮ್ಮದ (ಸ) ರವರ ವಿಶೇಷ ಲೇಖನ ಡಾ|| ಎಚ್. ಎಮ್. ಅತ್ತಾರ

ಕರುನಾಡು ಘರ್ಜನೆ ಸುದ್ದಿ ಗದಗ: ‘ಈದ ಮಿಲಾದ’ ಮುಸ್ಲಿಂ ಭಾಂಧವರು ಆಚರಿಸುವ ಮಹತ್ವದ ಹಬ್ಬ ‘ರಮಝಾನ’ ‘ಬಕುವ’ ಹಬ್ಬದಂತೆ ಈದ ಮಿಲಾದ ಹಬ್ಬವು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವು ನೂರಾರು ವರ್ಷಗಳಿಂದ ಆಚರಿಸುತ್ತ ಬಂದಿದ್ದಾರೆ. ಈದ ಮಿಲಾದ ಆರ್ಥಾತ್ ಪ್ರವಾದಿ…

ಕರುನಾಡು ಘರ್ಜನೆ ಸುದ್ದಿ ಗದಗ: ‘ಈದ ಮಿಲಾದ’ ಮುಸ್ಲಿಂ ಭಾಂಧವರು ಆಚರಿಸುವ ಮಹತ್ವದ ಹಬ್ಬ ‘ರಮಝಾನ’ ‘ಬಕುವ’ ಹಬ್ಬದಂತೆ ಈದ ಮಿಲಾದ ಹಬ್ಬವು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವು ನೂರಾರು ವರ್ಷಗಳಿಂದ ಆಚರಿಸುತ್ತ ಬಂದಿದ್ದಾರೆ. ಈದ ಮಿಲಾದ ಆರ್ಥಾತ್ ಪ್ರವಾದಿ ಮಹಮ್ಮದ ಸ್ಥಲಲ್ಲಾ ಅಲೈಹುದಸ್ಥಲಂ ಅವರ ಹುಟ್ಟು ಹಬ್ಬ ಈದ ಮಿಲಾದ విEX అనేక రావడానికి శాయశ్రమగళన్ని విల్లడికి వృగంబరర పావాస ఆరిశ్రయ బగ్గ్న మత్తు ಇಸ್ಲಾಂ ಧರ್ಮದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ ಹೇಳುತ್ತಾರೆ.

 

ಪ್ರವಾದಿ ಮಹಮ್ಮದ ಸ್ವಲಲ್ಲಾ ಅಹುವಸ್ಥಲಂ ಅವರು ಸನ್ 569 ನೇ ಇಸವಿ ನವಂಬರ ತಿಂಗಳ ಹನ್ನೊಂದನೇಯ ತಾರೀಖಿನಂದು ಸೋಮವಾರ ದಿವಸ ಮಕ್ಕಾ ನಗರದಲ್ಲಿ ಜನ್ಮವೆತ್ತಿದರು. ಪ್ರವಾದಿ ಮಹಮ್ಮದ ಸ್ವಲಲ್ಲಾ ಅಬ್ಬಿಹುವಸ್ವಲಂ ಅವರ ತಂದೆಯ ಹೆಸರು ಅಬ್ದುಲ್ಲಾ ಮತ್ತು ತಾಯಿಯ ಹೆಸರು ಹಬ್ರತ ಆಮಿನಾ ಎಂದು ಇತ್ತು. ಪ್ರವಾದಿಗಳು ಹುಟ್ಟುವದಕ್ಕಿಂತ ಮೊದಲೇ ತಂದೆಯಾದ ಅಬ್ದುಲ್ಲಾಹ ಸ್ವರ್ಗಸ್ಥರಾಗಿದ್ದರು. ಪ್ರವಾದಿಗಳ ತಂದೆಯವರ ಸ್ವರ್ಗಸ್ಥದ ನಂತರ ಪಿತಾಮಹ ಅಬ್ದುಲ ಮುತ್ತಲಿಖ ಅವರ ಪೋಷಣೆಯಲ್ಲಿ ಪ್ರವಾದಿಗಳು ಬೆಳೆದರು. ಕೆಲವರ್ಷಗಳ ನಂತರ ಅಬ್ದುಲ ಮುತಲಿಖರು ಕೂಡಾ ಸ್ವರ್ಗವಾಸಿಯಾದರು. ನಂತರ ಚಿಕ್ಕಪ್ಪ ಅಬುತಾಜ ಅವರು ಪ್ರವಾದಿಗಳನ್ನು ಸಾಕಿದರು. ಪ್ರವಾದಿಗಳ ವಂಶಕ್ಕೆ ‘ಕೊರೈತ’ ಎಂಬ ಹೆಸರಿತ್ತು. ಅರಬ್ ದೇಶದಲ್ಲಿ ಈ ವಂಶಕ್ಕೆ ತುಂಬಾ ಗೌರವದಿಂದಾ ಕಾಣುತ್ತಿದ್ದರು. ಅಲ್ಲದೆ ಅದು ಅಲ್ಲಿಯ ಬಹುಮುಖ್ಯ ಬುಡಕಟ್ಟಾಗಿತ್ತು.

 

ಮಾತೆ ಹಜ್ರತೆ ಅಮಿನಾರದರು ಕೆಲವರ್ಷ ಪ್ರವಾದಿಗಳನ್ನು ಸಾಕಿದರು. ನಂತರ ಆ ಕಾಲದ ರೀತಿಯ ಪ್ರಕಾರ ಹಳ್ಳಿಯಲ್ಲಿ ಇದ್ದ ಹಲೀಮಾ ಸಾದಿಯಾ ಅವರಿಗೆ ಮಹಮ್ಮದ ಸ್ವಲಲ್ಲಾ ಅಲೈಹುವ ಲಂ ಅವರನ್ನು ಒಪ್ಪಿಸಲಾಯಿತು. ಅವರ ಪಾಲನೆ ಪೋಷಣೆಯಲ್ಲಿ ಮತ್ತು ಹಳ್ಳಿಯ ಸ್ವಚ್ಛ ವಾತಾವರಣದಲ್ಲಿ ಪ್ರವಾದಿಗಳು ಬೆಳೆಯಲಾರಂಭಿಸಿದರು. ಆಗಿನ ಜರಬ್ ದೇಶದಲ್ಲಿ ನಗರದ ಭಾಷೆಗಿಂತ ಹಳ್ಳಿಗಳ ಭಾಷೆಯೇ ಶುದ್ದಭಾಷೆಯೆಂದು ಪರಿಗಣಿಸಲಾಗುತ್ತಿತ್ತು ಪ್ರವಾದಿಗಳು ಹಳ್ಳಿಯಲ್ಲಿ ಆರು ವರ್ಷಗಳ ಕಾಲ ಇದ್ದು, ನಂತರ ಮಕ್ಕಾ ನಗರಕ್ಕೆ ಬಂದರು. ಪ್ರವಾದಿಗಳು ಬಂದ ಕೆಲವೇ ದಿನಗಳಲ್ಲಿ ಮಾತೆ ಅಮಿನಾ ಅವರು ಸ್ವರ್ಗಸ್ಥರಾದರು ಇದರಿಂದಾಗಿ ಪ್ರವಾದಿ ಮಹಮ್ಮದ ಸ್ವಲಲ್ಲಾ ಅಬ್ಬಿಹುವಸ್ವಲಂ ಸಂಪೂರ್ಣ ಪೋಷಣೆ ಅಬ್ದುಲ ముక్తలిపో ఆదర జాలిగా బందు, స్త్రీవాదిగకు ఎంట వెపు దయనవరాగుజ జింళీగ ఒకాయ రాద అబ్బుల ಮುತ್ತಲಿಖ ಅವರು ಕೂಡಾ ದೈವಾಧಿನರಾದರು. ಆನಂತರ ಚಿಕ್ಕಪ್ಪ ಅಬುತಾಲಿಬ್ ಅವರು ಪ್ರವಾದಿಗಳನ್ನು ನೋಡಿಕೊಳ್ಳಲಾರಂಭಿಸಿದರು.

 

ಪ್ರವಾದಿಗಳು ಯೌವನಾವಸ್ಥೆಯನ್ನು ತಲುಪಿದಾಗ ವ್ಯಾಪಾರ ವೃತ್ತಿಯನ್ನು ಕೈಕೊಂಡರು. ಆ ಕಾಲದಲ್ಲಿ ಅರಬರ ಮುಖ್ಯ ಉದ್ಯೋಗ ವ್ಯಾಪಾರವಾಗಿತ್ತು. ವಿಶೇಷವಾಗಿ ‘ಕೊರೈತ’ ಬುಡಕಟ್ಟಿನವರು ವ್ಯಾಪಾರ ಮಾಡುತ್ತಿದ್ದರು. ಪ್ರವಾದಿಗಳು ವ್ಯವಹಾರದಲ್ಲಿ ತುಂಬಾ ಪ್ರಾಮಾಣಿಕ ಮತ್ತು ಸತ್ಯವಂತರಾಗಿದ್ದರು. ಕೆಲವೆ ದಿನಗಳಲ್ಲಿ ಜನತೆ ಅವರ ಮೇಲೆ ಭರವಸೆ ಇಟ್ಟಿತ್ತು. ಅವರ ಜೊತೆ ಬಂಡವಾಳ ಹೂಡಲು ಮುಂದೆ ಬಂದರು ಮಾತುಕತೆಯಲ್ಲಿ ‘ಸಾವಿಕ್’ ಅರ್ಥಾತ್ ಸತ್ಯವಂತ ಹಾಗೂ ‘ಅಮಿನ್’ ಅರ್ಥಾತ್ ಅಮಾನತ್ತುದಾರ ಎಂಬ ಹೆಸರಿನಿಂದ ಜನರು ಪ್ರವಾದಿಗಳನ್ನು ನೆನೆಯುತ್ತಿದ್ದರು.ಪ್ರವಾದಿಗಳ ಮದುವೆ ಹರತ್ ಖದಿಜಾ ಅವರ ಸಂಗಡವಾಯಿತು. ಆಗ ಪ್ರವಾದಿಗಳಿಗೆ 25 ವರ್ಷ ವಯಸ್ಸಿತ್ತು. ಪ್ರವಾದಿಗಳು ಕೇವಲ ವ್ಯಾಪಾರ ಮತ್ತು ಸಾಂಸಾರಿಕ ಜೀವನಕ್ಕೆ ಹೊಂದಿಕೊಂಡಿರದೆ ಅವರು ಸಾಮೂಹಿಕ ಮತ್ತು ಸಾರ್ವಜನಿಕ ಕಾರ್ಯಗಳಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದರು, ಆಗಿನ ಕಾಲದಲ್ಲಿ ಆರಬ್ ದೇಶದ ಬುಡಕಟ್ಟುಗಳಲ್ಲಿ ಪ್ರತಿನಿತ್ಯ ಕಲಹಗಳು ನಡೆಯುತಿತ್ತು ಈ ಕಲಹ ಮತ್ತು ಗೃಹ ಯುದ್ಧದಿಂದ ತುಂಬಾ ವ್ಯಾಕುಲಗೊಂಡಿದ್ದರು. ಇದನ್ನು ತಡೆಗಟ್ಟಲು ಶಾಂತಿಯನ್ನು ಕಾಪಾಡಲು ಕೆಲವು ಸಜ್ಜನರು ಪರಸ್ಪರ ಬುಡಕಟ್ಟುಗಳಲ್ಲಿ ಸಂಧಿಯನ್ನು ಮೂಡಿಸಿದರು. ಶಾಂತಿ ಸ್ಥಾಪಿಸುವದೇ ಆ ಸಂಧಿಯ ಮುಖ್ಯ ಉದ್ದೇಶವಾಗಿತ್ತು. ಇಂಥ ರಚನಾತ್ಮಕ ಕಾರ್ಯದಲ್ಲಿ ಪ್ರವಾದಿ ಮಹಮ್ಮದ ಸ್ವಲಲ್ಲಾ ಅಹುವಲಂ ಇದ್ದರು.

 

ಪ್ರವಾದಿಗಳು ನ್ಯಾಯ ನಿರ್ಣಯಗಳನ್ನು ಕೂಡಾ ತುಂಬಾ ಚಾಣಕ್ಯತನದಿಂದ ಕೊಡುತ್ತಿದ್ದರು. ಒಂದು ಸಲ ಮಕ್ಕಾದಲ್ಲಿ ಅತಿವೃಷ್ಠಿಯಾಯಿತು. ಇದರಿಂದ ಪವಿತ್ರ ಕಾಬಾಕ್ಕೆ ಹಾನಿಯಾಯಿತು. ಎಲ್ಲ ಬುಡಕಟ್ಟಿನ ಜನರು ಸೇರಿ ಇದನ್ನು ಮತ್ತೊಮ್ಮೆ ಭದ್ರವಾಗಿ ಕಟ್ಟಿಸಿದರು. ಆದರೆ ‘ಹಜರೆ ಅಸ್ಪದೆ ಅದರ ಸ್ಥಾನದಲ್ಲಿಡುವ ಪ್ರಶ್ನೆ ಬಂದಿತು. ಪ್ರತಿಯೊಂದು. ಬುಡಕಟ್ಟಿನವರು ಈ ಪವಿತ್ರ ಕಾರ್ಯ ನಾನು ಮಾಡುವೆಯೆಂದು ಮುಂದೆ ಬಂದರು. ಹೀಗೆ ಕಲಹ ಪ್ರಾರಂಭವಾಯಿತು. ಇದರಿಂದ ಬಹಳ ದಿನಗಳವರೆಗೆ ಈ ಮಾತಿನ ನಿರ್ಣಯವಾಗಿಲ್ಲ ಕೊನೆಗೆ ‘ನಾಳೆಯ ದಿನ ಬೆಳಿಗ್ಗೆ ಯಾವ ವ್ಯಕ್ತಿ ಮೊಟ್ಟ ಮೊದಲು ಬರುವನೋ ಅವನಿಂದ ಈ ಸಮಸ್ಯೆಯ ನಿರ್ಣಯ ಮಾಡಿಕೊಳ್ಳೋಣ ಎಂದು ನಿರ್ಧರಿಸಿದರು. ಅಲ್ಲಾಹನ ಕೃಪೆಯಿಂದ ಅಂದಿನ ದಿನ ಮೊಟ್ಟಮೊದಲು ಬಂದ ವ್ಯಕ್ತಿ ಪ್ರವಾದಿ ಮಹಮ್ಮದ ಸ್ವಲಲ್ಲಾ ಆಲೈಸುವಸ್ಥಲಂ ಆಗಿದ್ದರು. ಈ ಜಗಳವನ್ನು ನಿರ್ಣಯಿಸಲು ಪ್ರವಾದಿಗಳು ಒಂದು ಉಪಾಯವನ್ನು ಮಾಡಿದರು. ಒಂದು ಬಟ್ಟೆಯನ್ನು ಹಾಸಿ ಅದರ ಮೇಲೆ ‘ಹಿಜರೆ ಅಸ್ಟದ್’ ಅನ್ನು ಇಟ್ಟರು. ಅದನ್ನು ಎತ್ತಲು ಎಲ್ಲ ಬುಡಕಟ್ಟಿನ ಸರದಾರರನ್ನು ಕರೆದರು ಎಲ್ಲರು ಬಟ್ಟೆಯ ಒಂದೊಂದು ಕೊನವನ್ನು ಹಿಡಿದು ಎತ್ತಿ ನಿಶ್ಚಿತ ಸ್ಥಾನಕ್ಕೆ ತಂದಾಗ ಪ್ರವಾದಿ ಮಹಮ್ಮದಸ್ವಲಲ್ಲಾ ಅಹುವಸ್ಸಲಂ ಅವರು ತಮ್ಮ ಕೈಯಿಂದ ಅದನ್ನು ಎತ್ತಿ ಇಟ್ಟು ಇಂದಿನವರೆಗೆ ಈ ಕಲ್ಲು ಇದ್ದು. ಇದು ಇತಿಹಾಸ ಪ್ರಸಿದ್ಧವಾಗಿದೆ.

 

ದೇಶವಾಸಿಗಳು ಮಾಡುತ್ತಿದ್ದ ದಂಗೆ ಮೊಸಗಳಿಂದ ಪ್ರವಾದಿಯವರ ಮನಸ್ಸು ತುಂಬಾ ಭಿನ್ನವಾಗಿರುತ್ತಿತ್ತು. ಯಾದ ರೀತಿಯಿಂದ ಜನರನ್ನು ಕೊ ಮಾರ್ಗದಿಂದ ಕೋರಿತಿಗಳಿಂದ ಕಾಪಾಡಬೇಕು ಎಂದು ಮಹಮ್ಮದ ಸ್ವಲಲ್ಲಾ ಅಯದಲಂ ಅವರು ಯೋಚಿಸುತ್ತಿದ್ದರು. ಸಮಯ ಸಿಕ್ಕಿದಾಗ ಒಬ್ಬರೆ ಏಕಾಂತದಲ್ಲಿ ಕುಳಿತು ಒಬ್ಬ ಅಲ್ಲಾಹನ ಧ್ಯಾನಮಾಡುತ್ತಿದ್ದರು. ಮಕ್ಕಾದಿಂದ ಮೂರು ಮೈಲ ದೂರದಲ್ಲಿ ‘ಹೀರಾ’ ಎಂಬ ಗುಹೆ ಇದೆ. ಇದು ಪ್ರವಾದಿಗಳು ದೇವನ ಧ್ಯಾನಕ್ಕಾಗಿ ಕುಳಿತುಕೊಳ್ಳುತ್ತಿದ್ದ ಜಾಗ. ಕೆಲವು ವೇಳೆ ಎಷ್ಟೋ ದಿನಗಳವರೆಗೆ ಅವರು ಹೀರಾ ಗುಹೆಯಲ್ಲಿ ಧ್ಯಾನ ಮಗ್ನರಾಗಿರುತ್ತಿದ್ದರು. ಒಂದು ಸಲ ‘ರಂಝಾನ’ ತಿಂಗಳು ಧ್ಯಾನದಲ್ಲಿ ಕುಳಿತಿದ್ದಾಗ ಒಂದು ಆಕೃತಿಯನ್ನು ಕಂಡರು ಅದು ಪ್ರವಾದಿಯವರಿಗೆ ನಾನು ಅಲ್ಲಾಹನಿಂದ ಕಳುಹಿಸಲ್ಪಟ್ಟಿರುವ ‘ದೇವದೂತ’ ಎಂದು ಇದನ್ನು ಓದಿರಿ ಎಂಬ ವಾಣಿ ಕೆಳಿಸಿತು. ಪ್ರವಾದಿಗಳು ನನಗೆ ಓದಲು ಬರುವುದಿಲ್ಲವೆಂದರು. ಆ ದೇವದೂತನು ಓದಿರಿ ಯಾರು ಹೆಪ್ಪುಗಟ್ಟಿದ ರಕ್ತದಿಂದ ಮನುಷ್ಯನನ್ನು ಸೃಷ್ಟಿಸಿದನೋ ಆ ನಿಮ್ಮ ಒಡೆಯನ ಹೆಸರಲ್ಲಿ ಓದಿರಿ ನಿಮ್ಮ ಒಡೆಯನು ಮಹಿಮಾವಂತನು ಮನುಷ್ಯನಿಗೆ ಲೇಖನಿಯ ಮುಖೇನ ಅವನು ತಿಳಿಯದೆ ಇರುವದನ್ನು ತಿಳಿಸಿದವರು ಎಂದು ಹೇಳಿದನು. ಇದು ಪ್ರವಾದಿಗಳ ಮೇಲೆ ಅವತೀರ್ಣವಾದ ಮೊಟ್ಟ ಮೊದಲನೆಯ ದೇವವಾಣಿ ಆರು ತಿಂಗಳ ನಂತರ ಎರಡನೆಯ ವದ್ಯೆ ಅವತೀರ್ಣವಾಯಿತು. ಕಂಬಳಿ ಹೊದಿಸಿ ಕೊಂಡವರೆ ಎಳಿ: ಜನರನ್ನು ಕುಮಾರ್ಗದ ಪರಿಣಾಮಗಳಿಂದ ಭಯಪಡಿಸಿ ನಿಮ್ಮ ಒಡೆಯನ ಮಹಾನತೆಯನ್ನು ವರ್ಣಿಸಿ ನಿಮ್ಮ ವಸ್ತ್ರಗಳನ್ನು ಶುದ್ದಗೊಳಿಸಿ ಅಶುದ್ದಿಯಿಂದ ದೂರ ಇರಿ. ಹೆಚ್ಚು ಪಡೆಯುವ ಮನಸ್ಸಿನಿಂದ ಯಾರೊಡನೆಯೂ ಉಪಕಾರ ಮಾಡಬೇಡಿ: ಒಡೆಯನ ವಿಷಯದಲ್ಲಿ ತಾಳ್ಮೆಯಿಂದ ಕೆಲಸಮಾಡಿರಿ. ಈ ರೀತಿ ಮಹಮ್ಮದ ಸ್ವಲಲ್ಲಾ ಅಹುವಸ್ಥಲಂ ಅವರು ಸಂದೇಶವಾಹಕತ್ವದ ಕಾರ್ಯಕ್ಕಾಗಿ ನೇಮಕವಾದರು.

 

ಅಂದಿನಿಂದ ಪ್ರವಾದಿ ಮಹಮ್ಮದ ಸ್ವಲಲ್ಲಾ ಅಲೈಹುವಸ್ವಲಂ ಇಸ್ಲಾಮ ಧರ್ಮದ ಪ್ರಚಾರವನ್ನು ಪ್ರಾರಂಭಿಸಿದರು. ಮೊದಲು ಮಕ್ಕಾದಲ್ಲಿ ಆನಂತರ ಮದಿನಾದಲ್ಲಿ ಇಸ್ಲಾಂ ಧರ್ಮದ ಪ್ರಚಾರ ನಡೆಯಿತು. ಮಕ್ಕಾದಲ್ಲಿ ನಡೆದ ಪ್ರಚಾರ ಪರಿಣಾಮಗಳ ದೃಷ್ಟಿಯಿಂದ ತುಂಬಾ ಮಹತ್ವ ಪೂರ್ಣವಾದದ್ದು. ಮೊದಲನೆಯ ಮೂರು ವರ್ಷಗಳ ವರೆಗೆ ಪ್ರವಾದಿಗಳು ತಮ್ಮ ಸಂಬಂಧಿಕರು, ಪರಿವಾರದವರು ಹಾಗೂ ಮಿತ್ರರಿಗೆ ಇಸ್ಲಾಮನ ತೀಕ್ಷಣ ಕೊಟ್ಟರು ಮೊಟ್ಟ ಮೊದಲು ಇಸ್ಲಾಮ ಧರ್ಮವನ್ನು ಒಪ್ಪಿ “ಈಮಾನ ತಂದವರು ಹಜ್ರತ ಖದೀಜಾ (ರ) ಇವರಾದ ಮೇಲೆ ನವ ಯುವಕರಲ್ಲಿ ಹಜ್ರತ ಅಲಿ (ರ) ವಯೋವೃದ್ಧರಲ್ಲಿ ಹಜ್ರತ ಅಬೂಬಕರ ಸಿದ್ದೀಕ್ (ರ) ಮತ್ತು ಸೇವಕರಲ್ಲಿ ಹಜ್ರತ ಪೈದ ಬಿನ್ ಹಾರಿಕಾ (ರ) ಈಮಾನ ತಂದರು. ಇದರ ನಂತರ ಪ್ರವಾದಿ ಮಹಮ್ಮದ ಸ್ವಲಲ್ಲಾ ಅಲೈಹುವಸ್ಥಲಂ ಅವರು ಬಹಿರಂಗವಾಗಿ ಒಬ್ಬ ದೇವನ ವಾಸ್ಯ ಸ್ವೀಕರಿಸಲು ಹಾಗೂ ಅನ್ಯ ಶಕ್ತಿಗಳ ಉಪಾಸನೆಯನ್ನು ನಿರಾಕರಿಸಲು ಜನರನ್ನು ಆವ್ಹಾನಿಸಿದರು.

 

ಐದಿನಾದಲ್ಲಿಯು ಕೂಡಾ ಬಹಳ ಜನರು ಇಸ್ಲಾಂ ಧರಮವನ್ನು ಸ್ವೀಕರಿಸಿ ‘ಈಮಾನ’ ತರಹತ್ತಿದ್ದರು. ಕೆಲ ಜನರು ಮನೆ ಮನೆಗೆ ಹೋಗಿ ಇಸ್ಲಾಂನ ಆದೇಶ ಮತ್ತು ಪ್ರವಾದಿ ಮಹಮ್ಮದ ಸ್ವಲಲ್ಲಾ ಅಹುವಸ್ವಲಂ ಅವರ ಸಂದೇಶವನ್ನು ತಿಳಿಸಲು ಪ್ರಾರಂಭಿಸಿದವರಲ್ಲದೆ ಪವಿತ್ರ ಕೂರಾನದ ಪಕಣವನ್ನು ಕೂಡ ಜನರು ಮಾಡಹತ್ತಿದರು. ಇದೇ ಸಮಯದಲ್ಲಿ ಅನೇಕ ಜನರು ಪ್ರವಾದಿಗಳನ್ನು ಭೇಟಿಯಾಗಿ ಮುಸಲ್ಮಾನರಾದರು. ಅವರು ಎಂತಹದೇ ಸ್ಥಿತಿ ಬಂದರೂ ಸಹಾಯ ಮಾಡುತ್ತೇವೆಂದು ವಚನ ಕೊಟ್ಟರಲ್ಲದೇ ಈ ಆರು ಮಾತುಗಳ ಬಗ್ಗೆ ವಚನ ವಿತ್ತರು.

1. ಅಲ್ಲಾಹನನ್ನು ಬಿಟ್ಟು ಬೇರೆಯಾರ ವಾಸ್ಯವನ್ನು ಸ್ವೀಕರಿಸದಿರುವುದು.

2. ಕಳ್ಳತನ ಮಾಡವಿರುವುದು

3. ವ್ಯಭಿಚಾರ ಮಾಡವಿರುವುದು

4. ತಮ್ಮ ಮಕ್ಕಳನ್ನು ಕೊಲ್ಲದೆ ಇರುವದು

5. ಯಾರ ಮೇಲೂ ಸುಳ್ಳು ಆರೋಪಣೆ ಹೊರಸದಿರುವದು ಮತ್ತು ಯಾರ ಬೆನ್ನ ಹಿಂದೆಯೂ ಕೆಡಕನ್ನು ಬಗೆಯದಿರುವದು.

6. ಪ್ರವಾದಿ ಮಹ್ಮದ ಸ್ವಲಲ್ಲಾ ಅಹುವಸ್ಥಲಂ ಅವರು ಹೇಳಿದ ಒಳ್ಳೆಯ ಮಾತನ್ನು ಭಂಗ ಮಾಡವಿರುವುದು.

“ಹಿಜ್ರತ ನ ಹತ್ತನೆಯ ವರ್ಷ ಪ್ರವಾದಿಗಳು” ಹಚ್ ಮಾಡುವ ಅಭಿಲಾಷೆ ವ್ಯಕ್ತಪಡಿಸಿದರು. ಇದು ಅವರ ಕೊನೆಯ ಹಜ್ ಆಗಿತ್ತು. ಪ್ರವಾದಿಗಳೊಡನೆ ಹಡ್ ಮಾಡುವ ಸೌಭಾಗ್ಯ ದೊರಕಿದ್ದಕ್ಕೆ ಸಂತೋಷಪಟ್ಟು ಇಡೀ ಅರಬ್ ನ ಜನರು ಬಂದಿದ್ದರು. ಇದೇ ಸಂದರ್ಭದಲ್ಲಿ ಜಿಲಹಿದ್ದಾ ತಿಂಗಳ 9 ನೆಯ ತಾರೀಖಿನಂದ ‘ಆರಘಾತ’ ಮೈದಾನದಲ್ಲಿ ಪ್ರವಾದಿಗಳು ಭಾಷಣ ಮಾಡಿದರು. ಇದು ತುಂಬಾ ಮಹತ್ವಪೂರ್ಣವಾದ ಭಾಷಣವಾಗಿತ್ತು. ಈ ಭಾಷಣದಲ್ಲಿ ಹೇಳಿದ ಎಷ್ಟೋ ಮಾತುಗಳು ಇಂದು ಕೂಡಾ ಹದೀಸ್ ಪುಸ್ತಕಗಳಲ್ಲಿ ಸಿಕ್ಕುತ್ತವೆ. ಅವುಗಳಲ್ಲಿನ ಕೆಲವು ಮುಖ್ಯ ಮಾತುಗಳು ಯಾವುವೆಂದರೆ-ಅರಬರಿಗೆ ಅರಬೇತರರ ಮೇಲೆ ಮತ್ತು ಅರಬೇತರರಿಗೆ ಅರಬರ ಮೇಲೆ ಯಾವ ರೀತಿಯ ದೊಡ್ಡಸ್ತಿಕೆಯು ಇಲ್ಲಾ ನೀವೆಲ್ಲರೂ ಅದಮನ ಮಕ್ಕಳು ಮತ್ತು ಆದಮರ ಮಣ್ಣಿನಿಂದ ಸೃಷ್ಟಿಸಲ್ಪಟ್ಟಿರುವರು.

ಮುಸಲ್ಮಾನರು ಪರಸ್ಪರ ಸಹೋದರರು

ನಿಮ್ಮ ಗುಲಾಮರಿಗೆ ನೀವು ತಿಂದದ್ದನ್ನು ತಿನ್ನಿಸಿ ನೀವು ಉಡುವುದನ್ನು ಉಡಿಸಿ

 

ಆಜ್ಞಾನ ಕಾಲದಲ್ಲಾದ ಎಲ್ಲ ರಕ್ತಪಾತಗಳನ್ನು ಮರೆತು ಬಿಡಿ ಯಾರೂ ಹಳೆಯ ರಕ್ತಪಾತಗಳ ಸೇಡು ತೀರಿಸಿಕೊಳ್ಳಲು ಪ್ರಯತ್ನಮಾಡಬಾರದು. ಮೊಟ್ಟಮೊದಲು ನಾನು ನನ್ನ ವಂಶದ ಸೇಡನ್ನು ರದ್ದು ಮಾಡುತ್ತೇನೆ.

 

ಅಜ್ಞಾನ ಕಾಲದ ಬಡ್ಡಿಯನ್ನು ರದ್ದು ಮಾಡಿ ನಾನು ನನ್ನ ವಂತದ ಬಡ್ಡಿಯನ್ನು ರದ್ದುಗೊಳಿಸುತ್ತೇನೆ.

 

ಸ್ತ್ರೀಯರ ಬಗ್ಗೆ ಅಲ್ಲಾಹನ ಭಯವಿಡಿರಿ ಸ್ತ್ರೀಯರ ಹಕ್ಕು ನಿಮ್ಮ ಮೇಲೆ ಹಾಗೂ ನಿಮ್ಮ ಹಕ್ಕು ಸ್ತ್ರೀಯರ ಮೇಲಿದೆ. “ನಾನು ನಿಮ್ಮ ಮಧ್ಯ ಒಂದು ವಸ್ತುವನ್ನು ಬಿಟ್ಟುಹೋಗುತ್ತೇವೆ ಅದನ್ನು ಭದ್ರವಾಗಿ ಹಿಡಿದರೆ ನೀವು ಪತನಗೊಳ್ಳುವವಿಲ್ಲಾ ಅದು ಅಲ್ಲಾಹನ ದಿವ್ಯಗ್ರಂಥ

 

ಕೊನೆಯಲ್ಲಿ ಜನಸಮೂಹವನ್ನು ಉದ್ದೇಶಿಸಿ ಅಲ್ಲಾಹನ ಬಳಿ ನನ್ನ ಬಗ್ಗೆ ಪ್ರಶ್ನಿಸಲಾದರೆ ನೀವು ಏನು ಉತ್ತರ ಕೊಡುವಿರಿ? ಎಂದು ಕೇಳಿದರು ಆಗ ಜನರು “ಅಲ್ಲಾಹನ ಸಂದೇಶ ತಾವು ನಮ್ಮವರೆಗೆ ತಲುಪಿಸಿದ್ದೀರಿ ಹಾಗೂ ತಮ್ಮ ಕರ್ತವ್ಯವನ್ನು ಪೂರೈಸಿದ್ದೀರಿ ಎಂದು ಹೇಳುತ್ತೇವೆ ಎಂದರು ಪ್ರವಾದಿ ಮಹಮ್ಮದ (ಸ್ಥಲಲ್ಲಾ ಅಥ್ಲೆಯವಸ್ಥಲಂ) ಆಕಾಶದ ಕಡೆಗೆ ಬೆರಳೆತ್ತಿ ಓ ಅಲ್ಲಾಹಃ ನೀನು ಸಾಕ್ಷಿಯಾಗಿರು ಎಂದು ನುಡಿದರು.

 

11 ನೇ ಏಜರಿಯ 19ನೇ ತಾರೀಖು ಸಥರ ತಿಂಗಳಲ್ಲಿ ಪ್ರವಾದಿ ಅವರ ಆರೋಗ್ಯ ಸ್ಥಿತಿ ಕೆಟ್ಟಿತು. ಒಂದು ತಿಂಗಳವರೆಗೆ ಅದರ ಆರೋಗ್ಯ ಸ್ಥಿತಿ ಹೀಗೆಯೇ ಇತ್ತು. ಕೆಲವೊಮ್ಮೆ ಸುಧಾರಿಸಿದರೆ ಮಗದೊಮ್ಮೆ ಕೆಡುತಿತ್ತು. ಕೊನೆಗೆ ಸನ್ 11ನೇ ಹಿಜರಿ ರಬಿಉಲ್ ಅವಲ್ ತಿಂಗಳ 12 ನೇ ತಾರೀಖಿನಂದು ಪ್ರವಾದಿ ಮಹಮ್ಮದ ಸ್ವಲಲ್ಲಾ ಆಲೈಹುವಲಂ ರ ಸ್ವರ್ಗವಾಸವಾಯಿತು. ಪ್ರವಾದಿ ಮಹಮ್ಮದ ಸ್ವಲಲ್ಲಾ ಅಗ್ನಿಹುವಸ್ಥಲಂ ಅವರು ಸ್ವರ್ಗವಾಸ ಹೊಂದಿದ ವೇಳೆಗೆ ಸಂಪೂರ್ಣ ಕುರಾನ ಲಿಪಿಬದ್ದವಾಗಿ ಅಲ್ಲದೆ ಎಷ್ಟೋ ಮುಸಲ್ಮಾನರಿಗೆ ಅದು ಕಂತಸ್ಥವಾಗಿತ್ತು.

ನಿವೃತ್ತ ಪ್ರಾಧ್ಯಾಪಕರು, ಲೇಖಕರು 

ಡಾ|| ಎಚ್. ಎಮ್. ಅತ್ತಾರ

9449316827

 

ಸುದ್ದಿ ಸಂಪಾದಕರು : ಶೌಕತ ಎಮ್.ಕಾತರಕಿ

Editor

Leave a comment